ಕರ್ನಾಟಕ

karnataka

ETV Bharat / sitara

ಟ್ಯಾಗ್​ಲೈನ್ ವಿಜೇತರಿಗೆ 50,000 ನೀಡಿದ 'ಕಾಣದಂತೆ ಮಾಯವಾದನು' ಚಿತ್ರತಂಡ - ರಾಜ್ ಪತ್ತಿಪಾಟಿ

'ಕಾಣದಂತೆ ಮಾಯವಾದನು' ಚಿತ್ರತಂಡ ಕೆಲವು ದಿನಗಳ ಹಿಂದೆ ಏರ್ಪಡಿಸಿದ್ದ ಟ್ಯಾಗ್​​​ಲೈನ್ ಸ್ಫರ್ಧೆಯಲ್ಲಿ ವಿಜೇತರಾದವರಿಗೆ ನಿನ್ನೆ 50 ಸಾವಿರ ರೂಪಾಯಿ ಚೆಕ್ ನೀಡಿದೆ. ಇದು ಫ್ಯಾಂಟಸಿ ಸಿನಿಮಾ ಆಗಿದ್ದು, ವಿಕಾಸ್ ಹಾಗೂ ಸಿಂಧು ಲೋಕನಾಥ್ ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

'ಕಾಣದಂತೆ ಮಾಯವಾದನು'

By

Published : Sep 14, 2019, 6:12 PM IST

ಕನ್ನಡ ಚಿತ್ರರಂಗದಲ್ಲಿ ಆಗಾಗ ಸ್ಪರ್ಧೆ ಏರ್ಪಡಿಸಿ ಕಥೆ, ಚಿತ್ರಕಥೆ, ಹಾಡುಗಳನ್ನು ಬರೆಸುವುದು ಸಾಮಾನ್ಯ. ಅದರೆ ಈಗ 'ಕಾಣದಂತೆ ಮಾಯವಾದನು' ಚಿತ್ರತಂಡ ಡಿಫರೆಂಟ್ ಟ್ಯಾಗ್​​​​​​ಲೈನ್ ಸ್ಫರ್ಧೆ ಏರ್ಪಡಿಸಿ ಈ ಸ್ಪರ್ಧೆಯಲ್ಲಿ ಗೆದ್ದ ವಿಜೇತರಿಗೆ ನಿನ್ನೆ 50 ಸಾವಿರ ಬಹುಮಾನ ನೀಡಿದೆ.

'ಕಾಣದಂತೆ ಮಾಯವಾದನು' ಚಿತ್ರತಂಡದಿಂದ ಚೆಕ್ ವಿತರಣೆ

ದುನಿಯಾ ವಿಜಯ್ ನಟಿಸಿ ನಿರ್ಮಿಸಿದ್ದ 'ಜಯಮ್ಮನ ಮಗ' ಚಿತ್ರದ ನಿರ್ದೇಶಕ ವಿಕಾಸ್ ಇದೀಗ 'ಕಾಣದಂತೆ ಮಾಯವಾದನು' ಸಿನಿಮಾದಿಂದ ನಾಯಕನಾಗಿ ಎಂಟ್ರಿ ಕೊಟ್ಟಿದ್ದಾರೆ. ಚಿತ್ರತಂಡ ಕೆಲವು ದಿನಗಳ ಹಿಂದೆ ಈ ಟ್ಯಾಗ್​​ಲೈನ್​​​ ಸ್ಪರ್ಧೆ ಏರ್ಪಡಿಸಿತ್ತು. ಸ್ಪರ್ಧೆಯಲ್ಲಿ ಸುಮಾರು 3000ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿ ಸುಮಾರು 3000 ಟ್ಯಾಗ್​​ಲೈನ್​ಗಳನ್ನು ಬರೆದು ಚಿತ್ರತಂಡಕ್ಕೆ ತಲುಪಿಸಿದ್ದರು. ಆ ಟ್ಯಾಗ್​​​​​​​ಲೈನ್​​​​​​​​​​​​​ಗಳಲ್ಲಿ ಕುಂದಾಪುರ ಉಪನ್ಯಾಸಕರೊಬ್ಬರು ಬರೆದಿದ್ದ 'ಗೋರಿಗೋದ್ಮೇಲೆ ಹುಟ್ಟಿದ ಸ್ಟೋರಿ' ಟ್ಯಾಗ್​​​​​​​​​​​​​​​​​​​​​​ಲೈನ್​​ಅನ್ನು ಚಿತ್ರತಂಡ ಆಯ್ಕೆ ಮಾಡಿಕೊಂಡಿದ್ದು, ನಿನ್ನೆ ವಿಜೇತ ನರೇಂದ್ರ ಎಸ್​​​.ಗಂಗೊಳ್ಳಿಗೆ ಚಿತ್ರತಂಡ 50,000 ರೂಪಾಯಿ ಚೆಕ್ ನೀಡಿ ಅಭಿನಂದಿಸಿದೆ. ಸ್ಪರ್ಧೆಯಲ್ಲಿ ಗೆದ್ದ ಹಣದಲ್ಲಿ ಸ್ವಲ್ಪ ಭಾಗವನ್ನು ಸರ್ಕಾರಿ ಶಾಲಾ ಮಕ್ಕಳಿಗೆ ನೀಡಿ ಉಳಿದಿದ್ದನ್ನು ಸ್ವಂತಕ್ಕೆ ಬಳಸಿಕೊಳ್ಳುವುದಾಗಿ ನರೇಂದ್ರ ಹೇಳಿದರು.

ವಿಕಾಸ್​​

'ಕಾಣದಂತೆ ಮಾಯವಾದನು' ಚಿತ್ರವನ್ನು ರಾಜ್ ಪತ್ತಿಪಾಟಿ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಇದು ಫ್ಯಾಂಟಸಿ ಸಿನಿಮಾವಾಗಿದ್ದು, ನಾಯಿ ಮತ್ತು ಆತ್ಮದ ಸುತ್ತ ಸುತ್ತುವ ಕಥೆಯಾಗಿದೆ ಎನ್ನಲಾಗಿದೆ. ಯಾವುದೇ ಭಯವಿಲ್ಲದೆ ಚಿಕ್ಕ ಮಕ್ಕಳು ಕೂಡಾ ಈ ಚಿತ್ರವನ್ನು ನೋಡಬಹುದು ಎಂಬುದು ಚಿತ್ರತಂಡದ ಮಾತು. ಚಿತ್ರದಲ್ಲಿ ನಾಯಕಿಯಾಗಿ ಸಿಂಧು ಲೋಕನಾಥ್ ನಟಿಸಿದ್ದು, ಈಗಾಗಲೇ ಸೆನ್ಸಾರ್ ಬೋರ್ಡಿನಿಂದ ಯು/ಎ ಸರ್ಟಿಫಿಕೇಟ್ ಪಡೆದು ರಿಲೀಸ್​​​​​​​​​​​​​​​​​​​​​​​​ಗೆ ರೆಡಿಯಿರುವ ಈ ಚಿತ್ರವನ್ನು ಸೋಮ್ ಸಿಂಗ್ ನಿರ್ಮಾಣ ಮಾಡಿದ್ದಾರೆ. ಅಕ್ಟೋಬರ್ ಅಂತ್ಯಕ್ಕೆ ಸಿನಿಮಾ ರಿಲೀಸ್ ಮಾಡಲು ನಿರ್ಮಾಪಕರು ರೆಡಿ ಇದ್ದಾರೆ.

'ಕಾಣದಂತೆ ಮಾಯವಾದನು' ಚಿತ್ರತಂಡ

ABOUT THE AUTHOR

...view details