ಕರ್ನಾಟಕ

karnataka

ETV Bharat / sitara

ನಾಳೆ 'ಕಾಣದಂತೆ ಮಾಯವಾದನು' ರೀ ರಿಲೀಸ್‍ - ಕಾಣದಂತೆ ಮಾಯವಾದನು ರಿ ರಿಲೀಸ್​​​

ವಿಕಾಸ್​​, ಸಿಂಧೂ ಲೋಕನಾಥ್ ಅಭಿನಯದ ಕಾಣದಂತೆ ಮಾಯವಾದನು ಸಿನಿಮಾ ರೀ ರಿಲೀಸ್‍ ಆಗುತ್ತಿದೆ.

kanadante mayavadanu movie re release
ವಿಕಾಸ್​​, ಸಿಂಧೂ

By

Published : Oct 14, 2020, 11:04 AM IST

ನಾಳೆಯಿಂದ(ಅಕ್ಟೋಬರ್ 15) ಚಿತ್ರಮಂದಿರಗಳು ಆರಂಭವಾಗುತ್ತಿದ್ದು, ಸಿನಿ ರಸಿಕರಿಗೆ ಚಿತ್ರ ವೀಕ್ಷಣೆ ಭಾಗ್ಯ ಸಿಕ್ಕಂತಾಗಿದೆ. ಇದೇ ಹಿನ್ನೆಲೆಯಲ್ಲಿಯೇ ಕನ್ನಡದ ಹಲವು ಸಿನಿಮಾಗಳು ರೀ ರಿಲೀಸ್‍ಗೆ ರೆಡಿಯಾಗುತ್ತಿವೆ. ಈ ಸಾಲಿನಲ್ಲಿ ವಿಕಾಸ್ ನಾಯಕನಾಗಿ ನಟಿಸಿರುವ ‘ಕಾಣದಂತೆ ಮಾಯವಾದನು’ ಚಿತ್ರ ಕೂಡ ಸೇರ್ಪಡೆಯಾಗಿದೆ.

ವಿಕಾಸ್​​, ಸಿಂಧೂ ಲೋಕನಾಥ್

ಈ ಬಗ್ಗೆ ಚಿತ್ರದ ನಿರ್ದೇಶಕ ರಾಜ್​​ ಪಾತಿಪಾಟಿ ಮಾತನಾಡಿದ್ದು, ಚಿತ್ರಕ್ಕೆ ಒಳ್ಳೆಯ ರಿವೀವ್ ಸಿಕ್ಕಿತ್ತು. ಸಿನಿಮಾವನ್ನ ಜನರು ಇಷ್ಟಪಟ್ಟಿದ್ರು. ಆದ್ರೆ ನಾವು ಒಂದಿಷ್ಟು ಸೀನ್‍ಗಳನ್ನು ಟ್ರಿಮ್ ಮಾಡಿದ್ವಿ. ಕಥೆಗೆ ಹೆಚ್ಚು ಇಂಪಾರ್ಟೆನ್ಸ್ ಕೊಟ್ಟು ಕೆಲವು ಸೀನ್‍ಗಳನ್ನು ಟ್ರಿಮ್ ಮಾಡಿದ್ವಿ. ಆದ್ರೆ ಈಗ ಕೆಲವು ಬದಲಾವಣೆ ಮಾಡಲಾಗದ್ದು, ಮರು ಬಿಡುಗಡೆ ಮಾಡುತ್ತಿದ್ದೇವೆ ಎಂದಿದ್ದಾರೆ.

ವಿಕಾಸ್​​, ಸಿಂಧೂ ಲೋಕನಾಥ್

ಚಿತ್ರದಲ್ಲಿ ಆ್ಯಕ್ಷನ್ ಹೀರೋ ಆಗಿ ವಿಕಾಸ್ ಕಾಣಿಸಿಕೊಂಡಿದ್ದಾರೆ. ಸಿಂಧೂ ಲೋಕನಾಥ್ ವಿಕಾಸ್​​​ಗೆ ಜೋಡಿಯಾಗಿದ್ದಾರೆ. ಲವ್ ಫ್ಯಾಂಟಸಿ, ಹಾರರ್, ಆ್ಯಕ್ಷನ್, ಸಸ್ಪೆನ್ಸ್ ಎಲ್ಲಾ ಎಲಿಮೆಂಟ್‍ಗಳು ಚಿತ್ರದಲ್ಲಿವೆ.

ABOUT THE AUTHOR

...view details