ಕರ್ನಾಟಕ

karnataka

ETV Bharat / sitara

ಮೈಸೂರಿನಲ್ಲಿ 'ಕಾಣದಂತೆ ಮಾಯವಾದನು' ವಿಶೇಷ ಪ್ರದರ್ಶನ ಏರ್ಪಾಡು - Kanadante mayavadanu Special show in Mysore

ಸ್ವಚ್ಛ ಭಾರತ ಅಭಿಯಾನದಡಿ ಪೌರ ಕಾರ್ಮಿಕರ ನಿಷ್ಠೆಯಿಂದ ಮೈಸೂರು ನಗರಕ್ಕೆ ಸ್ವಚ್ಛ ನಗರಿ ಎಂಬ ಬಿರುದು ಬಂದಿರುವ ಹಿನ್ನೆಲೆ ಪೌರ ಕಾರ್ಮಿಕರಿಗೆ ಈ ಉಚಿತ ಪ್ರದರ್ಶನ ಏರ್ಪಡಿಸಲಾಗಿದೆ.ಮೈಸೂರಿನ ವುಡ್​​​​ಲ್ಯಾಂಡ್ ಚಿತ್ರಮಂದಿರದಲ್ಲಿ ಸಂಜೆ 4.30 ಹಾಗೂ 7.30 ಕ್ಕೆ ಪ್ರದರ್ಶನದ ವ್ಯವಸ್ಥೆ ಮಾಡಲಾಗಿದೆ. ಪೌರಕಾರ್ಮಿಕರಿಗೆ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ ಚಿತ್ರತಂಡ ಈ ಪ್ರದರ್ಶನ ಏರ್ಪಡಿಸಿದ್ದೇವೆ ಎಂದು ಚಿತ್ರತಂಡ ಹೇಳಿದೆ.

Kanadante mayavadanu
'ಕಾಣದಂತೆ ಮಾಯವಾದನು'

By

Published : Feb 26, 2020, 9:30 AM IST

Updated : Feb 26, 2020, 10:29 AM IST

ಎರಡು ವಾರಗಳ ಹಿಂದೆ ಬಿಡುಗಡೆ ಆದ ‘ಕಾಣದಂತೆ ಮಾಯವಾದನು’ ಸಿನಿಮಾಗೆ ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ದೊರೆತಿದೆ. ಈ ಕಾರಣದಿಂದ ಚಿತ್ರತಂಡಕ್ಕೆ ಈ ಬಗ್ಗೆ ಹೊಸ ಬಗೆಯ ಆಲೋಚನೆ ಉಂಟಾಗಿದೆ. ಫೆಬ್ರವರಿ 24 ರಿಂದ 26 ವರೆಗೆ ಮೈಸೂರಿನಲ್ಲಿ 3000 ಪೌರ ಕಾರ್ಮಿಕರಿಗೆ ‘ಕಾಣದಂತೆ ಮಾಯವಾದನು’ ಉಚಿತ ಪ್ರದರ್ಶನ ಏರ್ಪಾಡು ಮಾಡಲಾಗಿದೆ.

'ಕಾಣದಂತೆ ಮಾಯವಾದನು'

ಸ್ವಚ್ಛ ಭಾರತ ಅಭಿಯಾನದಡಿ ಪೌರ ಕಾರ್ಮಿಕರ ನಿಷ್ಠೆಯಿಂದ ಮೈಸೂರು ನಗರಕ್ಕೆ ಸ್ವಚ್ಛ ನಗರಿ ಎಂಬ ಬಿರುದು ಬಂದಿರುವ ಹಿನ್ನೆಲೆ ಪೌರ ಕಾರ್ಮಿಕರಿಗೆ ಈ ಉಚಿತ ಪ್ರದರ್ಶನ ಏರ್ಪಡಿಸಲಾಗಿದೆ.ಮೈಸೂರಿನ ವುಡ್​​​​ಲ್ಯಾಂಡ್ ಚಿತ್ರಮಂದಿರದಲ್ಲಿ ಸಂಜೆ 4.30 ಹಾಗೂ 7.30 ಕ್ಕೆ ಪ್ರದರ್ಶನದ ವ್ಯವಸ್ಥೆ ಮಾಡಲಾಗಿದೆ. ಪೌರಕಾರ್ಮಿಕರಿಗೆ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ ಚಿತ್ರತಂಡ ಈ ಪ್ರದರ್ಶನ ಏರ್ಪಡಿಸಿದ್ದೇವೆ ಎಂದು ಚಿತ್ರತಂಡ ಹೇಳಿದೆ. ವಿಕಾಸ್, ಸಿಂಧು ಲೋಕನಾಥ್, ಧರ್ಮಣ್ಣ, ಸುಚೀಂದ್ರ ಪ್ರಸಾದ್, ಅಚ್ಯುತ್ ಕುಮಾರ್, ವಿನಯ ಪ್ರಸಾದ್​​​​​​​​​​​​​​​​​​​​​​​, ಉದಯ್, ಭಜರಂಗಿ ಲೋಕಿ, ಸೀತಾ ಕೋಟೆ, ಬಾಬು ಹಿರಣ್ಣಯ್ಯ ಹಾಗೂ ಇನ್ನಿತರರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಸಸ್ಪೆನ್ಸ್ ಥ್ರಿಲ್ಲರ್ ಕಥಾ ವಸ್ತು ಹೊಂದಿರುವ ಈ ಚಿತ್ರವನ್ನೂ ರಾಜ್ ಪತ್ತಿಪಾಟಿ ನಿರ್ದೇಶಿಸಿದ್ದಾರೆ. ಚಂದ್ರಶೇಖರ್ ಹಾಗೂ ಸೋಮ್ ಸಿಂಗ್ ಈ ಚಿತ್ರಕ್ಕೆ ಹಣ ಹೂಡಿದ್ದಾರೆ.

Last Updated : Feb 26, 2020, 10:29 AM IST

For All Latest Updates

TAGGED:

ABOUT THE AUTHOR

...view details