ಕರ್ನಾಟಕ

karnataka

ETV Bharat / sitara

ಲಾಕ್​​ಡೌನ್​​ ನಂತರ ಮೊದಲ ಚಿತ್ರವಾಗಿ 'ಕಲಿವೀರ' ಬಿಡುಗಡೆಗೆ ಸಿದ್ಧ - ಲಾಕ್​​ಡೌನ್​​ ನಂತರ ಮೊದಲ ಚಿತ್ರವಾಗಿ ಕಲಿವೀರ ಬಿಡುಗಡೆ ಸಿದ್ದ

ಏಕಲವ್ಯ ಇದೇ ಮೊದಲ ಬಾರಿಗೆ ಬಣ್ಣ ಹಚ್ಚಿದ್ದು, ಅವರಿಗೆ ನಾಯಕಿಯರಾಗಿ ಪಾವನ ಗೌಡ ಮತ್ತು ಚಿರಶ್ರೀ ಆಂಚನ್ ಅಭಿನಯಿಸಿದ್ದಾರೆ. ಇದೊಂದು ಆ್ಯಕ್ಷನ್ ಥ್ರಿಲ್ಲರ್ ಚಿತ್ರವಾಗಿದ್ದು, ಕೆಲವು ಐತಿಹಾಸಿಕ ಮತ್ತು ವರ್ತಮಾನದ ಘಟನೆಗಳನ್ನು ಆಧರಿಸಿದೆಯಂತೆ. ಈ ಹಿಂದೆ ಕನ್ನಡ ದೇಶದೊಳ್ ಎಂಬ ಚಿತ್ರವನ್ನು ನಿರ್ದೇಶಿಸಿದ್ದ ಅವಿ, ಈ ಚಿತ್ರಕ್ಕೆ ಕಥೆ ಬರೆದು ನಿರ್ದೇಶಿಸಿದ್ದಾರೆ..

ಕಲಿವೀರ ಕನ್ನಡ ಸಿನಿಮಾ
ಕಲಿವೀರ ಕನ್ನಡ ಸಿನಿಮಾ

By

Published : Aug 1, 2021, 10:04 PM IST

ಲಾಕ್​ಡೌನ್ ನಂತರ ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಹಾಜರಾತಿಗೆ ಸರ್ಕಾರ ಒಪ್ಪಿಗೆ ಕೊಟ್ಟು ಎರಡು ವಾರಗಳೇ ಆಗಿವೆ. ಆದರೆ, ಇದುವರೆಗೂ ಯಾವೊಂದು ಹೊಸ ಚಿತ್ರ ಸಹ ಬಿಡುಗಡೆಯಾಗಿಲ್ಲ. ಲಾಕ್​​ಡೌನ್​ಗೂ ಮೊದಲು ಬಿಡುಗಡೆಯಾಗಿದ್ದ ರಾಬರ್ಟ್, ಯುವರತ್ನ, ರಿವೈಂಡ್ ಮುಂತಾದ ಚಿತ್ರಗಳು ಬಿಡುಗಡೆಯಾದರೂ, ಯಾವುದೇ ಹೊಸ ಚಿತ್ರ ಬಿಡುಗಡೆಯಾಗಿರಲಿಲ್ಲ. ಇದೀಗ ಕಲಿವೀರ ಬಿಡುಗಡೆಯಾಗುವ ಮೂಲಕ ಹೊಸ ಚಿತ್ರಗಳ ಬಿಡುಗಡೆ ಪ್ರಾರಂಭವಾಗಿದೆ.

ಕಲಿವೀರ ಸುಮಾರು ಎರಡು ವರ್ಷಗಳ ಹಿಂದೆ ಪ್ರಾರಂಭವಾದ ಚಿತ್ರ. ಈ ಚಿತ್ರದಲ್ಲಿ ಉತ್ತರ ಕರ್ನಾಟಕದ ಪ್ರತಿಭೆ ಏಕಲವ್ಯ ಹೀರೊ ಆಗಿ ಅಭಿನಯಿಸಿದ್ದಾರೆ. ಕಲರಿಪಯಟ್ಟು ಮತ್ತು ಇತರೆ ಸಮರ ಕಲೆಗಳಲ್ಲಿ ದೊಡ್ಡ ಹೆಸರು ಮಾಡಿರುವ ಏಕಲವ್ಯ ಇದೇ ಮೊದಲ ಬಾರಿಗೆ ಬಣ್ಣ ಹಚ್ಚಿದ್ದು, ಅವರಿಗೆ ನಾಯಕಿಯರಾಗಿ ಪಾವನ ಗೌಡ ಮತ್ತು ಚಿರಶ್ರೀ ಆಂಚನ್ ಅಭಿನಯಿಸಿದ್ದಾರೆ. ಇದೊಂದು ಆ್ಯಕ್ಷನ್ ಥ್ರಿಲ್ಲರ್ ಚಿತ್ರವಾಗಿದ್ದು, ಕೆಲವು ಐತಿಹಾಸಿಕ ಮತ್ತು ವರ್ತಮಾನದ ಘಟನೆಗಳನ್ನು ಆಧರಿಸಿದೆಯಂತೆ. ಈ ಹಿಂದೆ ಕನ್ನಡ ದೇಶದೊಳ್ ಎಂಬ ಚಿತ್ರವನ್ನು ನಿರ್ದೇಶಿಸಿದ್ದ ಅವಿ, ಈ ಚಿತ್ರಕ್ಕೆ ಕಥೆ ಬರೆದು ನಿರ್ದೇಶಿಸಿದ್ದಾರೆ.

ಈಗಾಗಲೇ ಈ ಚಿತ್ರದ ಹಿಂದಿ ಡಬ್ಬಿಂಗ್ ಹಕ್ಕುಗಳು ಮಾರಾಟವಾಗಿದ್ದು, ಇದರಿಂದ ಚಿತ್ರತಂಡದ ಆತ್ಮವಿಶ್ವಾಸ ಇನ್ನಷ್ಟು ಹೆಚ್ಚಾಗಿದೆ. ಲಾಕ್​​ಡೌನ್ ನಂತರ ಬಿಡುಗಡೆಯಾಗುತ್ತಿರುವ ಮೊದಲ ಕನ್ನಡ ಚಿತ್ರವಾದ್ದರಿಂದ, ಈ ಚಿತ್ರವನ್ನು ಜನ ಎತ್ತಿ ಹಿಡಿಯುತ್ತಾರೆ ಎಂಬ ನಂಬಿಕೆ ಚಿತ್ರತಂಡದವರಿಗಿದೆಯಂತೆ. ಈ ಚಿತ್ರದಲ್ಲಿ ಡ್ಯಾನಿ ಕುಟ್ಟಪ್ಪ, ಟಿ.ಎಸ್. ನಾಗಾಭರಣ, ತಬಲಾ ನಾಣಿ ಮುಂತಾದವರು ನಟಿಸಿದ್ದು, ಹಿರಿಯ ಸಂಗೀತ ನಿರ್ದೇಶಕ ವಿ. ಮನೋಹರ್ ಸಂಗೀತ ಸಂಯೋಜಿಸಿದ್ದಾರೆ.

ಇದನ್ನೂ ಓದಿ : ಶೀಘ್ರದಲ್ಲೇ ನಿಮ್ಮ ಮುಂದೆ 'ಕಲಿವೀರ' ನಾಗಿ ಬರುತ್ತಿದ್ದಾರೆ ಕಲಿಯುಗದ ಏಕಲವ್ಯ

ABOUT THE AUTHOR

...view details