ಅಂಬಿ ಪ್ರೀತಿ-ಆದರ್ಶಗಳು ನಮ್ಮನ್ನು ಕಾಯುತ್ತಿರುತ್ತದೆ: ನಟ ದರ್ಶನ್ - undefined
ಕನ್ನಡ ಚಿತ್ರರಂಗದ ಭೀಷ್ಮ ಅಂಬರೀಶ್ ಬದುಕಿದ್ದರೆ ಇಂದು 67 ನೇ ಜನ್ಮದಿನ ಆಚರಿಸಿಕೊಳ್ಳುತ್ತಿದ್ದರು. ಆದರೆ, ಆರು ತಿಂಗಳ ಹಿಂದೆ ಅವರು ಅಗಲಿದ್ದಾರೆ. ಅವರ ಅನುಪಸ್ಥಿತಿಯಲ್ಲೇ ಜನ್ಮದಿನವನ್ನು ಅಭಿಮಾನಿಗಳು ಆಚರಿಸುತ್ತಿದ್ದಾರೆ.
ನಟ ದರ್ಶನ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಂಬಿ ಅಪ್ಪಾಜಿ ಜನ್ಮದಿನಕ್ಕೆ ಶುಭಾಶಯ ಕೋರಿದ್ದಾರೆ. ಇಂದು ನಲ್ಮೆಯ ಮಂಡ್ಯದ ಗಂಡು ಅಂಬಿ ಅಪ್ಪಾಜಿ ಅವರ ಹುಟ್ಟುಹಬ್ಬ. ಅವರು ದೈಹಿಕವಾಗಿ ನಮ್ಮನ್ನು ಅಗಲಿದರೂ ಸಹ ಮಾನಸಿಕವಾಗಿ, ಹುಮ್ಮಸ್ಸಿನ ಚಿಲುಮೆಯಾಗಿ ಸದಾ ನಮ್ಮೊಂದಿಗೆ ಜೀವಂತವಾಗಿರುತ್ತಾರೆ. ಅವರ ಪ್ರೀತಿ-ಆದರ್ಶಗಳು ಸದಾ ಅವರ ಕುಟುಂಬ ಹಾಗೂ ಅಭಿಮಾನಿಗಳನ್ನು ಕಾಯುತ್ತಿರುತ್ತದೆ ಎಂದು ಟ್ವಿಟ್ಟರ್ನಲ್ಲಿ ವಿಶ್ ಮಾಡಿದ್ದಾರೆ.