ಇಂದು ದೇಶಾದ್ಯಂತ ಮಹಾತ್ಮ ಗಾಂಧಿ ಜನ್ಮ ದಿನವನ್ನು ಆಚರಿಸಲಾಗುತ್ತಿದೆ. ಗಾಂಧಿ ಜಯಂತಿ ಪ್ರಯುಕ್ತ ಪ್ರಮುಖ ನಾಯಕರು, ಸಿನಿಮಾ ತಾರೆಯರು ಮಹಾತ್ಮನ ಸಂದೇಶಗಳನ್ನು ಸಾರಿದ್ದಾರೆ.
ಗಾಂಧಿ ಜಯಂತಿ: ಖಾದಿ ಉದ್ಯಮ ಪ್ರೋತ್ಸಾಹಿಸಲು ಕಂಗನಾ ಕರೆ - ಕಂಗನಾ ರಣಾವತ್
ಗಾಂಧಿ ಜಯಂತಿಯ ಶುಭ ಕೋರಿರುವ ಬಾಲಿವುಡ್ ನಟಿ ಕಂಗನಾ ರಣಾವತ್, ಖಾದಿ ಉದ್ಯಮದ ಮಹತ್ವ ಸಾರಿದ್ದಾರೆ. ನಮ್ಮ ಸಂಸ್ಕೃತಿ, ಪರಂಪರೆಯನ್ನು ಗೌರವಿಸಬೇಕು ಹಾಗೂ ಭಾರತದ ಗುಡಿ ಕೈಗಾರಿಕೆಯಾದ, ದೇಶದ ಮೂಲ ಕಸುಬುಗಳಲ್ಲಿ ಒಂದಾದ ಖಾದಿ ಉದ್ಯಮವನ್ನು ಪ್ರೋತ್ಸಾಹಿಸಬೇಕು ಎಂದಿದ್ದಾರೆ.

ಗಾಂಧಿ ಜಯಂತಿಯ ಅಂಗವಾಗಿ ಕಂಗನಾ ರಣಾವತ್ ಸುಂದರವಾದ ಸೀರೆ ಉಟ್ಟು, ಗುಡಿ ಕೈಗಾರಿಕೆಯ ಸಂಕೇತವಾದ ಚರಕವನ್ನು ಹಿಡಿದು ಬಟ್ಟೆ ನೆಯ್ಯುತ್ತಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾರೆ. ಈ ಫೋಟೋದಲ್ಲಿ ಹಣೆಗೆ ಬಿಂದಿ ಇಟ್ಟು, ಸೀರೆ ಉಟ್ಟ ಕಂಗನಾ ತಮ್ಮ ಕೂದಲನ್ನು ವಿಶೇಷ ರೀತಿಯಲ್ಲಿ ಕಟ್ಟಿಕೊಂಡಿದ್ದಾರೆ.