ಕರ್ನಾಟಕ

karnataka

ETV Bharat / sitara

ಈ ಸಿನಿಮಾ ಫ್ಲಾಪ್​ ಆಗಿದ್ರೆ ಇನ್ಮುಂದೆ ನಾನು ನಿರ್ದೇಶನ ಮಾಡ್ತಿರಲಿಲ್ಲ ಎಂದ ನಿರ್ದೇಶಕ - ಕಾಳಿದಾಸ ಕನ್ನಡ ಮೇಷ್ಟ್ರು

ನವರಸ ನಾಯಕ ಜಗ್ಗೇಶ್ ಅಭಿನಯದ, ಸಾಹಿತಿ ಕವಿರಾಜ್ ನಿರ್ದೇಶನದ "ಕಾಳಿದಾಸ ಕನ್ನಡ ಮೇಷ್ಟ್ರು" ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್ ಸಿಕ್ಕಿದ್ದು, ಯಶಸ್ವಿ ಎರಡನೇ ವಾರಕ್ಕೆ ಕನ್ನಡ ಮೇಷ್ಟ್ರು ಒಡ್ತಿದ್ದಾರೆ. ಈ ಬಗ್ಗೆ ಚಿತ್ರತಂಡ ಮಾಧ್ಯಮಗಳ ಜೊತೆ ಖುಷಿ ಹಂಚಿಕೊಂಡಿದೆ.

kalidhasa kannada mestru success meet
ಕಾಳಿದಾಸ ಕನ್ನಡ ಮೇಷ್ಟ್ರು ಚಿತ್ರ ತಂಡ

By

Published : Nov 27, 2019, 5:52 PM IST

ನವರಸ ನಾಯಕ ಜಗ್ಗೇಶ್ ಅಭಿನಯದ, ಸಾಹಿತಿ ಕವಿರಾಜ್ ನಿರ್ದೇಶನದ "ಕಾಳಿದಾಸ ಕನ್ನಡ ಮೇಷ್ಟ್ರು" ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್ ಸಿಕ್ಕಿದ್ದು, ಯಶಸ್ವಿ ಎರಡನೇ ವಾರಕ್ಕೆ ಕನ್ನಡ ಮೇಷ್ಟ್ರು ಒಡ್ತಿದ್ದಾರೆ. ಹೌದು, ಕನ್ನಡ ಮೇಷ್ಟ್ರು ಅವತಾರ ಆಡಿಯನ್ಸ್​​​ಗೆ ಇಷ್ಟ ಆಗಿದ್ದು, ಸದ್ಯ ಹೌಸ್ ಫುಲ್ ಪ್ರದರ್ಶನ ಕಾಣ್ತಿದೆ.

ಇದೇ ಖುಷಿಯಲ್ಲಿ ಚಿತ್ರತಂಡ ಮಾಧ್ಯಮಗಳ ಜೊತೆ ಸಂತಸ ಹಂಚಿಕೊಂಡಿದೆ. ಅಲ್ಲದೆ ಚಿತ್ರ ಗೆಲ್ಲಿಸಿದ ಕನ್ನಡ ಸಿನಿರಸಿಕರು‌ ಹಾಗೂ ಮಾಧ್ಯಮ ಮಿತ್ರರಿಗೆ "ಕಾಳಿದಾಸ ಕನ್ನಡ ಮೇಷ್ಟ್ರು" ಚಿತ್ರತಂಡ ಧನ್ಯವಾದ ಹೇಳಿದೆ.

ಕಾಳಿದಾಸ ಕನ್ನಡ ಮೇಷ್ಟ್ರು ಚಿತ್ರತಂಡ

ನಮ್ಮ ಚಿತ್ರ ಬಿಡುಗಡೆಯಾದ ಮೊದಲ ದಿನ ಕೇವಲ 50 ಪರ್ಸೆಂಟ್ ಫುಲ್ ಆಗಿತ್ತು. ಆದರೆ ನಮ್ಮ ಚಿತ್ರಕ್ಕೆ ಸಿಕ್ಕಿದ ಪಬ್ಲಿಸಿಟಿ ಹಾಗೂ ರಿವ್ಯೂನಿಂದ ಎರಡನೇ ದಿನಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ. ಮಲ್ಟಿಪ್ಲೆಕ್ಸ್​​ಗಳಲ್ಲಿ ಕಲೆಕ್ಷನ್ ಚೆನ್ನಾಗಿದೆ. ಸಿಂಗಲ್ ಸ್ಕ್ರೀನ್​​ನಲ್ಲಿ ಕಲೆಕ್ಷನ್ ಸ್ವಲ್ಪ ಇಂಪ್ರೂ ಆಗಬೇಕಿದೆ. ಸಂತಸದ ವಿಷ್ಯ ಅಂದ್ರೆ ನಮ್ಮ ಚಿತ್ರ ರಿಲೀಸ್ ಅದ ಮೂರೇ ದಿನಕ್ಕೆ ಹಾಕಿದ ಬಂಡವಾಳ ವಾಪಸ್ಸು ಬಂದಿದ್ದು, ನಿರ್ಮಾಪಕರು ಸೇಫ್​​ ಆಗಿದ್ದಾರೆ ಎಂದು ನಿರ್ದೇಶಕ ಕವಿರಾಜ್ ಚಿತ್ರದ ಸಕ್ಸಸ್ ಬಗ್ಗೆ ಸಂತಸ ವ್ಯಕ್ತಪಡಿಸಿದ್ರು. ನಮ್ಮ ಚಿತ್ರ ರಿಲೀಸ್ ಆದ ದಿನ ಹೇಳಿಕೊಳ್ಳುವಂತ ಒಪನಿಂಗ್ ಸಿಕ್ಕಿರಲಿಲ್ಲ. ಇದರಿಂದ ನಾನು ಇನ್ಮುಂದೆ ನಿರ್ದೇಶನ ಮಾಡೋದೇ ಬೇಡ ಎಂದು ಡಿಸೈಡ್ ಮಾಡಿದ್ದೆ. ಅದರೆ ರಿಲೀಸ್ ಆದ ನೆಕ್ಸ್ಟ್ ಡೇ ಎಲ್ಲಾ ಕಡೆ ಚಿತ್ರ ಹೌಸ್ ಫುಲ್ ಆಗಿದ್ದು, ಈಗ ಮತ್ತೊಂದು ಚಿತ್ರ‌ ನಿರ್ದೇಶನ ಮಾಡಲು ಕಥೆ ಹುಡುಕುತ್ತಿರುವುದಾಗಿ ಕವಿರಾಜ್ ಹೇಳಿದ್ರು.

ಅಲ್ಲದೆ ಕಾಳಿದಾಸ ಚಿತ್ರದ ಮೆಸೇಜ್ ಎಲ್ಲಾ ವರ್ಗದ ಜನರಿಗೂ ಕನೆಕ್ಟ್ ಆಗಿದ್ದು, ಚಿತ್ರ ನೋಡಿದ ಎಲ್ಲಾ ಪ್ರೇಕ್ಷಕರು ಚಿತ್ರದ ಬಗ್ಗೆ ಮಾತಾನಡ್ತಿದ್ದಾರೆ. ನಾವು ಗೋಗರೆದ್ರು ನಮ್ಮ ಚಿತ್ರಗಳಿಗೆ ಸ್ಕ್ರೀನ್ ಕೊಡದ ಮಲ್ಟಿಪ್ಲೆಕ್ಸ್​​ಗಳು ಅವರಾಗಿಯೇ ಶೋಗಳನ್ನು ಹೆಚ್ಚು ಕೊಟ್ಟಿದ್ದಾರೆ. ಇದು ನಮಗೆ ತುಂಬಾ ಖುಷಿಯ ವಿಷಯ ಎಂದು ನವರಸ ನಾಯಕ ಜಗ್ಗೇಶ್, ಕಾಳಿದಾಸ ಗೆಲುವಿನ‌ ಬಗ್ಗೆ ಹೇಳಿದ್ರು.

ABOUT THE AUTHOR

...view details