ಕರ್ನಾಟಕ

karnataka

ETV Bharat / sitara

ಸೆನ್ಸಾರ್​​ನಲ್ಲಿ ಫುಲ್ ಮಾರ್ಕ್ಸ್ ಪಡೆದ ಪವರ್ ಸ್ಟಾರ್ ಜೇಮ್ಸ್! - ಸೆನ್ಸಾರ್ ಪ್ರಕ್ರಿಯೆ ಮುಗಿಸಿದ ಪುನೀತ್​ ರಾಜ್​​ಕುಮಾರ್​​​ ಅಭಿನಯದ ಜೇಮ್ಸ್ ಚಿತ್ರ

ಜೇಮ್ಸ್​ ಸಿನಿಮಾದ ಟೀಸರ್​ನಲ್ಲಿ ಪವರ್ ಸ್ಟಾರ್ ಮಾಸ್ ಆ್ಯಂಡ್ ಕ್ಲಾಸ್ ಹೀರೋ ಬೆಳ್ಳಿ ತೆರೆ ಮೇಲೆ ಅಬ್ಬರಿಸಿದ್ದಾರೆ‌. ಇದಾದ ಬಳಿಕ ಟ್ರೇಡ್​ಮಾರ್ಕ್​ ಸಾಂಗ್​ ರಿಲೀಸ್​ ಮಾಡಲಾಯಿತು. ಇದನ್ನು ನೋಡಿ ಅಭಿಮಾನಿಗಳು ಸಖತ್​ ಖುಷಿಪಟ್ಟಿದ್ದಾರೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಪೂರ್ಣಗೊಂಡಿದ್ದು, ಮಾರ್ಚ್​ 17 ವಿಶ್ವದಾದ್ಯಂತ ತೆರೆ ಕಾಣುತ್ತಿದೆ.

ಪವರ್ ಸ್ಟಾರ್ ಪುನೀತ್​ ರಾಜ್​ಕುಮಾರ್
ಪವರ್ ಸ್ಟಾರ್ ಪುನೀತ್​ ರಾಜ್​ಕುಮಾರ್

By

Published : Mar 5, 2022, 10:06 PM IST

ಪವರ್ ಸ್ಟಾರ್ ಪುನೀತ್​ ರಾಜ್​ಕುಮಾರ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಜೇಮ್ಸ್​.‌ ಟೀಸರ್ ನಿಂದಲೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಟಾಕ್ ಆಗುತ್ತಿರುವ ಜೇಮ್ಸ್ ಚಿತ್ರಕ್ಕೆ ಸೆನ್ಸಾರ್​​ನಲ್ಲಿ ಪಾಸಾಗುವ ಮೂಲಕ ಮೆಚ್ಚುಗೆ ಸಿಕ್ಕಿದೆ. ಸೆನ್ಸಾರ್​ನಲ್ಲಿ ಯಾವುದೇ ಕಟ್​ ಇಲ್ಲದೆ ಯು/ಎ ಪ್ರಮಾಣಪತ್ರ ಸಿಕ್ಕಿದೆಯಂತೆ‌. ಇದರ ಜತೆಗೆ ಸಿನಿಮಾದಲ್ಲಿ ಯಾವುದೇ ದೃಶ್ಯವನ್ನು ಕಟ್​ ಮಾಡಲು ಸೆನ್ಸಾರ್ ಮಂಡಳಿ ಸೂಚನೆ ನೀಡಿಲ್ಲ ಅಂತಾ ನಿರ್ದೇಶಕ ಚೇತನ್ ಕುಮಾರ್ ಹೇಳಿದ್ದಾರೆ.

ಅಕ್ಟೋಬರ್​ 29ರಂದು ಪುನೀತ್​ ರಾಜ್​ಕುಮಾರ್ ನಿಧನ ಹೊಂದಿದ್ದರು. ಅದಾಗಲೇ ಅವರು ಜೇಮ್ಸ್​ ಸಿನಿಮಾ ಕೆಲಸಗಳನ್ನು ಬಹುತೇಕ ಪೂರ್ಣಗೊಳಿಸಿದ್ದರು. ಒಂದು ಹಾಡಿನ ಶೂಟಿಂಗ್​ ಮಾತ್ರ ಬಾಕಿ ಇತ್ತು. ಆದರೆ, ವಿಧಿಯಾಟವೇ ಬೇರೆ ಆಗಿತ್ತು. ಪುನೀತ್ ಹೃದಯಾಘಾತಕ್ಕೆ ಒಳಗಾಗಿ ದೇವರ ಹತ್ತಿರ ಹೊರಟು ಹೋದರು‌. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಪೂರ್ಣಗೊಂಡಿದ್ದು, ಮಾರ್ಚ್​ 17 ವಿಶ್ವದಾದ್ಯಂತ ತೆರೆ ಕಾಣುತ್ತಿದೆ.

ಜೇಮ್ಸ್​ ಸಿನಿಮಾದ ಟೀಸರ್​ನಲ್ಲಿ ಪವರ್ ಸ್ಟಾರ್ ಮಾಸ್ ಆ್ಯಂಡ್ ಕ್ಲಾಸ್ ಹೀರೋ ಆಗಿ ಬೆಳ್ಳಿ ತೆರೆ ಮೇಲೆ ಅಬ್ಬರಿಸಿದ್ದಾರೆ‌. ಇದಾದ ಬಳಿಕ ಟ್ರೇಡ್​ಮಾರ್ಕ್​ ಸಾಂಗ್​ ರಿಲೀಸ್​ ಮಾಡಲಾಯಿತು. ಇದನ್ನು ನೋಡಿ ಅಭಿಮಾನಿಗಳು ಸಖತ್​ ಖುಷಿಪಟ್ಟಿದ್ದಾರೆ. ಈ ಹಾಡು ಯೂಟ್ಯೂಬ್​ನಲ್ಲಿ ಕೋಟ್ಯಂತರ ಬಾರಿ ವೀಕ್ಷಣೆ ಕಂಡಿದೆ. ಜೇಮ್ಸ್​ ಸಿನಿಮಾದಲ್ಲಿ ಪುನೀತ್​ ಪಾತ್ರಕ್ಕೆ ಅವರ ಸಹೋದರ ಶಿವರಾಜ್​ಕುಮಾರ್ ಡಬ್​ ಮಾಡಿದ್ದಾರೆ.

ಜೇಮ್ಸ್ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಎರಡು ಶೇಡ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಪವರ್ ಆರ್ಮಿ ಆಫೀಸರ್ ಆಗಿ ಪ್ರೇಕ್ಷಕರಿಗೆ ಕಿಕ್ ಕೊಟ್ಟಿದ್ದಾರೆ. ಪವರ್ ಸ್ಟಾರ್ ಜೊತೆ ಪ್ರಿಯಾ ಆನಂದ್ ಜೋಡಿಯಾಗಿದ್ದಾರೆ. ಇದರ ಜೊತೆಗೆ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಶರತ್ ಕುಮಾರ್, ಶ್ರೀಕಾಂತ್,‌ ಅವಿನಾಶ್, ಸಾಧು ಕೋಕಿಲ, ರಂಗಾಯಣ ರಘು, ಚಿಕ್ಕಣ್ಣ, ಸೇರಿದಂತೆ ದೊಡ್ಡ ತಾರ ಬಳಗ ಈ ಚಿತ್ರದಲ್ಲಿದೆ.

ಈ ಚಿತ್ರಕ್ಕೆ ಸ್ವಾಮಿ ಜೆ ಗೌಡ ಕ್ಯಾಮರಾ ವರ್ಕ್ ಇದ್ದು, ಚರಣ್ ರಾಜ್ ಸಂಗೀತ ಈ ಚಿತ್ರಕ್ಕಿದೆ. ನಿರ್ದೇಶಕ ಚೇತನ್ ಕುಮಾರ್ ನಿರ್ದೇಶನವಿದ್ದು, ನಿರ್ಮಾಪಕ ಕಿಶೋರ್ ಪತ್ತಿಕೊಂಡ ಈ ಸಿನಿಮಾವನ್ನ ನಿರ್ಮಾಣ ಮಾಡಿದ್ದಾರೆ. ಸದ್ಯ ಸೆನ್ಸಾರ್​​ನಲ್ಲಿ ಪಾಸಾಗಿರೋ ಜೇಮ್ಸ್ ಸಿನಿಮಾದ ಪ್ರೀ ರಿಲೀಸ್​ ಕಾರ್ಯಕ್ರಮ ಅದ್ಧೂರಿಯಾಗಿಯಾಗಿ ನಡೆಸಲು ಚಿತ್ರತಂಡ ಪ್ಲಾನ್‌ ಮಾಡಿದೆ.

For All Latest Updates

TAGGED:

ABOUT THE AUTHOR

...view details