ಕರ್ನಾಟಕ

karnataka

ETV Bharat / sitara

ವಿದ್ಯಾರ್ಥಿನಿ ಸಾವಿನ ತನಿಖೆಗೆ ದಚ್ಚು ಒತ್ತಾಯ... ಸೈಲೆಂಟಿರುವ ಬೆಂಗಳೂರಿಗರ ವಿರುದ್ಧ ಹರಿಹಾಯ್ದ ಭಟ್ಟರು - undefined

ರಾಯಚೂರು ವಿದ್ಯಾರ್ಥಿನಿ ಅನುಮಾನಾಸ್ಪದ ಸಾವಿಗೆ ನಟ ದರ್ಶನ್ ನ್ಯಾಯ ಕೇಳಿದ್ದಾರೆ. ಕೃತ್ಯವೆಸಗಿದವರಿಗೆ ಉಗ್ರ ಶಿಕ್ಷೆಯಾಗಬೇಕೆಂದು ಪ್ರತಿಪಾದಿಸಿದ್ದಾರೆ.

ನಟ ದರ್ಶನ್​, ನಿರ್ದೇಶಕ ಯೋಗರಾಜ್ ಭಟ್

By

Published : Apr 20, 2019, 4:46 PM IST

ರಾಯಚೂರಿನಲ್ಲಿ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವಿನ ಪ್ರಕರಣವನ್ನು ಇಡೀ ರಾಜ್ಯವೇ ಖಂಡಿಸುತ್ತಿದೆ. ಮುಗ್ಧ ವಿದ್ಯಾರ್ಥಿನಿಯ ಸಾವಿಗೆ ನ್ಯಾಯ ಕೊಡಿ ಎಂದು ಹಲವು ಸಂಸ್ಥೆಗಳು, ಸಂಘಟನೆಗಳು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿವೆ.

ಈ ಹೋರಾಟಕ್ಕೆ ನಿನ್ನೆಯಷ್ಟೆ ಸ್ಯಾಂಡಲ್​ವುಡ್​ ತಾರೆಯರು ಧ್ವನಿಗೂಡಿಸಿದ್ದರು. ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ. 'ವಿದ್ಯಾರ್ಥಿನಿ ಅನುಮಾನಾಸ್ಪದ ಸಾವಿನ ತನಿಖೆ ಅತೀ ಶೀಘ್ರದಲ್ಲಾಗಬೇಕು. ಅಮಾನುಷ ಕೃತ್ಯ ಎಸಗಿರುವ ಕೀಚಕರಿಗೆ ಕಾನೂನು ಬದ್ಧವಾಗಿ ತಕ್ಕ ಶಾಸ್ತಿಯಾಗಬೇಕು. ಈ ರೇಪ್ & ಮರ್ಡರ್ ಕೃತ್ಯಕ್ಕೆ ಇನ್ನಷ್ಟು ಕಠಿಣವಾದ ಕಾನೂನು ನಮ್ಮ ದೇಶದಲ್ಲಿ ರೂಪುಗೊಳ್ಳಬೇಕೆಂದು ದರ್ಶನ್​ ಟ್ವಿಟರ್​ನಲ್ಲಿ ಒತ್ತಾಯಿಸಿದ್ದಾರೆ.

ಇತ್ತ ನಿರ್ದೇಶಕ ಯೋಗರಾಜ್ ಭಟ್​ ಕೂಡ ತಮ್ಮ ಆಕ್ರೋಶ ಹೊರಹಾಕಿದ್ದು, ವಿದ್ಯಾರ್ಥಿನಿ ಸಾವಿಗೆ ಧ್ವನಿಗೂಡಿಸದವರ ಮೇಲೆ ಅಸಮಾಧಾನ ಹೊರಹಾಕಿದ್ದಾರೆ. ಅಂದು ದೆಹಲಿಯಲ್ಲಿ ಇಂತಹ ಅಮಾನುಷ ಕೃತ್ಯ ನಡೆದಾಗ ಇಡೀ ಭಾರತ ಕೂಗಿತು. ಆದರೆ, ನಮ್ಮ ರಾಜಧಾನಿ ಬೆಂಗಳೂರು ಮಾತ್ರ ಮೊನ್ನೆಯಿಂದಲೂ ಪ್ರತಿಕ್ರಿಯೆ ನೀಡಲು, ಮಾತನಾಡಲು ಮನಸ್ಸು ಮಾಡುತ್ತಿಲ್ಲ. ಹೋಗಲಿ ಏನೋ ವೋಟು ಹಾಕುವ ಕೆಲಸ ಇತ್ತು ಅನ್ನೋದಾದರೆ ಅದನ್ನೂ ಮಾಡಿಲ್ಲ. ಕೇವಲ ಶೇ. 45ರಷ್ಟು ಜನರು ಮಾತ್ರ ಮತ ಹಾಕಿದ್ದಾರೆ. ಬಾಕಿ ಜನರು ದಿವ್ಯ ನಿದ್ದೆಯಲ್ಲಿದ್ದಾರಾ? ಎಂದು ಭಟ್ಟರು ಟ್ವಿಟರ್​ನಲ್ಲಿ ಪ್ರಶ್ನಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details