'ನೂರು ಜನ್ಮ ಕೂಡಿ ಬಾಳುವ ಜೋಡಿ ನಮ್ಮದು, ಎಲ್ಲ ಎಲ್ಲೆ ಮೀರಿದಾಗಲೂ ಪಯಣ ನಿಲ್ಲದು, ಜರಿವ ಜನರೆದುರು ನಿನ್ನ ನೆರಳಾಗಿ ನಿಲ್ಲುವೆ, ಜಗದ ಕೊನೆ ತೀರುವವರೆಗೆ ಬೆರಳ ನಾ ಹಿಡಿದು ನಡೆಯುವೆ, ಎಂದೂ ನಾನಿರುವೆ ಜೊತೆ ಜೊತೆ ಜೊತೆಯಲಿ..' ಎಂದು ಶುರುವಾಗುವ ಈ ಗೀತೆಯು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಹಿಟ್ ಆಗಿದೆ.
ಜೊತೆ ಜೊತೆಯಲಿ ಧಾರಾವಾಹಿ ಟೈಟಲ್ ಸಾಂಗ್ 2 ಕೋಟಿ ವೀಕ್ಷಣೆ 'ಜೊತೆ ಜೊತೆಯಲಿ' ಧಾರಾವಾಹಿಯ ಶೀರ್ಷಿಕೆ ಗೀತೆ ಆರಂಭದಿಂದಲೂ ಕೇಳುಗರಿಗೆ ಮೋಡಿ ಮಾಡಿತ್ತು. ಇದೀಗ ಈ ಹಾಡನ್ನು 2 ಕೋಟಿ ಜನರು ವೀಕ್ಷಿಸಿದ್ದಾರೆ. ಜೀ ವಾಹಿನಿಯು ಈ ಹಾಡನ್ನು ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡಿತ್ತು. ಇದೀಗ ಅಲ್ಲಿಯೂ ಈ ಹಾಡು ದಾಖಲೆ ಬರೆದಿದ್ದು, ಈವರೆಗೂ ಬರೋಬ್ಬರಿ 2 ಕೋಟಿ ವೀಕ್ಷಣೆ ಕಂಡಿದೆ.
ಅನೇಕರು ಈ ಹಾಡಿಗೆ ಟಿಕ್ ಟಾಕ್ ಕೂಡ ಮಾಡಿದ್ದರು. ಈ ಹಾಡನ್ನು ಪ್ರತಿಯೊಬ್ಬರು ಗುನುಗುವ ಹಾಗೇ ಮಾಡಿದೆ. ಇದೇ ಮೊದಲ ಬಾರಿಗೆ ಧಾರಾವಾಹಿ ಟೈಟಲ್ ಸಾಂಗ್ ಒಂದು ದೊಡ್ಡ ಹಿಟ್ ಪಡೆದುಕೊಂಡಿರುವುದು ವಿಶೇಷ.
ಆರ್ಯವರ್ಧನ್ ಮತ್ತು ಅನು ಪ್ರೀತಿ ಪ್ರಸ್ತಾಪ ಮಾಡದ ಕಾರಣ ಸುಬ್ಬು ಸಿರಿಮನೆ ಮಗಳಿಗೆ ಒಂದೊಳ್ಳೆ ಸಂಬಂಧದ ಹುಡುಕಾಟದಲ್ಲಿದ್ದಾರೆ. ಸ್ಪೆಷಲ್ ಎಂಟ್ರಿಯಾಗಿ ಸುಧಾರಾಣಿ ಹಾಗೂ ಅಗ್ನಿಸಾಕ್ಷಿ ನಟ ವಿಜಯ್ ಸೂರ್ಯ ಅನು ಬಾಳಿಗೆ ಹೊಸ ಟ್ವಿಸ್ಟ್ ತರಲಿದ್ದಾರೆ. ಆದರೆ ಇದೇ ಸಮಯಕ್ಕೆ ಹೃದಯಘಾತದಿಂದ ಸುಬ್ಬು ಆಸ್ಪತ್ರೆಗೆ ದಾಖಲಾಗುತ್ತಾರೆ. ಅನು ತಂದೆ ನೋಡಲು ಬರುತ್ತಾಳಾ? ತಂದೆ ತೋರಿಸಿದ ಹುಡುಗನನ್ನು ಮದುವೆಯಾಗುತ್ತಾಳಾ ಎಂದು ಕಾದು ನೋಡಬೇಕಿದೆ.