ತಮ್ಮ ಅದ್ಭುತ ನಟನೆಯ ಮೂಲಕ ಅಭಿಮಾನಿಗಳನ್ನು ಗೆದ್ದು ನಾಲ್ಕು ರಾಷ್ಟ್ರೀಯ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಬಾಲಿವುಡ್ ನಟಿ ಕಂಗನಾ ರಣಾವತ್ ಇತ್ತೀಚೆಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡುವುದಕ್ಕೇ ಹೆಚ್ಚು ಸುದ್ದಿಯಾಗುತ್ತಿದ್ದಾರೆ. ಇದರ ಮಧ್ಯೆ ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಮುದ್ದಾದ ಬಾಲ್ಯದ ಫೋಟೋಗಳನ್ನು ಸಹ ಹಂಚಿಕೊಳ್ಳುತ್ತಿರುತ್ತಾರೆ.
ಈ ಹಿಂದೆ ಶಾಲಾ ಸಮವಸ್ತ್ರದಲ್ಲಿರುವ ಫೋಟೋ ಹಂಚಿಕೊಂಡಿದ್ದ ನಟಿ ಇದೀಗ ಅಕ್ಕ ರಂಗೋಲಿ ಚಂದೇಲ್ ಫೋಟೋ ಸೇರಿ ತಮ್ಮ ಕುಟುಂಬದ ಆಲ್ಬಮ್‌ನಿಂದ ಪ್ರಮುಖ ಥ್ರೋಬ್ಯಾಕ್ ಫೋಟೋಗಳನ್ನು ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಒಂದು ಫೋಟೋದಲ್ಲಿ ತಾವು 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಸಂದರ್ಭದಲ್ಲಿ ಅಮ್ಮನೊಂದಿಗೆ ಕೈಯಲ್ಲಿ ತಂಪು ಪಾನೀಯ ಡಬ್ಬಿಗಳನ್ನು ಹಿಡಿದುಕೊಂಡು ಪೋಸ್ ನೀಡಿದ್ದಾರೆ.
ತನ್ನ ಸಹೋದರಿ ರಂಗೋಲಿ ಚಂದೇಲ್ ಅವರು ಚೂಡಿದಾರ್ ಧರಿಸಿ ಪೋಸ್ ನೀಡುತ್ತಿರುವ ಹಳೆಯ ಫೋಟೋ ಹಾಗೂ ಅಪ್ಪನ ಜೊತೆ ರಂಗೋಲಿ ನಿಂತಿರುವ ಪೋಟೋವೊಂದನ್ನು ಕೂಡ ನಟಿ ಹಂಚಿಕೊಂಡಿದ್ದಾರೆ.