ರಾಘವ ಲಾರೆನ್ಸ್ ನಟಿಸಿ ನಿರ್ದೇಶಿಸಿರುವ ಕಾಂಚನ-3 ಹಾರರ್ ಸಿನಿಮಾ ಕಳೆದ ವಾರ ದೇಶಾದ್ಯಂತ ತಮಿಳು-ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಿತ್ತು. ಬಾಕ್ಸ್ ಆಫೀಸ್ ನಲ್ಲಿ 40 ಕೋಟಿ ರೂಪಾಯಿ ಬಾಚಿಕೊಳ್ಳುವ ಮೂಲಕ ಹೊಸ ಅಧ್ಯಾಯ ಬರೆದಿದೆ.
ಸ್ಯಾಂಡಲ್ವುಡ್ಗೆ ಬಂದ್ರು ರಾಘವ ಲಾರೆನ್ಸ್: ಕನ್ನಡದಲ್ಲೂ 'ಕಾಂಚನ-3' ಬಿಡುಗಡೆ - undefined
ಏಪ್ರಿಲ್ 19 ರಂದು ದೇಶಾದ್ಯಂತ ಬಿಡುಗಡೆಯಾಗಿದ್ದ ಕಾಂಚನ-3 ಸಿನಿಮಾ ಇದೀಗ ಕನ್ನಡದಲ್ಲೂ ಬಿಡುಗಡೆಯಾಗುತ್ತಿದೆ. ಈ ಮೂಲಕ ತಮಿಳು ನಟ ರಾಘವ ಲಾರೆನ್ಸ್ ಕನ್ನಡಕ್ಕೆ ಬರುತ್ತಿದ್ದಾರೆ.

ಇನ್ನು ಕನ್ನಡದಲ್ಲಿ ಈ ಸಿನಿಮಾವನ್ನು ಕಲ್ಪನಾ ಹೆಸರಿನಲ್ಲಿ ರಿಮೇಕ್ ಮಾಡಲಾಗಿತ್ತು. ಎರಡೂ ಸಿನಿಮಾಗಳಲ್ಲೂ ಉಪೇಂದ್ರ ನಾಯಕನಾಗಿ ನಟಿಸಿದ್ದರು. ಆದರೆ ಇದೀಗ ಕಾಂಚನ-3 ಕನ್ನಡದಲ್ಲೂ ಬಿಡುಗಡೆಯಾಗುತ್ತಿದೆ. ಈ ಮೂಲಕ ರಾಘವ ಲಾರೆನ್ಸ್ ಕನ್ನಡಕ್ಕೆ ಬರುತ್ತಿದ್ದಾರೆ. ಸಿನಿಮಾ ಪ್ರಮೋಟ್ ಮಾಡಲು ಲಾರೆನ್ಸ್, ನಟಿಯರಾದ ವೇದಿಕಾ, ನಿಕ್ಕಿ ತಂಬೋಳಿ ಬೆಂಗಳೂರಿಗೆ ಬಂದಿಳಿದಿದ್ದಾರೆ.
ವಿತರಕರಾದ ಜಾಕ್ ಮಂಜು ಹಾಗೂ ಯೋಗಿ ದ್ವಾರಕೀಶ್ ಜಂಟಿಯಾಗಿ ಈ ಸಿನಿಮಾವನ್ನು ಕರ್ನಾಟಕದಲ್ಲಿ ರಿಲೀಸ್ ಮಾಡುವ ಹೊಣೆ ಹೊತ್ತಿದ್ದಾರೆ. ಅಶ್ವಿನಿ ಆಡಿಯೋ ಸಂಸ್ಥೆ ಕಾಂಚನ-3 ಚಿತ್ರದ ಧ್ವನಿ ಸುರುಳಿಯನ್ನ ಬಿಡುಗಡೆ ಮಾಡಿತ್ತು. ಕನ್ನಡ ವರ್ಸನ್ಗೆ ಸೆನ್ಸಾರ್ ಬೋರ್ಡ್ ಪ್ರಮಾಣ ಪತ್ರ ನೀಡಿದರೆ ಏಪ್ರಿಲ್ 26 ರಂದು ಬಿಡುಗಡೆಯಾಗಲಿದೆ.