ಆರೂರು ಜಗದೀಶ್ ನಿರ್ದೇಶನದ ಹೊಚ್ಚ ಹೊಸ ಧಾರಾವಾಹಿ ಜೊತೆಜೊತೆಯಲಿ ಆರಂಭವಾಗಿ ಕೇವಲ ಮೂರು ವಾರಗಳು ಕಳೆದಿದೆ ಅಷ್ಟೇ! ಮೂರು ವಾರಗಳಲ್ಲಿ ಜೊತೆ ಜೊತೆಯಲಿ ಧಾರಾವಾಹಿ ಮಾಡಿದ ಮೋಡಿ ಅಷ್ಟಿಷ್ಟಲ್ಲ. ಕಳೆದ ಮೂರು ವಾರಗಳಿಂದ ಮೊದಲ ಸ್ಥಾನದಲ್ಲಿರುವ ಜೊತೆಜೊತೆಯಲಿ ಧಾರಾವಾಹಿ ವೀಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ನಿಮ್ಮ ನೆಚ್ಚಿನ ಜೊತೆಜೊತೆಯಲಿ ಧಾರಾವಾಹಿ ಮುಂದಿನ ಸೋಮವಾರ ಒಂದು ಗಂಟೆ ಪ್ರಸಾರವಾಗಲಿದೆ. ಮುಂದಿನ ಸೋಮವಾರದಿಂದ ಶುಕ್ರವಾರದ ತನಕ ಮಹಾಸಂಚಿಕೆಯ ಮೂಲಕ ನಿಮ್ಮ ಮುಂದೆ ಜೊತೆಜೊತೆಯಲಿ ಧಾರಾವಾಹಿ ಮೂಡಿಬರಲಿದೆ.
ಜೊತೆಜೊತೆಯಲಿ ಸೀರಿಯಲ್ನ ಹೊಸ ಪ್ರೋಮೋ ಈಗಾಗಲೇ ಹರಿದಾಡುತ್ತಿದ್ದು ವೀಕ್ಷಕರು ಕುತೂಹಲದಿಂದ ಕಾಯುತ್ತಿದ್ದಾರೆ. ಪ್ರೋಮೋದಲ್ಲಿ ಈ ಜೋಡಿ ಮುದ್ದಾಗಿ ಕಾಣಿಸುತ್ತಿದ್ದು ಮುಂದಿನ ಸೋಮವಾರಕ್ಕಾಗಿ ಕಿರುತೆರೆ ವೀಕ್ಷಕರು ಹಪಹಪಿಸುತ್ತಿದ್ದಾರೆ.
"ಜೊತೆ ಜೊತೆಯಲಿ" ಧಾರವಾಹಿ ಪ್ರತಿ ದಿನ ಒಂದು ಗಂಟೆ ಪ್ರಸಾರ..! ನಲುವತ್ತೈದು ವರುಷದ ಶ್ರೀಮಂತ ಉದ್ಯಮಿ ಆರ್ಯವರ್ಧನ್ ಮತ್ತು ಮಧ್ಯಮ ವರ್ಗದ ಇಪ್ಪತ್ತು ವರುಷದ ಮುದ್ದಾದ ಹುಡುಗಿ ಅನುವಿನ ನಡುವಿನ ಪ್ರೇಮಕಥೆಯೇ ಜೊತೆಜೊತೆಯಲಿ ಧಾರಾವಾಹಿಯ ಕಥಾ ಹಂದರ. ನಾಯಕ ಆರ್ಯವರ್ಧನ್ ಮತ್ತು ನಾಯಕಿ ಅನು ಈಗಾಗಲೇ ಪರಿಚಿತರಾಗಿದ್ದು ಜೊತೆ ಜೊತೆಯಲಿ ಸಾಗುತ್ತಿದ್ದಾರೆ.