ಕರ್ನಾಟಕ

karnataka

ETV Bharat / sitara

'ಜೊತೆ ಜೊತೆಯಲಿ' ಧಾರಾವಾಹಿಗೆ ಮತ್ತೊಂದು ಸಂಭ್ರಮ: ಟೈಟಲ್​ ಸಾಂಗ್‌ಗೆ 1M​ ವ್ಯೂಸ್​! - ಅನಿರುದ್​​ ನಟನೆಯ ಧಾರಾವಾಹಿ

ಜೊತೆ ಜೊತೆಯಲಿ ಧಾರಾವಾಹಿಯ ಸಂಪೂರ್ಣ ಶೀರ್ಷಿಕೆ ಗೀತೆಯನ್ನು ನಿನ್ನೆ ಬಿಡುಗಡೆ ಮಾಡಲಾಗಿದ್ದು, ರಿಲೀಸ್​ ಆದ ಕೇವಲ 12 ಗಂಟೆಗಳ ಅವಧಿಯಲ್ಲಿ 1 ಮಿಲಿಯನ್ ಅಂದರೆ 10 ಲಕ್ಷ ಜನ ವೀಕ್ಷಿಸಿದ್ದಾರೆ.

jote joteyali titletrack got 1 million view
ಜೊತೆ ಜೊತೆಯಲಿ ಧಾರಾವಾಹಿಗೆ ಮತ್ತೊಂದು ಸಂಭ್ರಮ : ಒಂದು ಮಿಲಿಯನ್​ ವ್ಯೂಸ್​​ ಮಾಡಿದ ಟೈಟಲ್​ ಸಾಂಗ್!

By

Published : Jan 24, 2020, 7:08 PM IST

100 ಎಪಿಸೋಡುಗಳನ್ನು ಪೂರೈಸಿ ಮುನ್ನುಗ್ಗುತ್ತಿರುವ 'ಜೊತೆ ಜೊತೆಯಲಿ' ಧಾರಾವಾಹಿ ತಂಡಕ್ಕೆ ಮತ್ತೊಂದು ಸಂತಸದ ಸುದ್ದಿ ಸಿಕ್ಕಿದೆ. ಧಾರಾವಾಹಿಯ ಸಂಪೂರ್ಣ ಶೀರ್ಷಿಕೆ ಗೀತೆಯನ್ನು ಬಿಡುಗಡೆ ಮಾಡಲಾಗಿದ್ದು, ರಿಲೀಸ್​ ಆದ ಕೇವಲ 12 ಗಂಟೆಗಳ ಕಾಲಾವಧಿಯಲ್ಲಿ 1 ಮಿಲಿಯನ್ ಅಂದರೆ 10 ಲಕ್ಷ ಜನ ವೀಕ್ಷಿಸಿದ್ದಾರೆ.

1 ಮಿಲಿಯನ್​ ವ್ಯೂಸ್​​ ಮಾಡಿದ ಜೊತೆಜೊತೆಯಲಿ ಟೈಟಲ್​ ಸಾಂಗ್!

ಇದೇ ಮೊದಲ ಬಾರಿಗೆ ಭಾರತದ ಕಿರುತೆರೆಯಲ್ಲಿ ಶೀರ್ಷಿಕೆ ಗೀತೆಯೊಂದು ಈ ಮಟ್ಟಿಗೆ ಜನಪ್ರಿಯತೆ ಪಡೆದಿದೆ. ಧಾರಾವಾಹಿಯ ನಾಯಕ ನಟ ಅನಿರುದ್ಧ್‌ ​ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಂತಸ ವ್ಯಕ್ತಪಡಿಸಿದ್ದು, ಪ್ರೇಕ್ಷಕರಿಗೆ ಧನ್ಯವಾದ ಅರ್ಪಿಸಿದ್ದಾರೆ.

ಅನಿರುದ್ ಮೊಬೈಲ್​ ಸ್ಟ್ರೀನ್​ ಶಾಟ್​​​​​​

ಟಿ.ಎನ್.ಸೀತಾರಾಮ್ ಅವರ 'ಮಾಯಾಮೃಗ' ಧಾರಾವಾಹಿಯ ಶೀರ್ಷಿಕೆ ಗೀತೆ ಜನಮನವನ್ನು ಸೆಳೆದಿತ್ತು. ನಂತರ ಮೂಡಲಮನೆ ಧಾರಾವಾಹಿಯ ರೆಂಬೆಕೊಂಬೆಯ ಮೇಲೆ, ಮುಕ್ತ ಮುಕ್ತ , ಮರಳಿ ಬಾ ಮನ್ವಂತರವೇ ಕಂಬನಿಗಳ ಬಳಿಗೆ, ಮಗಳು‌ ಜಾನಕಿ ಶೀರ್ಷಿಕೆ ಗೀತೆಗಳು ಜನಮನ ಗೆದ್ದಿದ್ದವು.

ಜೊತೆ ಜೊತೆಯಲಿ ಧಾರಾವಾಹಿ

ನೂರು ಎಪಿಸೋಡ್ ಪೂರೈಸಿದ ಜೊತೆ ಜೊತೆಯಲಿ ಧಾರಾವಾಹಿಯ ತಂಡದ ಶ್ರಮಕ್ಕೆ ನಿಮ್ಮೆಲ್ಲರ ಪ್ರೀತಿ ಕಾರಣ. ಮುಂದೆಯೂ ಹೀಗೆಯೇ ಜೊತೆ ಜೊತೆಯಲಿ ಸಾಗಬೇಕು ಅಂತ ಅನಿರುದ್ಧ್‌ ವೀಕ್ಷಕರಿಗೆ ಧನ್ಯವಾದ ತಿಳಿಸಿದ್ದಾರೆ.

ABOUT THE AUTHOR

...view details