ಕರ್ನಾಟಕ

karnataka

ETV Bharat / sitara

ಸೆಲಬ್ರಿಟಿಯಾಗಿ ಈ ಬಟ್ಟೆಗೆ ಅಷ್ಟು ಖರ್ಚು ಮಾಡದಿದ್ದರೆ ಹೇಗೆ...? - Kajal agarwal in Maldives

ಮಾಲ್ಡೀವ್ಸ್ ಸಮುದ್ರ ತೀರದಲ್ಲಿ ನಿಂತಿರುವ ಫೋಟೋದಲ್ಲಿ ಕಾಜಲ್ ಅಗರ್​ವಾಲ್ ಧರಿಸಿರುವ ಸಿಂಪಲ್ ಔಟ್​​ಫಿಟ್ ಬೆಲೆ 13 ಸಾವಿರ ರೂಪಾಯಿ ಅಂತೆ. ಇದನ್ನು ನೋಡಿ ಕೆಲವರು ಇಷ್ಟು ಸಿಂಪಲ್ ಬಟ್ಟೆಗೆ ಅಷ್ಟು ದುಡ್ಡಾ ಎಂದು ಕಮೆಂಟ್ ಮಾಡಿದರೆ ಮತ್ತೆ ಕೆಲವರು ಇನ್ನೂ ಹೆಚ್ಚು ಹಣ ಕೊಟ್ಟಿದ್ರೂ ಪರವಾಗಿಲ್ಲ ಎಂದಿದ್ದಾರೆ.

Kajal Agarwal out fit cost
ಕಾಜಲ್ ಅಗರ್​ವಾಲ್ ಔಟ್​​ಫಿಟ್

By

Published : Nov 23, 2020, 2:27 PM IST

ಟಾಲಿವುಡ್ ಖ್ಯಾತ ನಟಿ ಕಾಜಲ್ ಅಗರ್​ವಾಲ್ ಇತ್ತೀಚೆಗೆ ಉದ್ಯಮಿ ಗೌತಮ್​ ಕಿಚ್ಲು ಜೊತೆ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದು ನಿಮಗೆ ತಿಳಿದಿರುವ ವಿಚಾರ. ಮುಂಬೈನಲ್ಲಿ ನಡೆದ ಮದುವೆಗೆ ಎರಡೂ ಕುಟುಂಬದವರು ಹಾಗೂ ಆಪ್ತರು ಮಾತ್ರ ಹಾಜರಾಗಿದ್ದರು.

ಮದುವೆ ಮುಗಿದ ನಂತರ ಪತಿ ಗೌತಮ್ ಜೊತೆ ಕಾಜಲ್​ ಅಗರ್​ವಾಲ್​ ಮಾಲ್ಡೀವ್ಸ್​​​​​​​​​​​​ಗೆ ತೆರಳಿದ್ದು ಅಲ್ಲಿನ ಸುಂದರ ಕ್ಷಣಗಳನ್ನು ತಮ್ಮ ಇನ್ಸ್ಟಾಗ್ರಾಮ್​​​ನಲ್ಲಿ ಹಂಚಿಕೊಂಡಿದ್ದರು. ಈ ಫೊಟೋದಲ್ಲಿ ಕಾಜಲ್ ಅಗರ್​​ವಾಲ್​​​​ ಒಂದು ಕೆಂಪು ಬಣ್ಣದ ಔಟ್​​​ಫಿಟ್ ಧರಿಸಿದ್ದಾರೆ. ಇದು ನೋಡಲು ಬಹಳ ಸರಳವಾಗಿದೆ. ಆದರೆ ಇದರ ಬೆಲೆ 13 ಸಾವಿರ ಅಂತೆ. ಆ ಬಟ್ಟೆಗೂ , ಬಟ್ಟೆಯ ಬೆಲೆಗೂ ಅಜಗಜಾಂತರ ವ್ಯತ್ಯಾಸವಿದೆ. ಆದರೆ ಸೆಲಬ್ರಿಟಿಗಳು ಎಂದ ಮೇಲೆ ಅಷ್ಟೂ ಖರ್ಚು ಮಾಡದಿದ್ದರೆ ಹೇಗೆ..? ಈ ಫೋಟೋದಲ್ಲಿ ಕಾಜಲ್ ಧರಿಸಿರುವ ಬಟ್ಟೆ, ಕಿವಿ ಓಲೆ, ಕ್ಯಾಪ್, ಸನ್​ ಗ್ಲಾಸ್, ಸ್ಲಿಪ್ಪರ್ ಎಲ್ಲಾ ಸೇರಿ ಏನಿಲ್ಲಾ ಎಂದರೂ 50 ಸಾವಿರಷ್ಟು ಖರ್ಚಾಗಿದೆಯಂತೆ. ಇಷ್ಟು ಸಿಂಪಲ್ ಬಟ್ಟೆಗೆ ಕಾಜಲ್ ಇಷ್ಟು ಹಣ ಖರ್ಚು ಮಾಡಿದ್ದಾರೆ. ಇನ್ನು ಪಾರ್ಟಿ, ಫಂಕ್ಷನ್​​ಗಳಿಗೆ ತೊಡುವ ಬಟ್ಟೆಗಳಿಗೆ ಇನ್ನೆಷ್ಟು ಖರ್ಚು ಮಾಡುತ್ತಾರೋ ಎಂದು ಅಭಿಮಾನಿಗಳು ಹುಬ್ಬೇರಿಸುತ್ತಿದ್ದಾರೆ. ಆದರೆ ಕೆಲವರು ಈ ಬಟ್ಟೆ ಬೆಲೆ ಕಡಿಮೆ ಆಯ್ತು, ಕಾಜಲ್ ರೇಂಜ್​​​ಗೆ ಇನ್ನೂ ಹೆಚ್ಚು ಹಣ ಕೊಟ್ಟು ಖರೀದಿಸಬಹುದಿತ್ತು ಎಂದು ಕಮೆಂಟ್ ಮಾಡುತ್ತಿದ್ದಾರೆ.

ಸಿನಿಮಾ ವಿಚಾರಕ್ಕೆ ಬರುವುದಾದರೆ ಮದುವೆ ನಂತರ ಕೂಡಾ ಸಿನಿಮಾಗಳಲ್ಲಿ ನಟಿಸುತ್ತೇನೆ ಎಂದು ಕಾಜಲ್ ಇದಕ್ಕೂ ಮುನ್ನವೇ ಹೇಳಿದ್ದರು. ಸದ್ಯಕ್ಕೆ ಅವರು ಭಾರತೀಯುಡು 2, ಆಚಾರ್ಯ ಹಾಗೂ ಮೋಸಗಾಳ್ಳು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಕೆಲವು ದಿನಗಳ ನಂತರ ಮತ್ತೆ ಕಾಜಲ್ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ.

ABOUT THE AUTHOR

...view details