ಚೆನ್ನೈ (ತಮಿಳುನಾಡು): ಕೊರೊನಾ ವೈರಸ್ ವಕ್ಕರಿಸಿದಾಗಿನಿಂದ ಚೆನ್ನೈನ ಆಸ್ಪತ್ರೆಗೆ ದಾಖಲಾಗಿದ್ದ ನಟ ಹಾಗೂ ರಾಜಕಾರಣಿ ಕಮಲ್ ಹಾಸನ್ (67) ಸೋಂಕಿನಿಂದ ಚೇತರಿಸಿಕೊಂಡಿದ್ದು, ಆಸ್ಪತ್ರೆಯಿಂದ ಇಂದು ಡಿಸ್ಚಾರ್ಜ್ ಆಗಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಹಾಸನ್, "ಮುನ್ನೆಚ್ಚರಿಕಾ ಕ್ರಮಗಳು ಸಾಧ್ಯವಾದಷ್ಟು ನಮ್ಮನ್ನು ರಕ್ಷಿಸುತ್ತವೆ. ಅವುಗಳನ್ನು ಮೀರಿ ನಾವು ಅಸ್ವಸ್ಥರಾದರೆ ಸರಿಯಾದ ಚಿಕಿತ್ಸೆಯನ್ನು ತೆಗೆದುಕೊಳ್ಳಬೇಕು. ನಾನು ಸೋಂಕಿನಿಂದ ಚೇತರಿಸಿಕೊಳ್ಳುತ್ತಿದ್ದೇನೆ. ಅದೆಷ್ಟೋ ಆತ್ಮಗಳು ನನ್ನ ಬಗ್ಗೆ ಯೋಚಿಸಿವೆ ಎಂದು ನೆನೆದು ನನಗೆ ಖುಷಿಯಾಗಿದೆ" ಎಂದು ಹೇಳಿದ್ದಾರೆ.