ನವರಸ ನಾಯಕ ಜಗ್ಗೇಶ್ ಅಭಿನಯದ ಸಾಹಿತಿ ಕವಿರಾಜ್ ನಿರ್ದೇಶನದ "ಕಾಳಿದಾಸ ಕನ್ನಡ ಮೇಷ್ಟ್ರು" ಸಿನಿಮಾ 25 ದಿನಗಳನ್ನು ಪೂರೈಸಿದೆ. ಇಂದಿನ ಶಿಕ್ಷಣ ಪದ್ಧತಿಯ ಹುಳುಕುಗಳನ್ನು ಹಾಸ್ಯದ ಲೇಪನ ಕೊಟ್ಟು ಮನಮುಟ್ಟುವ ರೀತಿ ಕವಿರಾಜ್ ಕಾಳಿದಾಸ ಕನ್ನಡ ಮೇಷ್ಟ್ರು ಚಿತ್ರದಲ್ಲಿ ತೋರಿಸಿದ್ದಾರೆ. ಸಾಲು ಸಾಲು ಚಿತ್ರಗಳು ಲಗ್ಗೆ ಇಟ್ಟರೂ ಕನ್ನಡ ಮೇಷ್ಟ್ರು ಮಾತ್ರ ಜಗ್ಗದೆ ಭರ್ಜರಿ 25 ದಿನಗಳನ್ನು ಪೂರೈಸಿದ್ದಾರೆ.
25 ದಿನ ಪೂರೈಸಿದ 'ಕಾಳಿದಾಸ ಕನ್ನಡ ಮೇಷ್ಟ್ರು' ಪಾಠ - ನವರಸ ನಾಯಕ ಜಗ್ಗೇಶ್
ಸಾಹಿತಿ ಕವಿರಾಜ್ ನಿರ್ದೇಶನದ "ಕಾಳಿದಾಸ ಕನ್ನಡ ಮೇಷ್ಟ್ರು" ಸಿನಿಮಾ 25 ದಿನಗಳನ್ನು ಪೂರೈಸಿದೆ. ಇಂದಿನ ಶಿಕ್ಷಣ ಪದ್ಧತಿಯ ಹುಳುಕುಗಳನ್ನು ಹಾಸ್ಯದ ಲೇಪನ ಕೊಟ್ಟು ಮನಮುಟ್ಟುವ ರೀತಿ ಕವಿರಾಜ್ ಅವರು ಕಾಳಿದಾಸ ಕನ್ನಡ ಮೇಷ್ಟ್ರು ಚಿತ್ರದಲ್ಲಿ ತೋರಿಸಿದ್ದಾರೆ.
ಇನ್ನು ಪ್ರೀಮಿಯರ್ ಪದ್ಮಿನಿ ಚಿತ್ರದ ನಂತರ ಜಗ್ಗೇಶ್ ಅಭಿನಯದ ಈ ಚಿತ್ರಕ್ಕೆ ವಿದೇಶದಲ್ಲಿ ಡಿಮ್ಯಾಂಡ್ ಹೆಚ್ಚಾಗಿದ್ದು, ಮುಂದಿನ ವಾರ ಅಮೆರಿಕ, ಆಸ್ಟ್ರೇಲಿಯಾ, ಇಂಗ್ಲೆಂಡ್ ಸೇರಿದಂತೆ ಯುರೋಪ್ ದೇಶಗಳಲ್ಲಿ ಕಾಳಿದಾಸ ಕನ್ನಡ ಮೇಷ್ಟ್ರು ಚಿತ್ರ ಬಿಡುಗಡೆ ಮಾಡಲು ವಿತರಕರು ಮುಂದೆ ಬಂದಿದ್ದಾರೆ ಎಂದು ನಿರ್ದೇಶಕ ಕವಿರಾಜ ತಮ್ಮ ಸಂತಸ ಹಂಚಿಕೊಂಡರು.
ಅಲ್ಲದೆ ಇದೇ ತಿಂಗಳ 22 ರಂದು ಹೈದರಾಬಾದ್ನಲ್ಲಿ ಕಾಲಿವುಡ್ ನಟರಿಗಾಗಿ ವಿಶೇಷ ಪ್ರದರ್ಶನ ಏರ್ಪಡಿಸಲಾಗಿದೆ. ತಮಿಳು ಹಾಗೂ ತೆಲುಗು ನಿರ್ಮಾಪಕರು ರಿಮೇಕ್ ರೈಟ್ಸ್ ಕೇಳಿಕೊಂಡು ಬಂದಿದ್ದಾರೆ ಎಂದು ಕವಿರಾಜ್ ಕನ್ನಡ ಮೇಷ್ಟ್ರು ಸಕ್ಸಸ್ ಬಗ್ಗೆ ಹೇಳಿಕೊಂಡರು. ಅಲ್ಲದೆ ಈಗಾಗಲೇ ಕನ್ನಡ ಮೇಷ್ಟ್ರು ಪಾಠಕ್ಕೆ ರಾಜ್ಯದ ಜನ ತಲೆದೂಗಿದ್ದು, ಈ ಚಿತ್ರವನ್ನು ನಮ್ಮ ಮುಖ್ಯಮಂತ್ರಿ ಯಡಿಯೂರಪ್ಪ ಶೀಘ್ರದಲ್ಲೇ ವೀಕ್ಷಿಸುತ್ತಾರೆ ಎಂದು ನಟ ಜಗ್ಗೇಶ್ ತಿಳಿಸಿದ್ರು.