ಬಾಲಿವುಡ್ನಲ್ಲಿ ಧೂಳೆಬ್ಬಿಸುತ್ತಿರುವ ಕಬೀರ್ಸಿಂಗ್ ಸಿನಿಮಾ ಎರಡೇ ವಾರಕ್ಕೆ ಬರೋಬ್ಬರಿ ಎರಡು ಕೋಟಿಯನ್ನು ಬಾಚಿದೆ.
ಎರಡೇ ವಾರಕ್ಕೆ 200 ಕೋಟಿ ದೋಚಿದ ಕಬೀರ...! - 200 ಕೋಟಿ
ಬಾಲಿವುಡ್ನಲ್ಲಿ ಧೂಳೆಬ್ಬಿಸುತ್ತಿರುವ ಕಬೀರ್ಸಿಂಗ್ ಸಿನಿಮಾ ಎರಡೇ ವಾರಕ್ಕೆ ಬರೋಬ್ಬರಿ ಎರಡು ಕೋಟಿಯನ್ನು ಬಾಚಿದೆ.
ಹೌದು ಎ ಸರ್ಟಿಫಿಕೇಟ್ ಪಡೆದ ಹಿಂದಿಯ ಸಿನಿಮಾ ಇದೇ ಮೊದಲ ಬಾರಿಗೆ 200 ಕೋಟಿ ಗಳಿಸಿರುವುದು. ಎ ಸರ್ಟಿಫಿಕೇಟ್ ಪಡೆದರೂ ಕೂಡ 200 ಕೋಟಿ ಗಳಿಕೆ ಮಾಡಿದ್ದು ಬಾಲಿವುಡ್ ಮಂದಿ ನಿಬ್ಬೆರಗಾಗಿದ್ದಾರೆ. ಸಿನಿಮಾ ಬಿಡುಗಡೆಯಾದ ಎರಡೇ ವಾರಕ್ಕೆ ಅಂದರೆ, ಕಳೆದ ಶುಕ್ರವಾರ 12,21 ಕೋಟಿ, ಶನಿವಾರ 17.10 ಕೋಟಿ, ಭಾನುವಾರ 9.07 ಕೋಟಿ, ಹಾಗೂ ಸೋಮವಾರ 8.31 ಕೋಟಿಯನ್ನು ಗಳಿಕೆ ಮಾಡಿದೆ.
ಇನ್ನು 2019ರ ಸಿನಿಮಾಗಳ ಪೈಕಿ ಈ ಸಿನಿಮಾ ಅತಿ ಹೆಚ್ಚು ಗಳಿಕೆ ಮಾಡುವ ಸಿನಿಮಾವಾಗುತ್ತದೆ ಎಂದು ಸಿನಿಮಾ ಮಂದಿ ಮಾತನಾಡುತ್ತಿದ್ದಾರೆ.
ಈ ಸಿನಿಮಾವು ತೆಲುಗಿನ ಅರ್ಜುನ್ ರೆಡ್ಡಿಯ ರಿಮೇಕ್ ವರ್ಶನ್ ಆಗಿದ್ದು, ಸಂದೀಪ್ ವಂಗ ನಿರ್ದೇಶನ ಮಾಡಿದ್ದಾರೆ, ಸಿನಿ1 ಸ್ಟುಡಿಯೋಸ್ ಮತ್ತು ಟಿ-ಸಿರೀಸ್ ನೇತೃತ್ವದಲ್ಲಿ ನಿರ್ಮಾಣವಾಗಿದೆ. ಇನ್ನು ಶಾಹಿದ್ ಕಪೂರ್ ಮತ್ತು ಕೈರಾ ಅಡ್ವಾಣಿ ಸಿನಿಮಾದಲ್ಲಿ ನಾಯಕ ನಾಯಕಿಯಾಗಿದ್ದಾರೆ.