ಬೆಂಗಳೂರು : ಸ್ಯಾಂಡಲ್ವುಡ್ ಕನಸುಗಾರ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ದ್ವಿತೀಯ ಪುತ್ರ ವಿಕ್ರಮ್ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಡೋಕೆ ಜಬರ್ದಸ್ತಾಗಿ ರೆಡಿಯಾಗಿದ್ದಾರೆ.
ಜೂನಿಯರ್ ಕ್ರೇಜಿಸ್ಟಾರ್ ತ್ರಿವಿಕ್ರಮ ಚಿತ್ರದ ಮೂಲಕ ಚಂದನವನಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ವಿಕ್ರಮ್ ರವಿಚಂದ್ರನ್ ಅಭಿನಯದ ಮೊದಲ ಚಿತ್ರ ಅದ್ದೂರಿಯಾಗಿ ಸೆಟ್ಟೇರಿದೆ. ಮೊದಲ ಚಿತ್ರದ ಮುಹೂರ್ತ ಕಾರ್ಯಕ್ರಮಕ್ಕೆ ರವಿಚಂದ್ರನ್ ಕುಟುಂಬ ಸಾಕ್ಷಿಯಾಯಿತು. ನಾಗರಬಾವಿಯ ಶ್ರೀಮಲೆಮಹದೇಶ್ವರ ದೇವಾಲಯದಲ್ಲಿ ನಡೆದ ಚಿತ್ರದ ಮುಹೂರ್ತ ಕಾರ್ಯಕ್ರಮದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಭಾಗವಹಿಸಿದ್ದರು. ಕ್ಲ್ಯಾಪ್ ಮಾಡುವ ಮೂಲಕ ತ್ರಿವಿಕ್ರಮ ಚಿತ್ರಕ್ಕೆ ಶುಭ ಹಾರೈಸಿದರು. ಅಲ್ಲದೆ ಸ್ಯಾಂಡಲ್ವುಡ್ ಚಂದ್ರಮುಖಿ ಸಾನ್ವಿ ಶ್ರೀವಾತ್ಸವ್ ಮುಹೂರ್ತ ಕಾರ್ಯಕ್ರಮಕ್ಕೆ ಆಗಮಿಸಿ ವಿಕ್ರಮ್ಗೆ ವಿಶ್ ಮಾಡಿದರು.
ಸೆಟ್ಟೇರಿದ ತ್ರಿವಿಕ್ರಮ ಸಿನಿಮಾ ಮಾಸ್ ಲೀಡರ್ ನಿರ್ದೇಶಕ ಸಹನಾಮೂರ್ತಿ ತ್ರಿವಿಕ್ರಮ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ.ತ್ರಿವಿಕ್ರಮಒಂದೊಳ್ಳೆ ವಿಷಯ ಇಟ್ಕೊಂಡು ವಿಕ್ರಮ್ ರವಿಚಂದ್ರನ್ ಅವರನ್ನು ಸ್ಯಾಂಡಲ್ವುಡ್ಗೆ ಎಂಟ್ರಿ ಕೊಡಿಸುವುದಾಗಿ ಹೇಳಿದರು.
ಅಲ್ಲದೆ ಈ ಚಿತ್ರದಲ್ಲಿ ವಿಕ್ರಮ್ ರವಿಚಂದ್ರನ್ ಯುವಕನ ಪಾತ್ರದಲ್ಲಿ ಕಾಣಿಸುತ್ತಿದ್ದು, ಲವರ್ ಬಾಯ್ ಪಾತ್ರದಲ್ಲಿ ಮಿಂಚಲಿದ್ದಾರೆ. ನಮ್ಮ ತಂದೆ ಒಬ್ಬ ಸ್ಟಾರ್ ಆದ್ದರಿಂದ ನಮ್ಮ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ನನ್ನ ಸಿನಿಮಾವನ್ನು ನೋಡಲು ಅಭಿಮಾನಿಗಳು ರವಿಚಂದ್ರನ್ ಪುತ್ರ ಎಂದೇ ಥಿಯೇಟರ್ಗೆ ಬರುತ್ತಾರೆ. ಆದರೆ, ಈ ಚಿತ್ರವನ್ನು ನೋಡಿದ ನಂತರ ವಿಕ್ರಮ್ ರವಿಚಂದ್ರನ್ ಎಂಬ ಭಾವನೆ ಮೂಡುವಂತಾಗಬೇಕು. ಹಾಗಾಗಿ ಈ ಚಿತ್ರದ ಮೂಲಕ ಬರುತ್ತಿದ್ದೇವೆ ಎಂದು ತಮ್ಮ ಮೊದಲ ಚಿತ್ರದ ಬಗ್ಗೆ ವಿಕ್ರಮ್ ರವಿಚಂದ್ರನ್ ತಿಳಿಸಿದರು.
ಕಿರುತೆರೆಯಿಂದ ಬೆಳ್ಳಿ ತೆರೆಗೆ ಪರಿಚಯವಾಗ್ತಿರುವ ಬಾಂಬೆ ಬೆಡಗಿಆಕಾಂಕ್ಷ ಶರ್ಮಾಚಿತ್ರದ ನಾಯಕಿ. ಸುಮಾರು 2-3 ತಿಂಗಳಿನಿಂದ ಕನ್ನಡ ಕಲಿಯುತ್ತಿರುವ ಆಕಾಂಕ್ಷ, ಪಾತ್ರಕ್ಕಾಗಿ ಭರ್ಜರಿ ತಯಾರಿ ಮಾಡುತ್ತಿದ್ದಾರಂತೆ.
ಸಂತೋಷ್ ರೈ ಪಾತಾಜೆ ಛಾಯಾಗ್ರಹಣ, ಗೌರಿ ಎಂಟರ್ಟೇನರ್ಸ್ ಬ್ಯಾನರ್ ಅಡಿ ಸೋಮಣ್ಣ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಅಲ್ಲದೆ ಈ ಚಿತ್ರಕ್ಕೆ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಂಗೀತ ನೀಡಲಿದ್ದು, ಮುಂದಿನ ವರ್ಷ ಸಮ್ಮರ್ ವೇಳೆಗೆ ಚಿತ್ರವನ್ನು ರಿಲೀಸ್ ಮಾಡಲು ನಿರ್ಮಾಪಕರು ಪ್ಲಾನ್ ಮಾಡಿಕೊಂಡಿದ್ದಾರೆ.