ಹೈದರಾಬಾದ್:ಸಿನಿಮಾದಲ್ಲಿಕತ್ತಿ ಬೀಸಿ ಶತ್ರುಗಳನ್ನು ಸಂಹರಿಸುತ್ತಿದ್ದ ಕೈಯಲ್ಲೇ ಜೂನಿಯರ್ ಎನ್ಟಿಆರ್ ಪೊರಕೆ ಹಿಡಿದು ಮನೆ ಸ್ವಚ್ಛಗೊಳಿಸಿದ್ದಾರೆ. ಜೂ. ಎನ್ಟಿಆರ್ ಮನೆ ಆವರಣ, ಪಾತ್ರೆ ತಿಕ್ಕುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಎನ್ಟಿಆರ್ ಇಷ್ಟೆಲ್ಲಾ ಕೆಲಸ ಮಾಡಿದ್ದು ಬಾಹುಬಲಿ ಖ್ಯಾತಿಯ ನಿರ್ದೇಶಕ ರಾಜಮೌಳಿ ಕೊಟ್ಟ ಕೆಲಸದಿಂದ. ಯಶಸ್ವಿ ನಿರ್ದೇಶಕ ರಾಜಮೌಳಿ ಮನೆಗೆಲಸ ಮಾಡುವ ವಿಡಿಯೋ ಪೋಸ್ಟ್ ಮಾಡುವಂತೆ ಎನ್‌ಟಿಆರ್‌ಗೆ ಭಾನುವಾರ ಟಾಸ್ಕ್ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಜೂ. ಎನ್ಟಿಆರ್ ‘ಚಾಲೆಂಜ್ ಸ್ವೀಕರಿಸಿದ್ದೇನೆ ಜಕ್ಕನ್ನ’ ಎಂದು ಮಾತುಕೊಟ್ಟಿದ್ದರು. ಮಾತು ಕೊಟ್ಟ 24 ಗಂಟೆಯೊಳಗೆ ಮನೆಗೆಲಸ ಮಾಡಿ, ವಿಡಿಯೋ ಪೋಸ್ಟ್ ಮಾಡಿದ್ದಾರೆ.
ಅಲ್ಲದೆ, ರಾಜಮೌಳಿ ಅವರು ನಟ ರಾಮ್ಚರಣ್ ತೇಜ, ಸಂಗೀತ ನಿರ್ದೇಶಕ ಎಂ.ಎಂ.ಕೀರವಾಣಿ, ನಿರ್ದೇಶಕ ಸುಕುಮಾರ್, ನಿರ್ಮಾಪಕ ಶೋಭು ಯರ್ಲಗಡ್ಡ ಅವರಿಗೂ ಈ ಟಾಸ್ಕ್ ನೀಡಿದ್ದಾರೆ. ಅವರಲ್ಲಿ ಎನ್ಟಿಆರ್ ಮಾತ್ರ ಟಾಸ್ಕ್ ಪೂರ್ಣಗೊಳಿಸಿದ್ದಾರೆ.
ಈಗ ಕೊಟ್ಟ ಮಾತು ಉಳಿಸಿಕೊಂಡಿರುವ ಎನ್ಟಿಆರ್, ಟಾಲಿವುಡ್ನ ನಟರಾದ ಮೆಗಾಸ್ಟಾರ್ ಚಿರಂಜೀವಿ, ಅಕ್ಕಿನೇನಿ ನಾಗಾರ್ಜುನ, ನಂದಮೂರಿ ಬಾಲಕೃಷ್ಣ, ವಿಕ್ಟರಿ ವೆಂಕಟೇಶ್ ಮತ್ತು ನಿರ್ದೇಶಕ ಕೊರಟಾಲ ಶಿವ ಅವರಿಗೆ ನಾಮಿನೇಟ್ ಮಾಡಿದ್ದಾರೆ.
ತೆಲುಗು ಚಲನ ಚಿತ್ರರಂಗದ ಹಿರಿಯ ನಟರು
ಲಾಕ್ಡೌನ್ ಸಮಯದಲ್ಲಿ ಮನೆಗೆಲಸ, ಅಡುಗೆ ಕೆಲಸ ಮತ್ತು ಪ್ರತಿಯೊಂದರಲ್ಲೂ ಪತ್ನಿಗೆ ನೆರಳಾಗಿ ಕೆಲಸ ಮಾಡಿದವರೇ ನಿಜವಾದ ಗಂಡು ಎಂದು ಅರ್ಜುನ್ ರೆಡ್ಡಿ ನಿರ್ದೇಶಕ ಸಂದೀಪ್ ವಂಗಾ ಅವರು #BetheREALMAN’’ ಎಂದು ಮೊದಲು ವಿಡಿಯೋ ಪೋಸ್ಟ್ ಮಾಡುವ ಮೂಲಕ ಅಭಿವ್ಯಕ್ತಿಗೊಳಿಸಿದ್ದರು. ಸಂದೀಪ್ ಅವರು ರಾಜಮೌಳಿಗೆ ಟಾಸ್ಕ್ ಕೊಟ್ಟಿದ್ದರು.