ಮುಂಬೈ (ಮಹಾರಾಷ್ಟ್ರ): ಪ್ರೇಮಕಥೆ ಮತ್ತು ವಿಡಂಬನೆ ಆಧಾರಿತ ಮುಂದಿನ ಚಿತ್ರ "ಟಿಕು ವೆಡ್ಸ್ ಶೆರು"ನಲ್ಲಿ ಮೊದಲ ಬಾರಿಗೆ ನಿರ್ಮಾಪಕಿಯಾಗಿ ಡಿಜಿಟಲ್ ವೇದಿಕೆ ಪ್ರವೇಶಕ್ಕೆ ನಟಿ ಕಂಗಣಾ ರಣಾವತ್ ಸಜ್ಜಾಗಿದ್ದಾರೆ. ವೆಬ್ಸ್ಪೇಸ್ ಮತ್ತು ತನ್ನ ಪ್ರೊಡಕ್ಷನ್ ಹೌಸ್ ಮಣಿಕರ್ನಿಕಾ ಫಿಲ್ಮ್ಸ್ ಮೂಲಕ ಕಂಗನಾ ಚಿತ್ರ ನಿರ್ಮಾಣ ಮಾಡಲಿದ್ದು, ಶನಿವಾರ ಅದರ ಲೋಗೋ ಬಿಡುಗಡೆ ಮಾಡಿದ್ದಾರೆ.
ಲವ್ ಸ್ಟೋರಿ ಮತ್ತು ಹಾಸ್ಯ ಒಳಗೊಂಡಿರುವ 'ಟಿಕು ವೆಡ್ಸ್ ಶೆರು' ಚಿತ್ರದ ಮೂಲಕ ಮಣಿಕರ್ನಿಕಾ ಫಿಲ್ಮ್ಸ್ ಡಿಜಿಟಲ್ ಕ್ಷೇತ್ರಕ್ಕೆ ಕಾಲಿಡುತ್ತಿದೆ. ಡಿಜಿಟಲ್ ಕ್ಷೇತ್ರದಲ್ಲಿ ಹೊಸ ಮತ್ತು ವಿನೂತನ ಕಂಟೆಂಟ್ಗಳನ್ನು ನಾವು ಮಾಡುತ್ತೇವೆ ಎಂದು ಕಂಗನಾ ಹೇಳಿದ್ದಾರೆ.