ಚೆನ್ನೈ: ಬಹುಭಾಷಾ ನಟ ಹಾಗೂ ಮಕ್ಕಳ್ ನೀದಿ ಮೈಯಮ್ ಪಕ್ಷದ (ಎಂಎನ್ಎಂ) ಸಂಸ್ಥಾಪಕ ಕಮಲ್ ಹಾಸನ್ 66ನೇ ವಸಂತಕ್ಕೆ ಕಾಲಿಟ್ಟಿದ್ದು, ಜನುಮ ದಿನದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.
6ನೇ ವಯಸ್ಸಿಗೆ ಬಣ್ಣ ಹಚ್ಚಿದ ನಟನಿಗೆ 66ರ ಸಂಭ್ರಮ: ಜನ್ಮದಿನದ ಶುಭಕೋರಿದವರಿಗೆ ಕಮಲ್ ಹಾಸನ್ ಕೃತಜ್ಞತೆ - ಕಮಲ್ ಹಾಸನ್ ಜನ್ಮದಿನ
ನಟ, ಎಂಎನ್ಎಂ ಸಂಸ್ಥಾಪಕ ಕಮಲ್ ಹಾಸನ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು, ಚೆನ್ನೈನ ತಮ್ಮ ನಿವಾಸದ ಬಳಿ ಶುಭಕೋರಲು ಬಂದ ಅಭಿಮಾನಿಗಳಿಗೆ, ಬೆಂಬಲಿಗರಿಗೆ ಧನ್ಯವಾದ ಅರ್ಪಿಸಿದ್ದಾರೆ.
66ನೇ ವಸಂತಕ್ಕೆ ಕಾಲಿಟ್ಟ ಕಮಲ್ ಹಾಸನ್
ಬಾಲ್ಯದಲ್ಲೇ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದ ಕಮಲ್ ಹಾಸನ್, ವಿವಿಧ ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳನ್ನು ಮಾಡುತ್ತಾ ಭಾರತದ ಅತ್ಯುತ್ತಮ ನಟರಲ್ಲೊಬ್ಬರಾಗಿ ಹೊರಹೊಮ್ಮಿದ್ದಾರೆ. ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ ಪರಮಕುಡಿಯಲ್ಲಿ 1954ರಲ್ಲಿ ಜನಿಸಿದ ಇವರು, ತಮಿಳು ಮಾತ್ರವಲ್ಲ, ಕನ್ನಡ, ತೆಲುಗು, ಹಿಂದಿ, ಮಲಯಾಳಂ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.
ಇಂದು ಅವರು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು, ಚೆನ್ನೈನ ತಮ್ಮ ನಿವಾಸದ ಬಳಿ ಶುಭಕೋರಲು ಬಂದ ಅಭಿಮಾನಿಗಳಿಗೆ, ಬೆಂಬಲಿಗರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
Last Updated : Nov 7, 2020, 11:07 AM IST