'ಜೊತೆ ಜೊತೆಯಲಿ' ಧಾರಾವಾಹಿ ಮೂಲಕ ಕನ್ನಡಿಗರ ಮನಗೆದ್ದಿರುವ ಮೇಘಾ ಶೆಟ್ಟಿ ಈಗಾಗಲೇ ಎರಡು- ಮೂರು ಸಿನಿಮಾಗಳನ್ನು ಮಾಡ್ತಿದ್ದಾರೆ. ಕನ್ನಡ, ತೆಲುಗು ಮತ್ತು ತಮಿಳು ಬಹುಭಾಷಾ ಚಿತ್ರ ನಿರ್ದೇಶಕರ ಜೊತೆ ಹಲವು ಯಶಸ್ವಿ ಚಿತ್ರಗಳಲ್ಲಿ ಸಹ ನಿರ್ದೇಶಕನಾಗಿ ದುಡಿದ ಅನುಭವ ಹೊಂದಿರುವ ರಾಘವೇಂದ್ರ ಮೊಟ್ಟ ಮೊದಲ ಬಾರಿಗೆ ಈ ಚಿತ್ರಕ್ಕೆ ನಿರ್ದೇಶನ ಮಾಡುವ ಮೂಲಕ ಚೊಚ್ಚಲ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ.
'ಜಿಲ್ಕಾ' ಹುಡುಗನಿಗೆ 'ಜೊತೆ ಜೊತೆಯಲಿ' ಬೆಡಗಿಯ ರೊಮ್ಯಾನ್ಸ್ - ಜೊತೆ ಜೊತೆಯಲಿ ಧಾರವಾಹಿ ಮೇಘಾ ಶೆಟ್ಟಿ ರೊಮ್ಯಾನ್ಸ್,
ಕನ್ನಡ ಚಿತ್ರರಂಗಕ್ಕೆ ಯುವ ನಟ-ನಟಿಯರ ಎಂಟ್ರಿ ಆಗ್ತಾನೇ ಇದೆ. 'ಜಿಲ್ಕಾ' ಚಿತ್ರದ ಮೂಲಕ ಕನ್ನಡ, ಹಿಂದಿ ಮತ್ತು ಮರಾಠಿ ಚಿತ್ರರಂಗದಲ್ಲಿ ಛಾಪು ಮೂಡಿಸಿರುವವರು ಯುವನಟ ಕವೀಶ್ ಶೆಟ್ಟಿ. ಇದೀಗ ಇವರ ಅಭಿನಯದ ಎರಡನೆಯ ಚಿತ್ರ ಸೆಟ್ಟೇರುತ್ತಿದೆ.
ಉಡುಪಿ ಮೂಲದ ವಿಜಯ್ ಕುಮಾರ್ ಶೆಟ್ಟಿ ಮತ್ತು ರಮೇಶ್ ಕೊಠಾರಿ ತಮ್ಮ ಕ್ಲಾಸಿಕ್ ಸ್ಟುಡಿಯೋ ಅಂಗ ಸಂಸ್ಥೆಯ ಅಡಿಯಲ್ಲಿ ಇಂಡಿಯನ್ ಫಿಲ್ಮ್ ಫ್ಯಾಕ್ಟರಿ ಎನ್ನುವ ನಿರ್ಮಾಣ ಸಂಸ್ಥೆಯ ಮೂಲಕ ಚಿತ್ರವನ್ನು ಅದ್ಧೂರಿಯಾಗಿ ಕನ್ನಡ, ಮರಾಠಿ, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಯಲ್ಲಿ ಏಕಕಾಲಕ್ಕೆ ನಿರ್ಮಿಸುತ್ತಿದ್ದಾರೆ. ಇವರೊಂದಿಗೆ ಮರಾಠಿ ಚಿತ್ರರಂಗದ ಪ್ರತಿಷ್ಠಿತ ದೀಪಕ್ ರಾಣೆ ಫಿಲ್ಮ್ಸ್ ಕೂಡ ವಿಶೇಷವಾಗಿ ಕೈ ಜೋಡಿಸಿದ್ದಾರೆ.
ಕನ್ನಡ, ಮರಾಠಿ ಮತ್ತು ಇತರ ಭಾಷೆಯ ಸ್ಟಾರ್ ನಟರ ದಂಡು ಈ ಚಿತ್ರದಲ್ಲಿದೆ. ಪ್ರತಿಯೊಂದು ವಿಭಾಗದಲ್ಲೂ ಚಿತ್ರರಂಗದ ನುರಿತ ತಂತ್ರಜ್ಞರ ದೊಡ್ಡತಂಡ ಈ ಚಿತ್ರದಲ್ಲಿ ಕೆಲಸ ಮಾಡುತ್ತಿದೆ. ಇದೊಂದು ದೊಡ್ಡ ಬಜೆಟ್ಟಿನ ಚಿತ್ರ ಎನ್ನುವ ಸುಳಿವನ್ನೂ ನಿರ್ಮಾಪಕ ವಿಜಯ್ ಕುಮಾರ್ ಶೆಟ್ಟಿ ನೀಡಿದ್ದಾರೆ. ಚಿತ್ರತಂಡ ಶೀಘ್ರದಲ್ಲೇ ವಿಶೇಷವಾಗಿ ಶೀರ್ಷಿಕೆ ಅನಾವರಣ ಮಾಡಲಿದ್ದು, ನವೆಂಬರ್ ತಿಂಗಳಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ.