ಸ್ಯಾಂಡಲ್ವುಡ್, ಬಾಲಿವುಡ್ ನಂತರ ಕಾಲಿವುಡ್ಗೂ ಹಾರಿದ್ರು ಜೆಕೆ - ನಾಗಿಣಿ ಧಾರವಾಯಿಯಲ್ಲಿ ಜೆಕೆ ನಟನೆ
ಕಿರುತೆರೆಯ ಮೂಲಕ ನಟನಾ ಜಗತ್ತಿಗೆ ಕಾಲಿಟ್ಟ ಹ್ಯಾಂಡ್ಸಮ್ ಹಂಕ್ ಜಯರಾಂ ಕಾರ್ತಿಕ್ ಸ್ಯಾಂಡಲ್ವುಡ್, ಬಾಲಿವುಡ್ನ ನಂತರ ಇದೀಗ ಕಾಲಿವುಡ್ಗೆ ಕಾಲಿಟ್ಟಿದ್ದಾರೆ. ದಿಲ್ ಸತ್ಯ ನಿರ್ದೇಶನದ ಮಾಳಿಗೈ ಸಿನಿಮಾದಲ್ಲಿ ನಾಯಕನಾಗಿ ನಟಿಸುವ ಮೂಲಕ ತಮಿಳಿನಲ್ಲೂ ಕಮಾಲ್ ಮಾಡುತ್ತಿದ್ದಾರೆ ಜೆಕೆ. ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಇದಾಗಿದ್ದು ಒಟ್ಟಿನಲ್ಲಿ ಇದೀಗ ಕಾಲಿವುಡ್ನಲ್ಲೂ ಮಿಂಚಲು ಹೊರಟಿದ್ದಾರೆ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅಶ್ವಿನಿ ನಕ್ಷತ್ರ ಧಾರಾವಾಹಿಯಲ್ಲಿ ನಾಯಕ ಜೆಕೆ ಆಲಿಯಾಸ್ ಜಯಕೃಷ್ಣ ಆಗಿ ನಟಿಸಿ ಮನೆ ಮಾತಾಗಿದ್ದ ಹ್ಯಾಂಡ್ ಸಮ್ ಹುಡುಗನ ಹೆಸರು ಜಯರಾಂ ಕಾರ್ತಿಕ್. ಜೆಕೆಯಾಗಿ ನಟಿಸಿ ಕಿರುತೆರೆ ವೀಕ್ಷಕರ ಅದರಲ್ಲೂ ಹೆಣ್ ಮಕ್ಕಳ ಮನ ಕದ್ದ ಜಯರಾಂ ಕಾರ್ತಿಕ್ ಬಿಗ್ ಬಾಸ್ ಸ್ಪರ್ಧಿಯಾಗಿಯೂ ಗಮನ ಸೆಳೆದರು.
ಇತ್ತೀಚೆಗೆ ಝೀ ಕನ್ನಡದಲ್ಲಿ ಆರಂಭವಾಗಿರುವ ರಾಮ್ ಜೀ ನಿರ್ದೇಶನದ ನಾಗಿಣಿ 2ರಲ್ಲಿ ಆದಿಶೇಷನಾಗಿ ನಟಿಸಿದ್ದರು. ಆದಿಶೇಷನಾಗಿ ಕೇವಲ ಮೂರು ಸಂಚಿಕೆಗಳಲ್ಲಿ ಜೆಕೆ ಕಾಣಿಸಿಕೊಂಡಿದ್ದರೂ ಜೆಕೆಯ ನಾಗರಾಜನ ಅವತಾರಕ್ಕೆ ಮರುಳರಾಗಿದ್ದರು. ದಯಾಳ್ ಪದ್ಮನಾಭನ್ ನಿರ್ದೇಶನದ ಆ ಕರಾಳ ರಾತ್ರಿ ಸಿನಿಮಾದಲ್ಲಿ ನಾಯಕನಾಗಿ ನಟಿಸುವ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟಿರುವ ಜಯರಾಂ ಕಾರ್ತಿಕ್ ತಮ್ಮ ಅಭಿನಯದ ಮೂಲಕ ಅಲ್ಲೂ ನಟನಾ ಕಂಪನ್ನು ಪಸರಿಸಿದರು.
ಪುಷ್ಪ ಐ ಹೇಟ್ ಯೂ ಸಿನಿಮಾದ ಮೂಲಕ ಬಾಲಿವುಡ್ಗೆ ಕಾಲಿಟ್ಟಿರುವ ಜೆಕೆ ಆ ಚಿತ್ರದ ಮೂಲಕ ಬಾಲಿವುಡ್ನಲ್ಲೂ ಮನೆ ಮಾತಾಗಿದ್ದರು. ಕೇವಲ ಹಿಂದಿ ಮಾತ್ರವಲ್ಲದೇ ಕನ್ನಡ ಭಾಷೆಯಲ್ಲೂ ಪುಷ್ಪ ಐ ಹೇಟ್ ಯೂ ಸಿನಿಮಾ ಬಿಡುಗಡೆಯಾಗಿತ್ತು.