2017ರಲ್ಲಿ ತೆರೆಕಂಡು ಉತ್ತಮ ವಿಮರ್ಶೆ ಗಳಿಸಿದ 'ಬ್ಯೂಟಿಫುಲ್ ಮನಸುಗಳು' ಸಿನಿಮಾವನ್ನು ಜಯತೀರ್ಥ ನಿರ್ದೇಶಿಸಿದ್ದಾರೆ. ಶಿವಮೊಗ್ಗದ ನೆಹರು ಸ್ಟೇಡಿಯಂ ಬಳಿಯಿರುವ ವಾರ್ತಾಭವನದ ಎರಡನೆ ಮಹಡಿಯ ಮಿನಿಚಿತ್ರಮಂದಿರದಲ್ಲಿ ನಾಳೆ ಸಂಜೆ 5.30 ಕ್ಕೆ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಶಿವಮೊಗ್ಗದಲ್ಲಿ ಜಯತೀರ್ಥ ನಿರ್ದೇಶನದ 'ಬ್ಯೂಟಿಫುಲ್ ಮನಸುಗಳು' ಸಂವಾದ ಕಾರ್ಯಕ್ರಮ - ವಿಜಯಪ್ರಕಾಶ್
ಕನ್ನಡ ಚಲನಚಿತ್ರ ಪ್ರದರ್ಶನ, ಸಂವಾದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಟಾಕೀಸ್ ಸಿನಿ ಸಂಭ್ರಮದಲ್ಲಿ 'ಬ್ಯೂಟಿಫುಲ್ ಮನಸುಗಳು' ಚಿತ್ರದ ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಶೃತಿ ಹರಿಹರನ್ ಹಾಗೂ ನೀನಾಸಂ ಸತೀಶ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
2013ರಲ್ಲಿ ಮಂಗಳೂರಿನಲ್ಲಿ ನಡೆದ ನೈಜಘಟನೆಯನ್ನು ಆಧರಿಸಿ ಈ ಸಿನಿಮಾವನ್ನು ನಿರ್ದೇಶಿಸಲಾಗಿದೆ. ಯಾವುದೇ ಹೆಣ್ಣಿಗೆ ಒಮ್ಮೆ ಕಳಂಕ ಅಂಟಿಕೊಂಡರೆ ಅದು ಬದುಕಿಡೀ ಕಾಡುತ್ತದೆ. ಇಬ್ಬರು ಹೆಣ್ಣುಮಕ್ಕಳು ತಮ್ಮ ಜೀವನದಲ್ಲಿ ಉಂಟಾಗುವ ಬಹುದೊಡ್ಡ ಕಳಂಕದಿಂದ ಹೊರಬರುವ ಕಥೆ ಈ ಸಿನಿಮಾದಲ್ಲಿದೆ. ಒಬ್ಬ ವ್ಯಕ್ತಿ ಸರಿಯಿಲ್ಲ ಎಂದು ನಾವು ಜಗತ್ತಿಗೆ ಹೇಳುವಾಗ ಬಹಳ ಯೋಚಿಸಬೇಕು. ಒಂದು ಘಟನೆ ಬಗ್ಗೆ ಹೇಗೆ ಪ್ರತಿಕ್ರಿಯಿಸಬೇಕು ಎಂಬುದರೊಂದಿಗೆ ಜೊತೆಗಿದ್ದವರ ಬಗ್ಗೆ ಜಗತ್ತು ಸಾವಿರ ಮಾತನಾಡಿದರೂ ನಾವು ಪೂರ್ತಿಯಾಗಿ ತಿಳಿದುಕೊಳ್ಳದೆ ಆ ಬಗ್ಗೆ ಅಂತಿಮ ತೀರ್ಮಾನಕ್ಕೆ ಬರಬಾರದು ಎಂದು ನಿರ್ದೇಶಕರು ಚಿತ್ರದ ಮೂಲಕ ಹೇಳಿದ್ದಾರೆ.
ಚಿತ್ರಕ್ಕೆ 2018ರ ಸಾಲಿನಲ್ಲಿ ಎರಡು ರಾಜ್ಯ ಪ್ರಶಸ್ತಿಗಳು ಬಂದಿವೆ. ಶೃತಿ ಹರಿಹರನ್ ಚಿತ್ರಕ್ಕೆ ಅತ್ಯುತ್ತಮ ನಟಿ ಪಶಸ್ತಿ ಪಡೆದರೆ, ‘ನಮ್ಮೂರಲ್ಲಿ ಚಳಿಗಾಲದಲ್ಲಿ’ ಚಿತ್ರದ ಹಾಡಿಗೆ ವಿಜಯಪ್ರಕಾಶ್ ಅತ್ಯುತ್ತಮ ಗಾಯಕ ಪಶಸ್ತಿ ಪಡೆದಿದ್ದಾರೆ. ಅಚ್ಯುತ್ ಕುಮಾರ್, ತಬಲಾ ನಾಣಿ, ಪ್ರಶಾಂತ್ ಸಿದ್ದಿ ಹಾಗೂ ಇನ್ನಿತರರು ಸಿನಿಮಾದಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಕಿರಣ್ ಹಂಪಾಪುರ ಛಾಯಾಗ್ರಹಣವಿದ್ದು ಭರತ್ ಸಂಗೀತವಿದೆ.