ಮುಂಬೈ:ಶ್ರೀರಾಮನವಮಿ ಪ್ರಯುಕ್ತ ನಟಿ ಕಂಗನಾ ರಾಣಾವತ್ ತಮ್ಮ ಅಭಿಮಾನಿಗಳಿಗೆ ರಾಮನವಮಿಯ ಶುಭಾಶಯಗಳನ್ನು ತಿಳಿಸಿದ್ದಾರೆ. ಹಾಗೆಯೇ ಶ್ರೀರಾಮನನ್ನು ತಾನು ಏಕೆ ನಾಗರೀಕತೆಯ ಪ್ರಮುಖ ಐಕಾನ್ ಎಂದು ಹೇಳುತ್ತೇನೆ ಎಂಬುದರ ಬಗ್ಗೆಯೂ ಹೇಳಿಕೊಂಡಿದ್ದಾರೆ.
ಟ್ವಿಟರ್ನಲ್ಲಿ ತನ್ನ ಸಹೋದರಿ ರಂಗೋಲಿ ಚಾಂಡೆಲ್ ಹಂಚಿಕೊಂಡ ವಿಡಿಯೊದಲ್ಲಿ ಕಂಗನಾ ತನ್ನ ಅಭಿಮಾನಿಗಳು ಕೇಳಿರುವ ರಾಮನನ್ನು ಈ ಭೂಮಿ ಮೇಲೆ ಜೀವಿಸಿದ ಪ್ರಮುಖ ಮಾನವ ಅಂತ ಏಕೆ ಪರಿಗಣಿಸಲ್ಪಟ್ಟಿದ್ದಾನೆ ಎಂಬ ಪ್ರಶ್ನೆಗೆ, ರಾಮನು ಕೃಷ್ಣನಂತೆ ಅಥವಾ ಸರ್ವವ್ಯಾಪಿ ಶಿವನಂತೆ ಅಲ್ಲ ಎಂದು ಕಂಗನಾ ಉತ್ತರಿಸಿದ್ದಾರೆ.
ರಾಮನ ಬಗ್ಗೆ ಗುಣಗಾನ ಮಾಡಿರುವ ಕಂಗನಾ, ರಾಮ ಒಬ್ಬ ನೀತಿವಂತ, ಅವನು ತನ್ನ ಜೀವಿತಾವಧಿಯಲ್ಲಿ ತ್ಯಾಗ ಎಂದರೆ ಏನು ಎಂಬುದನ್ನು ನಮಗೆ ತಿಳಿಸಿಕೊಟ್ಟಿದ್ದಾನೆ ಎಂದಿದ್ದಾರೆ.
ಇದೇ ವೇಳೆ ತಾವು 19 ನೇ ವಯಸ್ಸಿನಲ್ಲಿಯೇ, ಓ ಲಮ್ಹೇ ಚಿತ್ರದಲ್ಲಿ ಸಿಗರೇಟ್ ಸೇದಿದ ಕಥೆ ಹೇಳಿಕೊಂಡಿದ್ದು, ಆ ಚಿತ್ರದ ಪಾತ್ರಕ್ಕಾಗಿ ಸ್ಮೋಕ್ ಮಾಡಬೇಕಾಯ್ತು. ಅಲ್ಲದೇ ಈಗ ತಾವು ಸಿಗರೇಟ್ ತ್ಯಜಿಸಿರುವುದಾಗಿ ಈ 33 ವರ್ಷದ ಪ್ರತಿಭಾನ್ವಿತ ನಟಿ ಹೇಳಿಕೊಂಡಿದ್ದಾರೆ. ಹಾಗೆಯೇ ತ್ಯಾಗ ಎಂಬ ಪದದ ಕುರಿತು ಹೇಳುವಾಗ ಮಹಾತ್ಮ ಗಾಂಧೀಜಿಯವರ ಬಗ್ಗೆಯೂ ಈ ನಟಿ ಉಲ್ಲೇಖಿಸಿದ್ದಾರೆ. ಅಲ್ಲದೇ ಇವೆಲ್ಲವನ್ನೂ ಹೊರತುಪಡಿಸಿಯೂ ರಾಮ ಅಹಿಂಸಾವಾದಿ. ಹೀಗಾಗಿಯೇ ಆತನನ್ನು ದೊಡ್ಡ ಐಕಾನ್ ಎಂದು ಪರಿಗಣಿಸಲಾಗುತ್ತೆ ಎಂದಿದ್ದಾರೆ ಕಂಗನಾ.