ಸ್ಯಾಂಡಲ್ವುಡ್ನಲ್ಲಿ ಶೀರ್ಷಿಕೆಯಿಂದಲೇ ಸದ್ದು ಮಾಡುತ್ತಿರುವ ಚಿತ್ರ ಜೀವ್ನಾನೇ ನಾಟ್ಕ ಸ್ವಾಮಿ.. ಕನ್ನಡತಿ ಸೀರಿಯಲ್ ಖ್ಯಾತಿಯ ಕಿರಣ್ ರಾಜ್ ಹಾಗೂ ಸರಿಗಮಪ ಮೂಲಕ ಮನೆಮಾತಾಗಿರೋ ಶ್ರೀಹರ್ಷ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಚಿತ್ರ ಇದಾಗಿದೆ. ಆಗಸ್ಟ್ 19ರಂಂದು ಪ್ರೇಕ್ಷಕರ ಮುಂದೆ ಬರಲು ಸಿದ್ಧವಾಗಿದೆ. ಈ ಕುರಿತಂತೆ ಚಿತ್ರತಂಡ ತಮ್ಮ ಅನುಭವ ಹಂಚಿಕೊಂಡಿದೆ.
ಚಿತ್ರದ ಅನುಭವ ಹಂಚಿಕೊಂಡ ಜೀವ್ನಾನೇ ನಾಟ್ಕ ಸ್ವಾಮಿ ಚಿತ್ರತಂಡ ಮಹಾಭಾರತದ ಉಪಕಥೆಯನ್ನು ಆಧಾರವಾಗಿಟ್ಟುಕೊಂಡು ನಿರ್ಮಾಣವಾಗಿರುವ ಈ ಚಿತ್ರಕ್ಕೆ ರಂಗಭೂಮಿ ಹಿನ್ನೆಲೆ ಹೊಂದಿರುವ ರಾಜು ಭಂಡಾರಿ ರಾಜವರ್ತ ನಿರ್ದೇಶನವಿದೆ.
ಜೀವ್ನಾನೇ ನಾಟ್ಕ ಸ್ವಾಮಿ ಚಿತ್ರತಂಡ ರಿಯಾಲಿಟಿ ಶೋಗಳಲ್ಲಿ ನಡೆಯುವ ಕೆಲವು ವಿಷಯಗಳನ್ನು ಚಿತ್ರದ ಕಥಾವಸ್ತುವನ್ನಾಗಿ ಮಾಡಿಕೊಳ್ಳಲಾಗಿದೆ. ಇದೊಂದು ಸಂಪೂರ್ಣ ಮನರಂಜನಾ ಚಿತ್ರ. ಸ್ವಲ್ಪ ಟ್ರಾಜಿಡಿ ಹಾಗೂ ಸೆಂಟಿಮೆಂಟ್ ಸನ್ನಿವೇಶಗಳು ನಮ್ಮ ಚಿತ್ರದಲ್ಲಿವೆ.
ಈ ಹಿಂದೆ ಮಾರ್ಚ್ 22 ಸಿನಿಮಾ ಮಾಡಿದ್ದ ಕಿರಣ್ ರಾಜ್ ಈ ಚಿತ್ರದಲ್ಲಿ ಸಹ ನಿರ್ದೇಶಕನ ಪಾತ್ರ ಮಾಡಿದ್ದಾರೆ. ನನ್ನ ಅಭಿಮಾನಿಗಳು ಈ ಚಿತ್ರವನ್ನು ನೋಡಿ ಗೆಲ್ಲಿಸುತ್ತಾರೆ ಎಂಬ ವಿಶ್ವಾಸ ನಮಗಿದೆ ಎನ್ನತ್ತಾರೆ ನಟ ಕಿರಣ್ ರಾಜ್.
ಇನ್ನು, ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ನಟಿಸಿ ಇದೇ ಮೊದಲ ಬಾರಿಗೆ ಕನ್ನಡದಲ್ಲಿ ಅಭಿನಯಿಸುತ್ತಿರುವ ಪವಿತ್ರ ಕೋಟ್ಯಾನ್ ನೆಗೆಟಿವ್ ರೋಲ್ನಲ್ಲಿ ಕಾಣಿಸಿದ್ದಾರೆ. ಇನ್ನು, ಅನಿಕ ರಮ್ಯ ಈ ಚಿತ್ರದಲ್ಲಿ ಪಾಸಿಟಿವ್ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಕಿಟ್ಟಿ ಕೌಶಿಕ್ ಛಾಯಾಗ್ರಹಣವಿದ್ದು, ಅತಿಶಯ ವೇದಾಂತ ಜೈನ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ನಿರ್ದೇಶಕ ರಾಜು ಭಂಡಾರಿ ಸಿನಿಮಾದ ಕಥೆ ಕೇಳಿ, ನಿರ್ಮಾಪಕ ರಾಜಶೇಖರ್ ಶಿರಹಟ್ಟಿ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.
ಓದಿ : ಬಿಗ್ ಬಾಸ್ ಸೀಸನ್ 8 ಗೆಲ್ಲೋದು ಇವರೇನಾ..?