ಮುಂಬೈ:ಮಣಿಕರ್ಣಿಕಾ ರಿಟರ್ನ್ಸ್: ದಿ ಲೆಜೆಂಡ್ ಆಫ್ ದಿಡ್ಡಾ ಎಂಬ ಶೀರ್ಷಿಕೆಯಲ್ಲಿ ಮಣಿಕರ್ಣಿಕಾ ಸಿನಿಮಾದ ಎರಡನೇ ಭಾಗ ತೆರೆಮೇಲೆ ಬರಲಿದ್ದು, ಇದರಲ್ಲಿ ನಟಿ ಕಂಗನಾ ರಣಾವತ್ ನಟಿಸಲಿದ್ದಾರೆ.
ಈ ಚಿತ್ರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಲಿದೆ. ಭಾರತದ ನಿಜವಾದ ಗುರುತನ್ನು ಸೃಷ್ಟಿಸಿದ ಮಹಿಳಾ ವೀರರ ಬಗ್ಗೆ ತಿಳಿಸುವ ಉದ್ದೇಶ ಹೊಂದಿದೆ ಎಂದು ಕರೆತರುವ ಉದ್ದೇಶವಿದೆ ಎಂದು ಮೂಲಗಳು ತಿಳಿಸಿವೆ.
ಕಂಗನಾ ಮತ್ತು ನಿರ್ಮಾಪಕ ಕಮಲ್ ಜೈನ್ ಅವರು 2019ರ ಮಣಿಕರ್ಣಿಕಾ: ದಿ ಝಾನ್ಸಿ ರಾಣಿ ಎಂಬ ಸಿನಿಮಾ ಮಾಡಿದ್ದರು. ಇದೀಗ ಮತ್ತೆ ಎರಡನೇ ಭಾಗವನ್ನು ಪ್ರೇಕ್ಷಕರ ಮುಂದಿಡಲು ಸಿದ್ಧತೆ ಮಾಡುತ್ತಿದ್ದಾರೆ. ನಟಿ ಕಳೆದ ವಾರ ಜೈನ್ ಅವರೊಂದಿಗೆ ಸಭೆ ನಡೆಸಿ ಅವರ ಹೊಸ ಸ್ಕ್ರಿಪ್ಟ್ಗೆ ಒಪ್ಪಿಗೆ ನೀಡಿದ್ದಾರೆ. 2022ರಲ್ಲಿ ಹೊಸ ಚಿತ್ರದ ಚಿತ್ರೀಕರಣಕ್ಕೆ ಸಿದ್ಧತೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.
ದಿಡ್ಡಾ ಕಾಶ್ಮೀರದ ರಾಣಿಯಾಗಿದ್ದು, ಮೆಹಮೂದ್ ಘಜ್ನವಿ ಅವರನ್ನು ಎರಡು ಬಾರಿ ಯುದ್ಧದಲ್ಲಿ ಸೋಲಿಸಿದ್ದರು. ಅವಳ ಒಂದು ಕಾಲು ಪೋಲಿಯೊ ಪೀಡಿತವಾಗಿತ್ತು. ಆದರೆ ಅವೆಲ್ಲವನ್ನೂ ಮೆಟ್ಟಿ ನಿಂತ ರಾಣಿ ಶ್ರೇಷ್ಠ ಯೋಧರಲ್ಲಿ ಒಬ್ಬಳು ಎಂಬ ಹಿರಿಮೆಗೆ ಪಾತ್ರಳಾಗಿದ್ದರು.