ಜೀವನ ಚಕ್ರದಲ್ಲಿ ಯಶಸ್ಸು ಅನ್ನೋದು ಅಷ್ಟೊಂದು ಸುಲಭದ ಮಾತಲ್ಲ. ಶ್ರಮ, ಶ್ರದ್ಧೆ ಜೊತೆಗೆ ಅದೃಷ್ಟ ಸಹ ಅವಶ್ಯಕ. ಆ ದಾರಿಯಲ್ಲೇ ಇದ್ದಾರೆ ಜೀವನ್ ಎಂಬ ಖಳನಟ.
ಎರಡು ವಾರಗಳ ಹಿಂದೆ ಬಿಡುಗಡೆ ಆದ ಸೀತಾರಾಮ ಕಲ್ಯಾಣ ಚಿತ್ರದಲ್ಲಿ ಆದಿತ್ಯ ಮೆನನ್ ಜೊತೆ ನಟಿಸಿದ್ದರು ಈ ಜೀವನ್. ಈ ಮೂಲಕ ಚಿತ್ರರಂಗಕ್ಕೂ ಈ ಮುಖ ಪರಿಚಿತವಾಯಿತು. ಸದ್ಯ ಕಿಚ್ಚ ಸುದೀಪ್ ಅವರ ಪೈಲ್ವಾನ್ ಸಿನಿಮಾದಲ್ಲಿ ಆರೇಳು ಸನ್ನಿವೇಶಗಳಲ್ಲಿ ಜೀವನ್ ಅಭಿನಯಿಸಿದ್ದಾರೆ.
ಉಪ್ಪಿ ಸ್ಫೂರ್ತಿ:
ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿಯ ಜೀವನ್ ಚಿಕ್ಕ ಹುಡುಗ ಆಗಿದ್ದಾಗಲೇ ನಟನೆ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದರು. ಮೈಸೂರಿನ ಕಲಾ ಮಂದಿರದಲ್ಲಿ ಉಪೇಂದ್ರ ಅವರಿಗೆ ಸನ್ಮಾನ ಕಾರ್ಯಕ್ರಮ ಇತ್ತು. ಅಂದು ನೂಕು ನುಗ್ಗಲಿನಲ್ಲಿ ಕಷ್ಟ ಪಟ್ಟು ಉಪೇಂದ್ರ ಅವರಿಗೆ ಹಾಲು ಉತ್ಪಾದಕರ ಸಂಘ ಬೆಳ್ಳಿ ಕಿರೀಟ ತೊಡಿಸಿದ್ದನ್ನು ನೋಡಿದ್ದ ಜೀವನ್ಗೆ ಜೀವನದಲ್ಲೂ ತಾನು ನಟ ಆಗಲೇಬೇಕು ಎಂದು ಪಣ ತೊಟ್ಟಿದ್ದರು.