ಮುಂಬೈ:ಕಬೀರ್ ಸಿಂಗ್ ಸಿನಿಮಾ ಬಾಲಿವುಡ್ ಅಂಗಳದಲ್ಲಿ ಕಮಾಲ್ ಮಾಡಿದ್ದ ಚಿತ್ರ. ಸದ್ಯ ಈ ಚಿತ್ರಕ್ಕೆ ಒಂದು ವರ್ಷ ಪೂರ್ಣಗೊಂಡಿದ್ದು, ನಟ ಶಾಹೀದ್ ಕಪೂರ್ ಹಾಗೂ ಕೈರಾ ಅಡ್ವಾಣಿ ಸಾಮಾಜಿಕ ಜಾಲತಾಣದಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿರುವ ಶಾಹೀದ್ ಕಪೂರ್, "ಈ ಚಿತ್ರ ನನಗೆ ತುಂಬಾ ವಿಶೇಷವಾದುದು. ಸಿನಿಮಾದಲ್ಲಿನ ನನ್ನ ನಟನೆ, ಪಾತ್ರಕ್ಕೆ ನೀವು ನೀಡಿದ ಪ್ರೀತಿಗೆ ನಾನ್ನ ಧನ್ಯವಾದಗಳು. ಈ ಸಿನಿಮಾ ಕೇವಲ ಸಾಮಾನ್ಯ ಸಿನಿಮಾವಲ್ಲ. ಈ ಚಿತ್ರ ಪ್ರಾಮಾಣಿಕ, ನಿರ್ಭೀತ, ನೈಜವಾದ ಭಾವನಾತ್ಮಕ ಚಾಪನ್ನು ಬಿಂಬಿಸುತ್ತದೆ ಎಂದಿದ್ದಾರೆ.
"ಜನರು ತ್ವರಿತವಾಗಿ ನಿರ್ಣಯಿಸುವ ಸಮಯದಲ್ಲಿ (ಇತರರು ತಮ್ಮನ್ನು ಅಲ್ಲ), ನೀವು ನನ್ನ ಪಾತ್ರವನ್ನು ಅರ್ಥಮಾಡಿಕೊಂಡಿದ್ದೀರಿ. ಮುರಿದ ಹೃದಯದ ಉದ್ವೇಗದ ಬಗ್ಗೆ ನಾವು ಬಿಂಬಿಸಿದ ನಮ್ಮ ವ್ಯಾಖ್ಯಾನವನ್ನು ನೀವು ಅರ್ಥಮಾಡಿಕೊಂಡಿದ್ದೀರಿ. ಇದು ಯಾವಾಗಲೂ ವಿಶೇಷವಾಗಿರುತ್ತದೆ "ಎಂದು ತಿಳಿಸಿದ್ದಾರೆ .