ಕರ್ನಾಟಕ

karnataka

ETV Bharat / sitara

ಯೋಧರನ್ನ ರಿಯಲ್ ಹೀರೋಗಳು ಅಂದ್ರು ಜೋಗಿ ಪ್ರೇಮ್​​ - ek love ya movie

ಕಾಶ್ಮೀರದ ಸುಂದರ ತಾಣಗಳಲ್ಲಿ ಚಿತ್ರೀಕರಣ ಮಾಡುತ್ತಿರುವ ಪ್ರೇಮ್, ಕಾಶ್ಮೀರದ ಗಡಿಯನ್ನ ಕಾಯುತ್ತಿರುವ ಯೋಧರನ್ನ ರಿಯಲ್ ಹೀರೋಗಳು ಅಂತಾ ಕರೆದಿದ್ದಾರೆ.

jogi prem speak about India soldiers
jogi prem speak about India soldiers

By

Published : Dec 2, 2020, 9:49 PM IST

ಏಕ್ ಲವ್ ಯಾ ಸಿನಿಮಾ ಸ್ಯಾಂಡಲ್ ವುಡ್​​​ನಲ್ಲಿ ಪೋಸ್ಟರ್ ಹಾಗು ಸಣ್ಣ ಟೀಸರ್​​​ನಿಂದಲೇ ಸದ್ದು ಮಾಡ್ತಿದೆ. ನಿರ್ದೇಶಕ ಜೋಗಿ ಪ್ರೇಮ್ ನಿರ್ದೇಶನದ ಏಕ್ ಲವ್ ಯಾ ಚಿತ್ರ ತಂಡ ಟಾಕಿಪೋಷನ್ ಮುಗಿಸಿ, ಹಾಡಿನ ಶೂಟಿಂಗ್ ಗಾಗಿ ಇದೀಗ ಕಾಶ್ಮೀರದಲ್ಲಿದೆ.

ಕಳೆದ ಕೆಲ ದಿಗಳಿಂದ ಕಾಶ್ಮೀರದ ಸುಂದರ ತಾಣಗಳಲ್ಲಿ ಚಿತ್ರೀಕರಣ ಮಾಡುತ್ತಿರುವ ಪ್ರೇಮ್, ಕಾಶ್ಮೀರದ ಗಡಿಯನ್ನ ಕಾಯುತ್ತಿರುವ ಯೋಧರನ್ನ ರಿಯಲ್ ಹೀರೋಗಳು ಅಂತಾ ಕರೆದಿದ್ದಾರೆ. ಈ ಪ್ರೇಮ್​ ಮಾತನಾಡಿದ್ದು, ಖುಷಿಯ ವಿಚಾರ ಅಂದ್ರೆ ಹುಬ್ಬಳ್ಳಿ, ಬೆಳಗಾವಿ ಊರಿನವರು ಕಾಶ್ಮೀರದ ಗಡಿಯಲ್ಲಿ ದೇಶವನ್ನ ಕಾಯುತ್ತಿದ್ದಾರೆ, ಹಾಗೇ ಅವ್ರನ್ನ ಮಾತನಾಡಿಸುವ ಅವಕಾಶ ಸಿಕ್ತು ಅಂತಾ ಪ್ರೇಮ್ ಹೇಳಿದ್ದಾರೆ.

ಕಳೆದ ಕೆಲ ದಿನಗಳಿಂದ ಕಾಶ್ಮೀರದ ಬ್ಯೂಟಿಫುಲ್ ಲೋಕೇಶನ್​​ಗಳಲ್ಲಿ ಚಿತ್ರೀಕರಣ ಮಾಡುತ್ತಿರುವ ನಿರ್ದೇಶಕ ಪ್ರೇಮ್ ಜಾಸ್ತಿ ಹಿಮಪಾತ ಇರುವ ಜಾಗದಲ್ಲಿ ಚಿತ್ರೀಕರಣ ಮಾಡಲು ಪ್ಲಾನ್ ಮಾಡಿದ್ದಾರೆ. ಇಲ್ಲಿ ಉಸಿರಾಟಕ್ಕೆ ಸಮಸ್ಯೆ ಆಗುವ ಮಟ್ಟಿಗೆ ಶೀತ ಇರುವ ಪ್ರದೇಶವಾಗಿದೆ. ಈ ಕಾರಣಕ್ಕೆ ಎರಡು ದಿನ ಬಿಟ್ಟು ಚಿತ್ರೀಕರಣ ಮಾಡಲಿದ್ದೇವೆ ಅಂತಾ ಪ್ರೇಮ್ ಮಾಹಿತಿಯನ್ನ ಹಂಚಿಕೊಂಡಿದ್ದಾರೆ.

ಇತ್ರದಲ್ಲಿ ರಕ್ಷಿತಾ ಸಹೋದರ ರಾಣಾ ಮೂರು ಶೇಡ್​​ನಲ್ಲಿ ಕಾಣಿಸಿಕೊಳ್ಳುತ್ತಿದ್ದು, ಏಕ್ ಲವ್​​ಯಾದಲ್ಲಿ ರೀಷ್ಮಾ ನಾಣಯ್ಯ ಮೊದಲ ಬಾರಿಗೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ರಚಿತಾ ರಾಮ್ ಚಿತ್ರದ ಪ್ರಧಾನ ಪಾತ್ರದಲ್ಲಿದ್ದರೆ, ರಕ್ಷಿತಾ ಅತಿಥಿ ಕಲಾವಿದೆಯಾಗಿ ಅಭಿನಯಿಸಿದ್ದಾರೆ.

ABOUT THE AUTHOR

...view details