ಕರ್ನಾಟಕ

karnataka

ETV Bharat / sitara

ಕನ್ನಡಕ್ಕೆ ಕಾಂಚನ-2 ಡಬ್ಬಿಂಗ್​..ಭಾನುವಾರ ಕಿರುತೆರೆಯಲ್ಲಿ ಪ್ರಸಾರ

ರಾಘವ ಲಾರೆನ್ಸ್, ನಿತ್ಯಾ ಮೆನನ್, ತಾಪ್ಸಿ ಪನ್ನು ಪ್ರಮುಖ ಪಾತ್ರಗಳಲ್ಲಿ ನಟಿಸಿರುವ 'ಕಾಂಚನ-2' ಕನ್ನಡಕ್ಕೆ ಡಬ್ ಆಗಿದ್ದು, ಸಿನಿಮಾ ನಾಳೆ ಭಾನುವಾರ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದೆ.

Kanchana 2 dubbing movie
'ಕಾಂಚನ-2'

By

Published : Oct 3, 2020, 1:27 PM IST

ಪ್ರತಿ ವಾರವೂ ಒಂದೊಂದು ಡಬ್ಬಿಂಗ್ ಸಿನಿಮಾಗಳನ್ನು ಕಿರುತೆರೆಯಲ್ಲಿ ಪ್ರಸಾರ ಮಾಡಲಾಗುತ್ತಿದೆ. ಅಕ್ಟೋಬರ್ 4 ಭಾನುವಾರದಂದು ರಾಘವ ಲಾರೆನ್ಸ್ ಅಭಿನಯದ 'ಕಾಂಚನ-2' ಹಾರರ್ ಸಿನಿಮಾ ಉದಯ ವಾಹಿನಿಯಲ್ಲಿ ಸಂಜೆ 6.30 ಕ್ಕೆ ಪ್ರಸಾರವಾಗುತ್ತಿದೆ.

ರಾಘವ ಲಾರೆನ್ಸ್ ನಿರ್ದೇಶನದ ಕಾಂಚನ 2

2011 ರಲ್ಲಿ ಬಿಡುಗಡೆಯಾದ ಮುನಿ ಸೀರೀಸ್​​​ನ 'ಕಾಂಚನ' ಸಿನಿಮಾ, 2013 ರಲ್ಲಿ ಕನ್ನಡದಲ್ಲಿ ಉಪೇಂದ್ರ ಅಭಿನಯದಲ್ಲಿ 'ಕಲ್ಪನ' ಎಂಬ ಹೆಸರಿನಲ್ಲಿ ಬಿಡುಗಡೆಯಾಗಿತ್ತು. 2015 ರಲ್ಲಿ 'ಕಾಂಚನ-2' ಬಿಡುಗಡೆಯಾಗಿತ್ತು. ಈ ಚಿತ್ರ ಕೂಡಾ ಕನ್ನಡಕ್ಕೆ ರೀಮೇಕ್ ಆಗಿದ್ದು ಇದರಲ್ಲಿ ಉಪೇಂದ್ರ ನಟಿಸಿದ್ದರು. ಆದರೆ ಇದೀಗ ಈ ಸಿನಿಮಾ ಕನ್ನಡಕ್ಕೆ ಡಬ್ ಆಗಿ ಬಿಡುಗಡೆಯಾಗುತ್ತಿದೆ. ಚಿತ್ರವನ್ನು ರಾಘವ ಲಾರೆನ್ಸ್ ನಿರ್ಮಿಸಿ, ನಿರ್ದೇಶನ ಮಾಡಿ ನಟನೆ ಕೂಡಾ ಮಾಡಿದ್ದರು. ತಾಪ್ಸಿ ಪನ್ನು, ನಿತ್ಯಾ ಮೆನನ್, ಕೋವೈ ಸರಳ ಹಾಗೂ ಇನ್ನಿತರರು ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ರಾಘವ ಲಾರೆನ್ಸ್ ತಮ್ಮ ಸಹೋದರ ಎಲ್ವಿನ್ ಅವರನ್ನು ಈ ಚಿತ್ರದಲ್ಲಿ ಪರಿಚಯಿಸಿದ್ದಾರೆ. ಲಾರೆನ್ಸ್ ಈ ಚಿತ್ರದಲ್ಲಿ 6 ವಿಭಿನ್ನ ಶೇಡ್​​​ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಹಾಡುಗಳಿಗೆ ಸಿ. ಸತ್ಯ ಸಂಗೀತ ನಿರ್ದೇಶನ ಮಾಡಿದ್ದಾರೆ. ಎಸ್. ಥಮನ್, ಅಶ್ವಮಿತ್ರ ಮತ್ತು ಲಿಯಾನ್ ಜೇಮ್ಸ್ 2 ಹಾಡುಗಳನ್ನು ಸಂಯೋಜಿಸಿದ್ದಾರೆ.

ಉದಯ ಟಿವಿಯಲ್ಲಿ 'ಕಾಂಚನ-2'

ರಾಘವ ಹಾಗೂ ನಂದಿನಿ ಟಿವಿ ಚಾನೆಲ್​​​ವೊಂದರಲ್ಲಿ ಕೆಲಸ ಮಾಡುತ್ತಿರುತ್ತಾರೆ. ರೇಟಿಂಗ್​​ನಲ್ಲಿ ತಮ್ಮ ವಾಹಿನಿ ಎರಡನೇ ಸ್ಥಾನಕ್ಕೆ ಇಳಿದಾಗ ಟಿಆರ್​ಪಿ ಹೆಚ್ಚಿಸಲು ಹಾರರ್​ ಶೋ ಚಿತ್ರೀಕರಿಸಲು ಇಬ್ಬರೂ ತಮ್ಮ ತಂಡದೊಂದಿಗೆ ಮುಂದಾಗುತ್ತಾರೆ. ಇದಕ್ಕಾಗಿ ನಗರದ ಹೊರವಲಯದಲ್ಲಿರುವ ಒಂದು ಪಾಳು ಬಿದ್ದ ಬಂಗಲೆಗೆ ತೆರಳುತ್ತಾರೆ. ಅಲ್ಲಿ ಅವರು ದೆವ್ವದಿಂದ ಏನೆಲ್ಲಾ ಸಮಸ್ಯೆ ಅನುಭವಿಸುತ್ತಾರೆ...? ಆ ಸಮಸ್ಯೆಯಿಂದ ಹೇಗೆ ಪಾರಾಗುತ್ತಾರೆ ಎಂಬುದೇ ಚಿತ್ರದ ಕಥೆ.

ABOUT THE AUTHOR

...view details