ತೆಲುಗಿನ ಕ್ಯೂಟ್ ಅಂಡ್ ಮೋಸ್ಟ್ ಬ್ಯೂಟಿಫುಲ್ ಹಿರೋಯಿನ್ ಕಾಜಲ್ ಅಗರ್ವಾಲ್ ಅವರ ಮೇಣದ ಪ್ರತಿಮೆಯು ಶೀಘ್ರದಲ್ಲೇ ಪ್ರತಿಷ್ಟಿತ ಸಿಂಗಾಪುರದ ಮ್ಯಾಡಂ ಟುಸ್ಸೆಡ್ಸ್ ಮ್ಯೂಸಿಯಂ ಸೇರಲಿದೆ.
ಹೌದು ಸಿಂಗಾಪುರದಲ್ಲಿರುವ ಮೇಡಂ ಟುಸ್ಸಾಡ್ಸ್ ನಲ್ಲಿ ನಟಿ ಕಾಜಲ್ ಅಗರ್ವಾಲ್ ಅವರ ಮೇಣದ ಪ್ರತಿಮೆಯನ್ನು ಅನಾವರಣ ಮಾಡಲಾಗುತ್ತಿದೆ. 2020ರ ಫೆಬ್ರವರಿ 5 ರಂದು ನಡೆಯುವ ಕಾರ್ಯಕ್ರಮದಲ್ಲಿ ಕಾಜಲ್ ಪ್ರತಿಮೆಯನ್ನು ಅನಾವಣ ಮಾಡಲಾಗುತ್ತದೆ.
ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿರುವ ಕಾಜಲ್ ಅಗರ್ವಾಲ್, ನನಗೆ ಕತೂಹಲ ಶುರುವಾಗಿದೆ. ಅಲ್ಲದೆ ನನಗೆ ಹೆಮ್ಮೆ ಅನಿಸುತ್ತಿದೆ ನನ್ನ ಪ್ರತಿಮೆಯನ್ನು ನಾನೇ ಅನಾವಣ ಮಾಡುತ್ತಿರುವುದು. ನನ್ನ ನಟನಾ ಬದುಕು ನನ್ನನ್ನು ಜಗತ್ತಿಗೆ ಪರಿಚಯಿಸಿದೆ ಎಂದು ಬರೆದುಕೊಂಡಿದ್ದಾರೆ.
ಇನ್ನು ಮೇಡಂ ಟುಸ್ಸಾಡ್ಸ್ನಲ್ಲಿ ಹಲವಾರು ಗಣ್ಯರ ಮೇಣದ ಪ್ರತಿಮೆಯನ್ನು ಈ ಹಿಂದೆ ಅನಾವರಣ ಮಾಡಲಾಗಿದೆ. ಇವರ ಸಾಲಿಗೆ ಹೊಸದಾಗಿ ಕಾಜಲ್ ಅಗರ್ವಾಲ್ ಸೇರಿಕೊಳ್ಳುತ್ತಿದ್ದಾರೆ.