ಕಳೆದ ಅಕ್ಟೋಬರ್ನಲ್ಲಿ ಬಹುಭಾಷಾ ನಟಿ ಕಾಜಲ್ ಅಗರ್ವಾಲ್ ಗೌತಮ್ ಕಿಚ್ಲು ಜೊತೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಇದಾದ ಮೇಲೆ ಮಾಲ್ಡೀವ್ಸ್ಗೆ ತೆರಳಿ ಹನಿಮೂನ್ ಮಾಡಿಕೊಂಡು ಎಂಜಾಯ್ ಮಾಡಿದ್ದ ನಟಿ, ಇದೀಗ ತಮ್ಮ ವೃತ್ತಿ ಜೀವನಕ್ಕೆ ಮರಳಿದ್ದಾರೆ. ಹೊಸ ಚಿತ್ರದಲ್ಲಿ ನಟಿಸಲು ಸಹಿ ಕೂಡಾ ಹಾಕಿದ್ದಾರೆ.
ಕಾಜಲ್ ಅಗರ್ವಾಲ್ ಮತ್ತು ಗೌತಮ್ ಹೌದು ನಟಿ ಕಾಜಲ್ ಅಗರ್ವಾಲ್ ಸದ್ಯ ಕಲ್ಯಾಣ್ ನಿರ್ದೇಶನ ಮಾಡುತ್ತಿರುವ 'ಗೋಸ್ಟಿ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರ ಹಾರರ್ ಅಂಶಗಳನ್ನು ಹೊಂದಿದ್ದು, ಮಹಿಳಾ ಪ್ರಧಾನ ಸಿನಿಮಾ ಎಂಬುದು ಮೂಲಗಳಿಂದ ತಿಳಿದು ಬಂದಿದೆ. ಮದುವೆ ನಂತ್ರ ಕಾಜಲ್ ಸಹಿ ಹಾಕಿರುವ ಮೊದಲ ಪ್ರಾಜೆಕ್ಟ್ ಇದಾಗಿದೆ.
ಕಾಜಲ್ ಅಗರ್ವಾಲ್ ಮತ್ತು ಗೌತಮ್ ಗೋಸ್ಟಿ' ಚಿತ್ರದಲ್ಲಿ ಸುಮಾರು 23 ಜನ ಪೋಷಕ ಹಾಗೂ ಹಾಸ್ಯ ಕಲಾವಿದರು ನಟಿಸುತ್ತಿದ್ದು, ಯೋಗಿ ಬಾಬು, ಊರ್ವಶಿ, ಟೋನಿ, ಮೊಟ್ಟೈ ರಾಜೇಂದ್ರನ್, ದೇವ ದರ್ಶನಿ, ಶ್ರೀಮಾನ್ ಬಣ್ಣ ಹಚ್ಚುವ ಸಾಧ್ಯತೆ ಇದೆ ಎನ್ನಲಾಗಿದೆ. ಆದ್ರೆ ಸಿನಿಮಾ ಬಗ್ಗೆ ಇನ್ನೂ ಅಧಿಕೃತವಾಗಿ ಎಲ್ಲೂ ಘೋಷಣೆ ಮಾಡಿಲ್ಲ.
ಕಾಜಲ್ ಅಗರ್ವಾಲ್ ಮತ್ತು ಗೌತಮ್ ಗೋಸ್ಟಿ ಸಿನಿಮಾವನ್ನು ಹೊರತುಪಡಿಸಿದರೆ ಕಾಜಲ್ ಈಗಾಗಲೇ ಹಲವು ಸಿನಿಮಾಕ್ಕೆ ಸಹಿ ಹಾಕಿದ್ದಾರೆ. ಕಮಲ್ ಹಾಸನ್ ನಟನೆಯ ಇಂಡಿಯನ್ 2, ಚಿರಂಜೀವಿ ನಟನೆಯ ಆಚಾರ್ಯ, ಹೇ ಸಿನಾಮಿಕಾ, ಪ್ಯಾರಿಸ್ ಪ್ಯಾರಿಸ್, ಮೋಸಗಾಳ್ಳು ಹಾಗೂ ಮುಂಬೈ ಸಗಾ ಚಿತ್ರಗಳಲ್ಲಿ ಕಾಜಲ್ ನಟಿಸುತ್ತಿದ್ದಾರೆ.