ಕರ್ನಾಟಕ

karnataka

ETV Bharat / sitara

ರಿಯಲ್ ಸ್ಟಾರ್ ಅಭಿನಯದ 'ಕಬ್ಜ' ಚಿತ್ರದ ವೆಬ್‌ಸೈಟ್ ಬಿಡುಗಡೆ ಮಾಡಿದ ಹ್ಯಾಟ್ರೀಕ್​​ ಹೀರೊ - kabza kannada film website relesed

ಉಪೇಂದ್ರ ನಟನೆಯ ಕಬ್ಜ ಸಿನಿಮಾ ಏಳು ಭಾಷೆಯಲ್ಲಿ ಬರ್ತಾ ಇರೋದು ಖುಷಿ ವಿಚಾರ. ಸಿನಿಮಾಗೆ ದೊಡ್ಡ ಮಟ್ಟದಲ್ಲಿ ಯಶಸ್ಸು ಸಿಗಲಿ. ಈಗಾಗಲೇ ಅರ್ಧ ಭಾಗ ಶೂಟಿಂಗ್ ಮುಗಿದಿದೆ. ಸ್ವತಃ ಉಪೇಂದ್ರಗೂ ಹೊಸ ಲುಕ್​ನಲ್ಲಿ ಕಾಣಿಸಿಕೊಳ್ಳುತ್ತಿರುವ ಬಗ್ಗೆ ಹೆಮ್ಮೆ ಇದೆ..

kabza-film-web-site-released-by-shivaraj-kumar
ಕಬ್ಜ ಚಿತ್ರದ ವೆಬ್ ಸೈಟ್

By

Published : Aug 30, 2020, 4:49 PM IST

ಸ್ಯಾಂಡಲ್‌ವುಡ್ ಅಲ್ಲದೇ ಬೇರೆ ಭಾಷೆಯಲ್ಲಿ, ‌ಒಂದಲ್ಲ‌ ಒಂದು‌ ವಿಷ್ಯಕ್ಕೆ ಸಿಕ್ಕಾಪಟ್ಟೇ ಸೌಂಡ್ ಮಾಡ್ತಿರೋ ಚಿತ್ರ ಕಬ್ಜ. ಉಪೇಂದ್ರ ಅಭಿನಯದ ಆರ್. ಚಂದ್ರು ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾ ಇದು.

ಬಹುಕೋಟಿ ವೆಚ್ಚದಲ್ಲಿ ನಿರ್ಮಾಣ ಆಗುತ್ತಿರುವ ಸಿನಿಮಾ ಕಬ್ಜ, ಕೊರೊನಾ ಕಾರಣದಿಂದ ಕಳೆದ ಐದು ತಿಂಗಳಿನಿಂದ ಸಿನಿಮಾ ಚಿತ್ರೀಕರಣಕ್ಕೆ ಸಾಧ್ಯವಾಗಿರಲಿಲ್ಲ. ಈಗ ಸರ್ಕಾರದ ಆದೇಶ‌ ಮೇರೆಗೆ ಸಿನಿಮಾ ಚಿತ್ರೀಕರಣ ಗ್ರೀನ್ ಸಿಗ್ನಲ್ ಸಿಕ್ಕಿದೆ.

'ಕಬ್ಜ' ಚಿತ್ರದ ವೆಬ್‌ಸೈಟ್ ಬಿಡುಗಡೆ

ನಿರ್ದೇಶಕ ಆರ್. ಚಂದ್ರು ಕಬ್ಜ ಚಿತ್ರದ ಮಾಹಿತಿಗಾಗಿ ಏಳು ಭಾಷೆಯಲ್ಲಿ www.kabzamovie.com ಎಂಬ ಜಾಲತಾಣವನ್ನು ಹ್ಯಾಟ್ರಿಕ್ ಹೀರೊ ಶಿವರಾಜ್‌ಕುಮಾರ್, ಪರಿಷತ್‌ ಸದಸ್ಯ ಎಂಟಿಬಿ ನಾಗರಾಜ್, ‌ವೈದ್ಯೆ ಸೌಜನ್ಯ ವಸಿಷ್ಠ ಸಮ್ಮುಖದಲ್ಲಿ ಲಾಂಚ್​​ ಮಾಡಿದರು.

ಸಿನಿಮಾ ವೆಬ್‌ಸೈಟ್​​​ ಬಿಡುಗಡೆ ಮಾಡಿ ಮಾತನಾಡಿದ ಅವರು, ಮಾಜಿ ಶಾಸಕ ಎಂಟಿಬಿ ನಾಗರಾಜ್, ಆರ್‌ ಚಂದ್ರು ಸಿನಿಮಾ ಪ್ಯಾಷನ್ ನೋಡಿ, ನಾನು ಈ ಸಿನಿಮಾಗೆ ಸಪೋರ್ಟ್ ಮಾಡ್ತಾ ಇದ್ದೀನಿ. ನಾನು ನಾಟಕಗಳನ್ನ ಮಾಡುತ್ತಾ ಬಂದಿರೋ ಕಾರಣ ಸಿನಿಮಾ ಮೇಲೆ ಆಸಕ್ತಿ ಇದೆ. ಈ ಚಿತ್ರಕ್ಕೆ ಒಳ್ಳೆಯದಾಗಲಿ ಅಂತಾ ಹಾರೈಯಿಸಿದ್ರು.

ಶಿವರಾಜ್‌ಕುಮಾರ್ ಮಾತನಾಡಿದ ಅವರು, ಉಪೇಂದ್ರ ನಟನೆಯ ಕಬ್ಜ ಸಿನಿಮಾ ಏಳು ಭಾಷೆಯಲ್ಲಿ ಬರ್ತಾ ಇರೋದು ಖುಷಿ ವಿಚಾರ. ಸಿನಿಮಾಗೆ ದೊಡ್ಡ ಮಟ್ಟದಲ್ಲಿ ಯಶಸ್ಸು ಸಿಗಲಿ. ಈಗಾಗಲೇ ಅರ್ಧ ಭಾಗ ಶೂಟಿಂಗ್ ಮುಗಿದಿದೆ. ಸ್ವತಃ ಉಪೇಂದ್ರಗೂ ಹೊಸ ಲುಕ್​ನಲ್ಲಿ ಕಾಣಿಸಿಕೊಳ್ಳುತ್ತಿರುವ ಬಗ್ಗೆ ಹೆಮ್ಮೆ ಇದೆ ಎಂದರು.

ಸ್ಟಾರ್ ನಟಿಯೊಬ್ಬರು ಸಿನಿಮಾ ನಾಯಕಿಯಾಗಿದ್ದಾರೆ. ಸದ್ಯ ಕನ್ನಡ, ತೆಲುಗು, ‌ತಮಿಳು, ‌ಹಿಂದಿ,‌ ಮಲೆಯಾಳಂ‌ ಹೀಗೆ ಏಳು ಭಾಷೆಯ ಸಿನಿಮಾ ಪ್ರಿಯರಿಗೆ ತಮ್ಮ ಸಿನಿಮಾದ ಬಗ್ಗೆ ಮಾಹಿತಿ ಸಿಗಲಿ ಅಂತಾ ಈ ಜಾಲತಾಣ ರೆಡಿಮಾಡಿದ್ದಾರೆ. ಚಿತ್ರದ ಕಲಾವಿದರು ಹಾಗೂ ತಂತ್ರಜ್ಞಾನ ಕುರಿತು ಈ ವೆಬ್‌ಸೈಟ್​ನಲ್ಲಿ ಮಾಹಿತಿ‌‌‌ ಸಿಗಲಿದೆ.

ABOUT THE AUTHOR

...view details