ಕರ್ನಾಟಕ

karnataka

ETV Bharat / sitara

ದೇಶದ ಅರ್ಧದಷ್ಟು ಜನ ಹಸಿವಿನಿಂದ ಬಳಲುತ್ತಿರುವಾಗ ಇಷ್ಟು ವೆಚ್ಚದ ಸಂಸತ್​ ಭವನ ಬೇಕೇ?: ಕಮಲ್​ ಹಾಸನ್​

ದೇಶದ ಅರ್ಧದಷ್ಟು ಜನರು ಹಸಿವಿನಿಂದ ಬಳಲುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸಾವಿರಾರು ಕೋಟಿ ರೂ. ವೆಚ್ಚದ ನೂತನ ಸಂಸತ್​ ಭವನ ನಿರ್ಮಾಣ ಮಾಡುವ ಅಗತ್ಯವೇನಿದೆ? ನನ್ನ ಪ್ರೀತಿಯ ಚುನಾಯಿತ ಪ್ರಧಾನಿಯವರೇ ದಯವಿಟ್ಟು ಉತ್ತರಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ನಟ ಮತ್ತು ರಾಜಕಾರಣಿ ಕಮಲ್ ಹಾಸನ್ ಪ್ರಶ್ನಿಸಿದ್ದಾರೆ.

kamal hassan tweet
ಕಮಲ್​ ಹಾಸನ್​

By

Published : Dec 13, 2020, 6:07 PM IST

ಚೆನ್ನೈ (ತಮಿಳುನಾಡು): ಬಹುಭಾಷಾ ನಟ ಹಾಗೂ ಮಕ್ಕಳ್​ ನೀದಿ ಮೈಯಮ್​ ಪಕ್ಷದ (ಎಂಎನ್​ಎಂ) ಸಂಸ್ಥಾಪಕ ಕಮಲ್ ಹಾಸನ್ ಅವರು​ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

"ಕೊರೊನಾದಿಂದಾಗಿ ಜನರು ತಮ್ಮ ಜೀವನೋಪಾಯ ಕಳೆದುಕೊಂಡಿದ್ದಾರೆ. ಭಾರತದ ಅರ್ಧದಷ್ಟು ಜನರು ಹಸಿವಿನಿಂದ ಬಳಲುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸಾವಿರಾರು ಕೋಟಿ ರೂ. ವೆಚ್ಚದ ನೂತನ ಸಂಸತ್​ ಭವನ ನಿರ್ಮಾಣ ಮಾಡುವ ಅಗತ್ಯವೇನಿದೆ? ನನ್ನ ಪ್ರೀತಿಯ ಚುನಾಯಿತ ಪ್ರಧಾನಿಯವರೇ ದಯವಿಟ್ಟು ಉತ್ತರಿಸಿ" ಎಂದು ತಮಿಳು ಭಾಷೆಯಲ್ಲಿ ಟ್ವೀಟ್​ ಮಾಡಿ ಪ್ರಧಾನಿ ನರೇಂದ್ರ ಮೋದಿಗೆ ಕಮಲ್​ ಹಾಸನ್​ ಪ್ರಶ್ನಿಸಿದ್ದಾರೆ.

"ಚೀನಾದ ಮಹಾಗೋಡೆ ನಿರ್ಮಾಣದಲ್ಲಿ ಸಾವಿರಾರು ಜನರು ಸಾವನ್ನಪ್ಪಿದ್ದರು. ಜನರನ್ನು ರಕ್ಷಿಸಲು ಈ ಗೋಡೆಯನ್ನು ಕಟ್ಟಲಾಗಿದೆ ಎಂದು ಅಂದಿನ ರಾಜರು ಸಮರ್ಥಿಸಿಕೊಂಡಿದ್ದರು" ಎಂದು ಉದಾಹರಣೆ ನೀಡಿರುವ ಹಾಸನ್​​, ನೂತನ ಸಂಸತ್​ ಭವನವನ್ನು ಚೀನಾದ ಮಹಾಗೋಡೆಗೆ ಹೋಲಿಕೆ ಮಾಡಿ ಇದು ವ್ಯರ್ಥ ಎಂದು ಪರೋಕ್ಷವಾಗಿ ಹೇಳಿದ್ದಾರೆ.

ಇದನ್ನೂ ಓದಿ: ನೂತನ ಸಂಸತ್ ಭವನವು 'ಆತ್ಮನಿರ್ಭರ ಭಾರತ' ನಿರ್ಮಾಣಕ್ಕೆ ಸಾಕ್ಷಿ : ಭೂಮಿ ಪೂಜೆ ಬಳಿಕ ಮೋದಿ ಮಾತು

971 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಾಣವಾಗಲಿರುವ ನೂತನ ಸಂಸತ್​ ಭವನಕ್ಕೆ ಡಿಸೆಂಬರ್​ 10 ರಂದು ಪಿಎಂ ಮೋದಿ ಶಂಕುಸ್ಥಾಪನೆ ನೆರವೇರಿಸಿದ್ದರು. ಇದು ಹಳೆಯ ಸಂಸತ್ತಿನ ಕಟ್ಟಡಕ್ಕಿಂತ 17,000 ಚ. ಮೀ. ದೊಡ್ಡದಾಗಿರಲಿದೆ. ಟಾಟಾ ಪ್ರಾಜೆಕ್ಟ್ಸ್ ಲಿಮಿಟೆಡ್‌ಗೆ ಸಂಸತ್ ನಿರ್ಮಾಣ ಯೋಜನೆಯ ಗುತ್ತಿಗೆ ನೀಡಲಾಗಿದೆ.

ABOUT THE AUTHOR

...view details