ಗೋಲ್ಡನ್ ಸ್ಟಾರ್ ಗಣೇಶ್, ಸದ್ಯ 'ಗೀತಾ' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಗಣಿ ಡಬ್ಬಿಂಗ್ ಮಾಡ್ತಿದ್ದಾರೆ. ಅಲ್ಲದೆ ಡಬ್ಬಿಂಗ್ನಲ್ಲಿ ಬ್ಯುಸಿ ಇರುವ ಗಣೇಶ್ಗೆ ಜೂನಿಯರ್ ಗಣೇಶ್ ಸಾಥ್ ನೀಡಿದ್ದಾರೆ.
ಗೀತಾ ಚಿತ್ರಕ್ಕೆ ಡಬ್ಬಿಂಗ್ ಮಾಡಿದ 'ಜೂನಿಯರ್ ಗಣೇಶ್' - Golden star ganesh
ಚಂದನವನದ ನಗು ಮೊಗದ ಸರದಾರ, ಗೋಲ್ಡನ್ ಸ್ಟಾರ್ ಗಣೇಶ್, ಸದ್ಯ 'ಗೀತಾ' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಗೀತಾ ಚಿತ್ರದ ಶೂಟಿಂಗ್ ಪೂರ್ಣಗೊಂಡಿದ್ದು, ಗಣಿ ಡಬ್ಬಿಂಗ್ ಮಾಡ್ತಿದ್ದಾರೆ. ಅಲ್ಲದೆ ಡಬ್ಬಿಂಗ್ನಲ್ಲಿ ಬ್ಯುಸಿ ಇರುವ ಗಣೇಶ್ಗೆ ಜೂನಿಯರ್ ಗಣೇಶ್ ಸಾಥ್ ನೀಡಿದ್ದಾರೆ. ಈಗಾಗಲೇ ಚಿತ್ರದ ಟೀಸರ್ ಲಾಂಚ್ ಆಗಿದ್ದು, ದಸರಾ ವೇಳೆಗೆ ಚಿತ್ರ ರಿಲೀಸ್ ಆಗುವ ಸಾಧ್ಯತೆಯಿದೆ.
ಹೌದು, ಮಳೆ ಹುಡುಗ ಗಣೇಶ್ ಅಭಿನಯದ ಗೀತಾ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಮಗ ವಿಹಾನ್ ಗಣೇಶ್ ಅಭಿನಯಿಸಿದ್ದಾರೆ. ಅಲ್ಲದೆ ಅವರ ಪಾತ್ರಕ್ಕೆ ಗಣಿ ಪುತ್ರ ಡಬ್ಬಿಂಗ್ ಮಾಡಿ ಗಮನ ಸೆಳೆದಿದ್ದಾರೆ. ಗಣಿ ಪುತ್ರ ಡಬ್ಬಿಂಗ್ ಮಾಡುತ್ತಿರುವ ಫೋಟೋಗಳನ್ನು ಗೋಲ್ಡನ್ ಸ್ಟಾರ್ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
ಇನ್ನು ವಿಜಯ್ ನಾಗೇಂದ್ರ ನಿರ್ದೇಶನದ ‘ಗೀತಾ’ ಚಿತ್ರದಲ್ಲಿ ಗಣೇಶ್ಗೆ ನಾಯಕಿಯಾಗಿ ಮಲಯಾಳಂ ನಟಿ ಪಾರ್ವತಿ ಅರುಣ್ ನಟಿಸಿದ್ದಾರೆ. ಇದೇ ಚಿತ್ರದಲ್ಲಿ ವಿಹಾನ್, ಗೆಸ್ಟ್ ರೋಲ್ನಲ್ಲಿ ಮಿಂಚಿದ್ದಾರೆ. ಗಣಿ ಬರ್ತ್ಡೇಗೆ ಗೀತಾ ಚಿತ್ರದ ಟೀಸರ್ ಲಾಂಚ್ ಆಗಿದ್ದು, ಉತ್ತಮ ರೆಸ್ಪಾನ್ ಸಿಕ್ಕಿತ್ತು. ದಸರಾ ವೇಳೆಗೆ ಗೀತಾ ಚಿತ್ರ ರಿಲೀಸ್ ಆಗುವ ಸಾಧ್ಯತೆಯಿದೆ.