ಕರ್ನಾಟಕ

karnataka

ವಸಿಷ್ಠ ಅಭಿನಯದ ಕಾಲಚಕ್ರ ಚಿತ್ರದ ಸಾಂಗ್ ಟೀಸರ್ ಲಾಂಚ್ ಮಾಡಿದ ಕಿಚ್ಚ..

By

Published : Oct 18, 2019, 10:23 AM IST

ಕಂಚಿನ ಕಂಠದ ನಟ ವಸಿಷ್ಠ ಸಿಂಹ ಅಭಿನಯದ 'ಕಾಲಚಕ್ರ' ಚಿತ್ರದ ಟೀಸರ್‌ನ ನಟ ಕಿಚ್ಚ ಸುದೀಪ್​ ಲಾಂಚ್​ ಮಾಡಿದ್ದಾರೆ.

ಕಾಲಚಕ್ರ ಚಿತ್ರದ ಸಾಂಗ್ ಟೀಸರ್ ಲಾಂಚ್ ಮಾಡಿದ ಕಿಚ್ಚ

ಬೆಂಗಳೂರು: ಕಂಚಿನ ಕಂಠದ ನಟ ವಸಿಷ್ಠ ಸಿಂಹ ಅಭಿನಯದ'ಕಾಲಚಕ್ರ' ಚಿತ್ರದ ಟೀಸರ್ ಲಾಂಚ್ ಆಗಿದೆ. ಚಿತ್ರದ ಟೀಸರ್‌ನ ಅಭಿನಯ ಚಕ್ರವರ್ತಿ ಕರ್ನಾಟಕದ ಮಾಣಿಕ್ಯ ಕಿಚ್ಚ ಸುದೀಪ್ ಲಾಂಚ್ ಮಾಡಿದ್ದಾರೆ.

ಕಾಲಚಕ್ರ ಚಿತ್ರದ ಸಾಂಗ್ ಟೀಸರ್ ಲಾಂಚ್ ಮಾಡಿದ ಕಿಚ್ಚ..

ಚಿತ್ರದ ಟೀಸರ್ ನೋಡಿದ ಕಿಚ್ಚ ಸುದೀಪ್​ ಮಾತನಾಡಿ ಟೀಸರ್‌ನಲ್ಲಿ ಇನ್ನೂ ಸ್ವಲ್ಪ ಕಥೆ ಬೇಕಿತ್ತು. ಚಿತ್ರದ ಪೋಸ್ಟರ್ ನೋಡಿ ನಾನು ಕ್ಯೂರಿಯಾಸಿಟಿ ಇಂದ ಬಂದಿದ್ದೆ. ಆದರೆ, ನನಗೆ ಕೊಂಚ ನಿರಾಸೆಯಾಯಿತು. ಚಿತ್ರದ ಪೋಸ್ಟರ್​ನಲ್ಲಿದ್ದ ಕಥೆಯನ್ನು ಟೀಸರ್‌ನಲ್ಲಿ ನಿರ್ದೇಶಕರು ಹೇಳಬಹುದಿತ್ತು ಎಂದ್ರು. ಚಿತ್ರ ತಂಡಕ್ಕೆ ಒಳ್ಳೆಯದಾಗಲಿ ಎಂದು ಕಾಲ ಚಕ್ರ ಟೀಂಗೆ ವಿಶ್ ಮಾಡಿದ್ರು. ಅಲ್ಲದೆ ನಟನೆಗೆ ಪ್ರಾಮುಖ್ಯತೆ ಇರುವ ಚಿತ್ರಗಳ ಜೊತೆ ಕಮರ್ಷಿಯಲ್ ಚಿತ್ರಗಳಲ್ಲಿಯೂ ನಟಿಸುವಂತೆ ಸುದೀಪ್ ವಸಿಷ್ಠಗೆ ಸಲಹೆ ನೀಡಿದ್ರು.

ಕಾಲಚಕ್ರ ಚಿತ್ರದ ಸಾಂಗ್ ಟೀಸರ್ ಲಾಂಚ್..

ಕಾಲಚಕ್ರದಲ್ಲಿ ವಸಿಷ್ಠ ಎರಡು ಶೇಡ್‌ನಲ್ಲಿ ಕಾಣಿಸಿದ್ದು, ಯುವಕ ಹಾಗು 60 ವಯಸ್ಸಿನ ಮುದುಕನ ಪಾತ್ರದಲ್ಲಿ ವಸಿಷ್ಠ ಸಿಂಹ ಮಿಂಚಿದ್ದಾರೆ. ಚಿತ್ರದಲ್ಲಿ ನಿರ್ದೇಶಕರು ನನ್ನನ್ನು ಸಂಸಾರಿಯಾಗಿ ಮಾಡಿದ್ದಾರೆ. ಚಿತ್ರದಲ್ಲಿ ಮದುಕನ ಪಾತ್ರಕ್ಕಾಗಿ ಮೇಕಪ್‌ಗೆ ಐದು ಗಂಟೆ ಸಮಯ ಬೇಕಿತ್ತು. ಸಿನಿಮಾದಲ್ಲಿನ ಪಾತ್ರ ನನ್ನನ್ನು ಬಹುವಾಗಿ ಕಾಡಿದೆ’ ಶೂಟಿಂಗ್ ನಂತರವೂ ‘ಕಾಲಚಕ್ರ’ ಚಿತ್ರ ನನ್ನನ್ನು ಕಾಡಿದ ಸಿನಿಮಾ ಎಂದು ಸಿಂಹ ತಮ್ಮ ಮನದಾಳ ಬಿಚ್ಚಿಟ್ರು.

ಕಾಲಚಕ್ರ ಚಿತ್ರದ ಸಾಂಗ್ ಟೀಸರ್ ಲಾಂಚ್..
ಕಾಲಚಕ್ರ ಚಿತ್ರದ ಸಾಂಗ್ ಟೀಸರ್ ಲಾಂಚ್..

ಈ ಚಿತ್ರವನ್ನು 'ನಾನಿ' ಚಿತ್ರ ನಿರ್ದೇಶಿಸಿದ ಸುಮಂತ್ ಕಾಂತಿ ನಿರ್ದೇಶನ ಮಾಡಿದ್ದು ಜೊತೆಗೆ ನಿರ್ಮಾಣ ಕೂಡ ಮಾಡಿದ್ದಾರೆ. ಕಾಲಚಕ್ರದ ಮತ್ತೊಂದು ಟೀಸರ್ ಹಾಗೂ ಟ್ರೈಲರ್ ರಿಲೀಸ್ ಮಾಡಲು ಪ್ಲಾನ್ ಮಾಡಿದ್ದೇವೆ ಎಂದು ನಿರ್ದೇಶಕ ಸುಮಂತ್ ಕಾಂತಿ ಹೇಳಿದ್ರು. ಈ ಚಿತ್ರ ಸುಮಂತ್ ಒಮ್ಮೆ ಪೊಲೀಸ್‌ ಆಯುಕ್ತರ ಕಚೇರಿಗೆ ಹೋಗಿದ್ದರಂತೆ. ಅಲ್ಲಿ ಕಚೇರಿ ಸ್ವಚ್ಛಗೊಳಿಸುವ ಸಿಬ್ಬಂದಿ ನಡುವೆ ನಡೆಸುತ್ತಿದ್ದ ಸಂಭಾಷಣೆಯೇ ಕಾಲಚಕ್ರಕ್ಕೆ ಸ್ಪೂರ್ತಿಯಾಗಿದೆ. ಇದು ಸೈಕಾಲಜಿ ಸಸ್ಪೆನ್ಸ್ ಥ್ರಿಲ್ಲರ್ ಆಧಾರಿತ ಕಥಾವಸ್ತು ಹೊಂದಿದೆ ಎಂದು ಸುಮಂತ್ ಕಾಂತಿ ಚಿತ್ರದ ಒನ್‌ಲೈನ್ ಹೇಳಿದ್ರು. ಇನ್ನು, ಚಿತ್ರದಲ್ಲಿ ರಕ್ಷಾ ಎಂಬ ಹೊಸ ಹುಡುಗಿ ವಸಿಷ್ಠನ ಹೆಂಡತಿ ಪಾತ್ರದಲ್ಲಿ ಕಾಣಿಸಿದ್ದಾರೆ. ನಾನು ಈ ಚಿತ್ರದ ಬಿಡುಗಡೆಗಾಗಿ ಕಾತುರದಿಂದ ಕಾಯುತ್ತಿದ್ದೇನೆ ಎಂದು ನಾಯಕಿ ರಕ್ಷಾ ಪಾತ್ರದ ವೈಶಿಷ್ಟ್ಯವನ್ನು ವಿವರಿಸಿದ್ರು.

ಕಾಲಚಕ್ರ ಚಿತ್ರದ ಸಾಂಗ್ ಟೀಸರ್ ಲಾಂಚ್..

ABOUT THE AUTHOR

...view details