ಕರ್ನಾಟಕ

karnataka

ETV Bharat / sitara

ತೆರೆ ಮೇಲೆ ಮೋಡಿ ಮಾಡಲು ಬರುತ್ತಿದ್ದಾರೆ ಜುಗಾರಿ ಬ್ರದರ್ಸ್​​ - undefined

ಮುರಳಿಕೃಷ್ಣ ನಿರ್ದೇಶನದ 'ಗರ' ಸಿನಿಮಾ ಮೇ 3ರಂದು ತೆರೆಗೆ ಬರುತ್ತಿದ್ದು, ಚಿತ್ರ ಸಾಕಷ್ಟು ವಿಶೇಷತೆಗಳಿಂದ ಕೂಡಿದೆ. ಸಾಧುಕೋಕಿಲ ಹಾಗೂ ಬಾಲಿವುಡ್ ಕಾಮಿಡಿ ನಟ ಜಾನಿ ಲಿವರ್ ಜೋಡಿ ನಿಮ್ಮನ್ನು ನಗಿಸಲು ಬರುತ್ತಿದೆ.

ಜುಗಾರಿ ಬ್ರದರ್ಸ್

By

Published : Apr 24, 2019, 11:44 PM IST

ಖ್ಯಾತ ಕಥೆಗಾರ ಆರ್‌.ಕೆ.ನಾರಾಯಣ್‌ ಅವರ ಕಿರುಕತೆಯನ್ನು 'ಗರ' ಹೆಸರಿನಲ್ಲಿ ಸಿನಿಮಾ ಮಾಡಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಈ ಚಿತ್ರಕ್ಕೆ ಮುರಳಿಕೃಷ್ಣ ಆ್ಯಕ್ಷನ್ ಕಟ್ ಹೇಳಿದ್ದಾರೆ.

'ಗರ' ಚಿತ್ರತಂಡ

ಬಿಗ್​ಬಾಸ್​ ಖ್ಯಾತಿಯ ರೆಹಮಾನ್ ಈ ಚಿತ್ರದ ಮೂಲಕ ನಾಯಕ ನಟನಾಗಿ ನಟಿಸಿರುವುದು ಒಂದೆಡೆಯಾದರೆ ಬಾಲಿವುಡ್​​​​​​​​​​​ನ ಖ್ಯಾತ ಕಾಮಿಡಿ ನಟ ಜಾನಿ ಲಿವರ್ ಈ ಸಿನಿಮಾ ಮೂಲಕ ಸ್ಯಾಂಡಲ್​ವುಡ್​​​ಗೆ ಬಂದಿರುವುದು ಮತ್ತೊಂದು ವಿಶೇಷ. ಚಿತ್ರದಲ್ಲಿ ಜಾನಿ ಲಿವರ್ ಜೊತೆ ಸಾಧು ಕೋಕಿಲ ಕೂಡಾ ನಿಮ್ಮನ್ನು ನಗಿಸಲು ಬರುತ್ತಿದ್ದಾರೆ. ಚಿತ್ರದಲ್ಲಿ ಇಬ್ಬರೂ ಜುಗಾರಿ ಬ್ರದರ್ಸ್ ಪಾತ್ರದಲ್ಲಿ ನಟಿಸಿದ್ದು, ಭರಪೂರ ಮನರಂಜನೆಯನ್ನು ಚಿತ್ರದಲ್ಲಿ ನಿರೀಕ್ಷಿಸಬಹುದು.

'ಗರ' ಪ್ರೆಸ್​​​ ಮೀಟ್​

ಇತ್ತೀಚೆಗೆ ಚಿತ್ರದ ಟೈಟಲ್ ಸಾಂಗ್ ಬಿಡುಗಡೆ ಮಾಡಿದ ಚಿತ್ರತಂಡ ಚಿತ್ರ ಬಿಡುಗಡೆ ದಿನಾಂಕವನ್ನು ಘೋಷಿಸಿದೆ. ಮೇ 3ರಂದು ಸಿನಿಮಾ ರಾಜ್ಯಾದ್ಯಂತ ತೆರೆ ಕಾಣಲಿದೆ. ರೆಹಮಾನ್ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ನಾಯಕಿಯಾಗಿ ಆವಂತಿಕಾ ಮೋಹನ್‌ ಮತ್ತು ಆರ್ಯನ್‌ ಕೂಡಾ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇವರೊಂದಿಗೆ ಮನ್​ದೀಪ್​​​​​ ರಾಯ್​​​​, ಹಿರಿಯ ನಟ ಉಮೇಶ್, ಶಾಂತಾರಾಮ್‌, ರೂಪಾದೇವಿ, ರಾಮಕೃಷ್ಣ , ಪದ್ಮಜಾರಾವ್‌, ಮಿಮಿಕ್ರಿ ದಯಾನಂದ್‌, ರಮೇಶ್‌ ಭಟ್‌ ಹಾಗೂ ಮುಂತಾದವರು ನಟಿಸಿದ್ದಾರೆ.

ರೆಹಮಾನ್

ನೇಹಾ ಪಾಟೀಲ್‌ ಕೂಡಾ ಚಿತ್ರದಲ್ಲಿ ನಟಿಸುತ್ತಿದ್ದು, ಅವರ ಪಾತ್ರದ ಬಗ್ಗೆ 'ಗರ' ತಂಡ ರಹಸ್ಯ ಕಾಪಾಡಿಕೊಂಡು ಬಂದಿದೆ. ಈ ಮೂಲಕ ಚಿತ್ರದ ಮೇಲಿನ‌ ಕುತೂಹಲವನ್ನು ಚಿತ್ರತಂಡ ಮತ್ತಷ್ಟು ಹೆಚ್ಚಿಸಿದೆ. ಕುತೂಹಲವನ್ನು ತಣಿಸಲು ಸಿನಿಮಾ ಮೇ ಮೊದಲ ವಾರದಲ್ಲೇ ಥಿಯೇಟರ್​​ಗೆ ಬರಿತ್ತಿದ್ದು, ಜುಗಾರಿ ಬ್ರದರ್ಸ್ ಜುಗಲ್​​ಬಂಧಿ ಯಾವ ರೀತಿ ವರ್ಕೌಟ್​​​​ ಆಗಲಿದೆ ಕಾದು ನೋಡಬೇಕಿದೆ.

For All Latest Updates

TAGGED:

ABOUT THE AUTHOR

...view details