ಮುಂಬೈ(ಮಹಾರಾಷ್ಟ್ರ):ಬಾಲಿವುಡ್ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ನಟನೆಯ ಝುಂಡ್ ಚಿತ್ರವನ್ನು ತೆರಿಗೆ ಮುಕ್ತ ಏಕೆ ಮಾಡಲಿಲ್ಲ ಎಂದು ನಿರ್ಮಾಪಕ ಸವಿತಾ ರಾಜ್ ಹಿರೇಮಠ್ ಅವರು ಪ್ರಶ್ನಿಸಿದ್ದಾರೆ.
ಫೇಸ್ಬುಕ್ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ಅವರು, ತಮ್ಮ ಚಿತ್ರವು ಸಹ ಪ್ರೇಕ್ಷಕರಿಂದ ಸಕಾರಾತ್ಮಕ ಪ್ರತಿಕ್ರಿಯೆಗೆ ಸಾಕ್ಷಿಯಾಗಿದೆ. ಆದರೆ, ತೆರಿಗೆ ವಿನಾಯಿತಿ ಏಕೆ ಕೊಡಲಿಲ್ಲ ಎಂಬ ಗೊಂದಲವಾಗಿದೆ ಎಂದು ಹೇಳಿದ್ದಾರೆ.
ಮಾರ್ಚ್ 4ರಂದು ಝುಂಡ್ ಚಿತ್ರ ತೆರೆಗೆ ಬಂದಿದೆ. ಇದು ಸ್ಲಂ ಸಾಕರ್ ಆಂದೋಲನದ ಪ್ರವರ್ತಕರಾದ ನಾಗ್ಪುರ ಮೂಲದ ನಿವೃತ್ತ ಕ್ರೀಡಾ ಶಿಕ್ಷಕ ವಿಜಯ್ ಬಾರ್ಸೆ ಜೀವನಾಧಾರಿತ ಚಿತ್ರ. ಅವರ ಪಾತ್ರದಲ್ಲಿ ಅಮಿತಾಭ್ ಬಚ್ಚನ್ ಕಾಣಿಸಿಕೊಂಡಿದ್ದಾರೆ. ಫ್ಯಾಂಡ್ರಿ ಮತ್ತು ಸೈರಾಟ್ ಖ್ಯಾತಿಯ ನಾಗರಾಜ ಮಂಜುಳೆ ಪ್ರಥಮ ಬಾರಿಗೆ ನಿರ್ಮಾಣ ಮಾಡಿದ ಚಿತ್ರ ಇದಾಗಿದೆ.
ಝುಂಡ್ ಬಿಡುಗಡೆಯಾದ ಒಂದು ವಾರದ ಬಳಿಕ ವಿವೇಕ್ ಅಗ್ನಿಹೋತ್ರಿ ನಿರ್ಮಾಣದ ಕಾಶ್ಮೀರ್ ಫೈಲ್ಸ್ ಬಿಡುಗಡೆಯಾಯಿತು. ಚಿತ್ರವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಂದ ಹಿಡಿದ ಆಡಳಿತಾರೂಢ ಭಾರತೀಯ ಜನತಾ ಪಕ್ಷದ (ಬಿಜೆಪಿ) ಹಲವಾರು ನಾಯಕರು ಬೆಂಬಲ ನೀಡಿದ್ದಾರೆ.
ಸವಿತಾ ರಾಜ್ ಹಿರೇಮಠ್ ಅವರು ಬರೆದುಕೊಂಡಿರುವ ಅನಿಸಿಕೆ ಅನುಪಮ್ ಖೇರ್, ದರ್ಶನ್ ಕುಮಾರ್, ಮಿಥುನ್ ಚಕ್ರವರ್ತಿ ಮತ್ತು ಪಲ್ಲವಿ ಜೋಶಿ ಒಳಗೊಂಡಿರುವ ಕಾಶ್ಮೀರ ಫೈಲ್ಸ್ ಚಿತ್ರಕ್ಕೆ ಉತ್ತರಪ್ರದೇಶ, ಗುಜರಾತ್, ಮಧ್ಯಪ್ರದೇಶ, ಉತ್ತರಾಖಂಡ, ಹರಿಯಾಣ, ಕರ್ನಾಟಕ, ಬಿಹಾರ, ತ್ರಿಪುರಾ ಮತ್ತು ಗೋವಾ ರಾಜ್ಯಗಳಲ್ಲಿ ತೆರಿಗೆ ವಿನಾಯಿತಿ ನೀಡಿ ಘೋಷಿಸಲಾಗಿದೆ.
ದಿ ಕಾಶ್ಮೀರ್ ಫೈಲ್ಸ್ ಚಿತ್ರದಂತೆ ನಮ್ಮ ಚಿತ್ರವೂ ಒಂದು ಸಕಾರಾತ್ಮಕ ಕಥೆ ಹೇಳುತ್ತದೆ. ಅಲ್ಲದೇ ಅದರಷ್ಟೇ ಮೌಲ್ಯವನ್ನು ಎತ್ತಿ ತೋರಿಸುವ ಚಿತ್ರವಾಗಿತ್ತು. ಕಾಶ್ಮೀರ್ ಫೈಲ್ಸ್ ಉತ್ತಮ ಚಿತ್ರವೇ. ಆದರೆ, ನಮ್ಮ ಚಿತ್ರ ಝುಂಡ್ ಕಡಿಮೆಯಿಲ್ಲ ಎಂದು ಸವಿತಾ ರಾಜ್ ಹಿರೇಮಠ್ ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ.
ನಾನು ಇತ್ತೀಚೆಗೆ ಕಾಶ್ಮೀರ ಫೈಲ್ ಚಿತ್ರ ವೀಕ್ಷಿಸಿದೆ. ಇದು ಹೇಳಬೇಕಾದ ಕಥೆಯೂ ಹೌದು. ಕಾಶ್ಮೀರಿ ಪಂಡಿತರಿಗೆ ಉತ್ತಮ ಧ್ವನಿಯಾಗಿದೆ. ಆದರೆ, ಝುಂಡ್ ನಿರ್ಮಾಪಕನಾಗಿ ನಾನು ಗೊಂದಲಕ್ಕೊಳಗಾಗಿದ್ದೇನೆ. ಎಲ್ಲ ಚಿತ್ರದಂತೆ ಸಂದೇಶವನ್ನು ತಿಳಿಸಿಕೊಟ್ಟಿದೆ. ಪ್ರೇಕ್ಷಕರಿಂದ ಮೆಚ್ಚುಗೆ ಸಹ ಗಳಿಸಿಕೊಂಡಡಿದೆ. ಆದರೆ, ತೆರಿಗೆ ವಿನಾಯಿತಿ ನೀಡದಿರುವುದು ಅಚ್ಚರಿ ತಂದಿದೆ ಎಂದಿದ್ದಾರೆ.
ಝುಂಡ್ ಸಿನಿಮಾ ನನ್ನನ್ನು (ಸವಿತಾ ರಾಜ್ ಹಿರೇಮಠ್) ಸೇರಿದಂತೆ ಭೂಷಣ್ ಕುಮಾರ್, ಕ್ರಿಶನ್ ಕುಮಾರ್, ಗಾರ್ಗೀ ಕುಲಕರ್ಣಿ, ಮೀನು ಅರೋರಾ ಮತ್ತು ನಾಗರಾಜ ಮಂಜುಳೆ ನಿರ್ಮಿಸಿದ್ದಾರೆ. ಚಿತ್ರವನ್ನು ಆಯ್ಕೆ ಮಾಡಲು ಮತ್ತು ಮನರಂಜನಾ ತೆರಿಗೆಯಿಂದ ವಿನಾಯಿತಿ ನೀಡಲು ಸರ್ಕಾರವು ಯಾವ ಮಾನದಂಡವನ್ನು ಹೊಂದಿದೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲವಿದೆ ಎಂದು ಹಿರೇಮಠ್ ಬರೆದಿದ್ದಾರೆ.
ಸರ್ಕಾರವು ತೆರಿಗೆ ವಿನಾಯಿತಿಯಿಂದ ಹಿಡಿದು ಜಾಲತಾಣದ ಮೂಲಕ, ಉದ್ಯೋಗಿಗಳಿಗೆ ಅರ್ಧ ದಿನದ ರಜೆ ನೀಡುವುದು ಸೇರಿದಂತೆ ಇತರೆ ಮಾರ್ಗಗಳನ್ನು ಅನುಸರಿಸುವುದು ಯಾವ ಮಾನದಂಡದ ಮೇಲೆ ಅನ್ನುವುದು ನನಗಿನ್ನೂ ಗೊತ್ತಾಗಿಲ್ಲ. ಅದನ್ನು ಕಂಡುಹಿಡಿಯಲು ನಾನು ಬಯಸುತ್ತೇನೆ ಎಂದು ಅವರು ಹೇಳಿಕೊಂಡಿದ್ದಾರೆ.
ಝುಂಡ್ ನಮ್ಮ ದೇಶದ ಬೆಳವಣಿಗೆಗೆ ತುಂಬಾ ನಿರ್ಣಾಯಕವಾದ ವಿಷಯವನ್ನು ತಿಳಿಸಿಕೊಡುವ ಚಿತ್ರವಾಗಿದೆ. ಯಾವುದೇ ಜಾತಿ-ಧರ್ಮದ ಬಗ್ಗೆ ಮಾತನಾಡುವುದಿಲ್ಲ. ಸಮಾಜದ ಕಟ್ಟಕಡೆ ವ್ಯಕ್ತಿಯ ಯಶಸ್ಸನ್ನು ಹೇಳುವ ಕಥೆಯಾಗಿದೆ ಎಂದು ಬರೆದುಕೊಳ್ಳುವ ಮೂಲಕ ಕೊನೆಯದಾಗಿ ಅಸಮಧಾನ ಹೊರಹಾಕಿದ್ದಾರೆ. ದಿ ಕಾಶ್ಮೀರ್ ಫೈಲ್ಸ್ ಬಾಕ್ಸ್ ಈ ವರೆಗೆ 116 ಕೋಟಿ ರೂ. ಗಳಿಸಿದ್ದರೆ, ಝುಂಡ್ 15 ಕೋಟಿ ರೂ.ಗೂ ಕಲೆಕ್ಸನ್ ಮಾಡಿದೆ.