ವಾಷಿಂಗ್ಟನ್(ಅಮೆರಿಕಾ):ಕೊರೊನಾ ವೈರಸ್ಗಾಗಿ ಪರಿಹಾರ ನಿಧಿಯನ್ನು ಸಂಗ್ರಹಿಸಲು ನಟಿ ಜೆನ್ನಿಫರ್ ಅನಿಸ್ಟನ್ ತನ್ನ 25 ವರ್ಷದ ಹಳೆಯ ನಗ್ನ ಭಾವಚಿತ್ರವನ್ನು ಹರಾಜು ಹಾಕುವುದಾಗಿ ತಿಳಿಸಿದ್ದಾರೆ. 1995 ರ ನವೆಂಬರ್‌ನಲ್ಲಿ ಮಾರ್ಕ್ ಸೆಲಿಗರ್ ತೆಗೆದಿದ್ದ ಭಾವಚಿತ್ರವಿದು ಎಂದಿದ್ದಾರೆ.
ಈ ಫೊಟೋ ಹರಾಜಿನ ಬಗ್ಗೆ ನಟಿ ಜೆನ್ನಿಫರ್, ಇನ್ಸ್ಟಾಗ್ರಾಮ್ನಲ್ಲಿ ಚಿತ್ರ ಸಂಸ್ಕರಣೆ ಮಾಡುತ್ತಿರುವ ವಿಡಿಯೋವೊಂದನ್ನ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ, ನನ್ನ ಆತ್ಮೀಯ ಗೆಳೆಯ ಮಾರ್ಕ್‌ಸೆಲಿಗರ್, ರಾಡ್‌ವೊಕಸಿ ಮತ್ತು ಕ್ರಿಸ್ಟಿಸಿಂಕ್ ಸೇರಿದಂತೆ ನನ್ನ ಭಾವಚಿತ್ರವನ್ನೂ ಒಟ್ಟುಗೂಡಿಸಿ 25 ಭಾವಚಿತ್ರಗಳನ್ನು ಹರಾಜು ಹಾಕಲಿದ್ದೇವೆ. ಇವೆಲ್ಲವೂ ಕೊರೊನಾ ವೈರಸ್ ನಿಧಿ ಸಂಗ್ರಹಕ್ಕಾಗಿ ಎಂದು ಶೀರ್ಷಿಕೆಯೊಂದನ್ನ ಬರೆದಿದ್ದಾರೆ.