ತಾಜ್ಮಹಲ್ ಪ್ರಪಂಚದ ಅದ್ಭುತ ಕಟ್ಟಡಗಳಲ್ಲಿ ಒಂದು. ಆಗ್ರಾಗೆ ಭೇಟಿ ನೀಡುವ ಯಾರೇ ಆಗಲಿ ಈ ಸುಂದರವಾದ ಪ್ರೇಮಸೌಧವನ್ನು ನೋಡದೆ ಇರಲಾರರು. ಇನ್ನು ಮಗಧೀರ ಸುಂದರಿ ಕಾಜಲ್ ಅಗರ್ವಾಲ್ ಮೊದಲ ಬಾರಿಗೆ ತಾಜ್ ಮಹಲ್ ನೋಡಿ ವಾಹ್ ತಾಜ್ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ.
ಮೊದಲ ಬಾರಿ ವಿಶ್ವದ 8ನೇ ಅದ್ಭುತ ನೋಡಿ ವಾಹ್ ತಾಜ್ ಎಂದ ಮಗಧೀರ ಬೆಡಗಿ..!
ಮೊದಲ ಬಾರಿ ತಾಜ್ಮಹಲ್ ನೋಡುತ್ತಿದ್ದಂತೆ ಮಗಧೀರ ಚೆಲುವೆ ಕಾಜಲ್ ಅಗರ್ವಾಲ್ ಫಿದಾ ಆಗಿ ಹೋಗಿದ್ದಾರೆ. ಈ ಸುಂದರ ಕಟ್ಟಡದ ಅಂದವನ್ನು ಹೊಗಳಿರುವ ಕಾಜಲ್ ಅಲ್ಲಿ ತೆಗೆಸಿಕೊಂಡಿರುವ ಪೋಟೋಗಳನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ತಮ್ಮ ಬ್ಯುಸಿ ಶೆಡ್ಯೂಲ್ ನಡುವೆ ಬಿಡುವು ಮಾಡಿಕೊಂಡು ಮೊದಲ ಬಾರಿಗೆ ಕಾಜಲ್ ತಾಜ್ ಮಹಲ್ ನೋಡಿದ್ದಾರೆ. ಅದೂ ಕೂಡಾ ತಮ್ಮ ಪ್ರೀತಿಯ ತಂದೆಯೊಂದಿಗೆ ಕಾಜಲ್ ಈ ಪ್ರೇಮಸೌಧಕ್ಕೆ ಭೇಟಿ ನೀಡಿದ್ದಾರೆ. ಇನ್ನು ಮೊದಲ ಬಾರಿ ತಾಜ್ ಮಹಲ್ ನೋಡುತ್ತಿದ್ದಂತೆ 'ವಾಹ್ ತಾಜ್' ಎಂದು ಉದ್ಘಾರ ತೆಗೆದಿರುವ ಕಾಜಲ್ ಕಟ್ಟಡವನ್ನು ನೋಡುತ್ತಿದ್ದಂತೆ ತಮಗಾದ ಅನುಭವವನ್ನು ಹಾಗೂ ಅಲ್ಲಿ ತಮ್ಮ ತಂದೆಯೊಂದಿಗೆ ತೆಗೆಸಿಕೊಂಡ ಪೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. 'ತಾಜ್ಮಹಲ್ ನೋಡಿದ ಕೂಡಲೇ ನನಗೆ ಮಾತೇ ಹೊರಡಲಿಲ್ಲ. ಅದರ ಅಂದ ನೋಡಿ ಫಿದಾ ಆಗಿ ಹೋದೆ, ಇದರ ಹಿಂದಿನ ಕಥೆ ತಿಳಿದ ಮೇಲೆ ಬಹಳ ಆಶ್ಚರ್ಯವಾಯಿತು. ಮನಸ್ಸನ್ನು ಆಕರ್ಷಿಸುವ ತಾಜ್ಮಹಲ್ ಬಗ್ಗೆ ಬಹಳ ಸಾರಿ ಕೇಳಿದ್ದೆ, ಆದರೆ ಈಗ ಕಣ್ಣಾರೆ ನೋಡಿ ಸಂತೋಷವನ್ನು ಆಹ್ವಾದಿಸಿದೆ. ತಾಜ್ಮಹಲ್ ನನ್ನ ಮನಸ್ಸಿನಲ್ಲಿ ಅಳಿಸಲಾರದ ಮುದ್ರೆ ಒತ್ತಿದೆ. ವಂಡರ್ ಆಫ್ ದಿ ವರ್ಲ್ಡ್ ಎಂದು ತಮ್ಮ ಪೋಟೋಗೆ ಕ್ಯಾಪ್ಷನ್ ನೀಡಿದ್ದಾರೆ. ಇನ್ನು ಕಾಜಲ್ ಸದ್ಯಕ್ಕೆ ಪ್ಯಾರಿಸ್ ಪ್ಯಾರಿಸ್, ಕಾಲ್ ಸೆಂಟರ್, ಮುಂಬಯಿ ಸೆಗಾ, ಭಾರತೀಯುಡು-2 ಸೇರಿ 4-5 ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ.