ಕರ್ನಾಟಕ

karnataka

ETV Bharat / sitara

ನಾಗಿಣಿ-2 ಧಾರಾವಾಹಿಯಲ್ಲಿ ನನ್ನದು ಅತಿಥಿ ಪಾತ್ರ ಎಂದ ಜೆಕೆ - ಜಯರಾಮ್​ ಕಾರ್ತಿಕ್​​​​

ನಾಗಿಣಿ 2 ಧಾರಾವಾಹಿಯಲ್ಲಿ ಜೆಕೆ ನಾಗನಾಗಿ ಕಾಣಿಸಿಕೊಳ್ಳುತ್ತಿರುವುದೇನೋ ನಿಜ. ಆದರೆ ಧಾರಾವಾಹಿಯಲ್ಲಿ ಅವರು ಅತಿಥಿ ಪಾತ್ರ ಮಾಡಿದ್ದಾರೆ. ಅಂದರೆ ಇಡೀ ಧಾರಾವಾಹಿಯಲ್ಲಿ ನಾಯಕನಾಗಿ ಜೆಕೆ ಆಲಿಯಾಸ್ ಜಯರಾಂ ಕಾರ್ತಿಕ್ ಕಾಣಿಸಿಕೊಳ್ಳುವುದಿಲ್ಲ. ಬದಲಿಗೆ ಆರಂಭದ ಸಂಚಿಕೆಗಳಲ್ಲಿ ಮಾತ್ರ ಕಾಣಿಸಲಿದ್ದಾರೆ.

jayaram kartikn acting gust role in nagini 2
ನಾಗಿಣಿ-2 ಧಾರಾವಾಹಿಯಲ್ಲಿ ನನ್ನದು ಅತಿಥಿ ಎಂದ ಜಯರಾಮ್​ ಕಾರ್ತಿಕ್​​​

By

Published : Dec 25, 2019, 9:38 PM IST

ನಾಗಿಣಿ 2 ಧಾರಾವಾಹಿಯು ಯಾವ ಸಿನಿಮಾಕ್ಕಿಂತಲೂ ಕಡಿಮೆ ಇಲ್ಲ ಎಂದು ನಟ ಜಯರಾಮ್​ ಕಾರ್ತಿಕ್​​​​ ಸಂತಸದಿಂದ ಹೇಳಿದ್ದಾರೆ. ಧಾರಾವಾಹಿಯಲ್ಲಿ ತಾವು ಅತಿಥಿ ಪಾತ್ರದಲ್ಲಿ ನಟಿಸಿರುವುದಾಗಿ ಹೇಳಿದ್ದಾರೆ.

ಈ ಧಾರಾವಾಹಿಯಲ್ಲಿ ಜೆಕೆ ನಾಗನಾಗಿ ಕಾಣಿಸಿಕೊಳ್ಳುತ್ತಿರುವುದೇನೋ ನಿಜ. ಆದರೆ ಧಾರಾವಾಹಿಯಲ್ಲಿ ಅವರು ಅತಿಥಿ ಪಾತ್ರ ಮಾಡಿದ್ದಾರೆ. ಅಂದರೆ ಇಡೀ ಧಾರಾವಾಹಿಯಲ್ಲಿ ನಾಯಕನಾಗಿ ಜೆಕೆ ಆಲಿಯಾಸ್ ಜಯರಾಂ ಕಾರ್ತಿಕ್ ಕಾಣಿಸಿಕೊಳ್ಳುವುದಿಲ್ಲ. ಬದಲಿಗೆ ಆರಂಭದ ಸಂಚಿಕೆಗಳಲ್ಲಿ ಮಾತ್ರ ಕಾಣಿಸಲಿದ್ದಾರೆ.

ಧಾರಾವಾಹಿಯ ನಿರ್ದೇಶಕ ರಾಮ್, ನಾಗಿಣಿ 2 ಧಾರಾವಾಹಿಯಲ್ಲಿ ಅತಿಥಿ ಪಾತ್ರದಲ್ಲಿ ನಟಿಸುತ್ತೀರಾ ಎಂದು ಕೇಳಿದಾಗ ಇಲ್ಲ ಎನ್ನಲಾಗಲಿಲ್ಲ. ಅವರ ಮಾತಿಗೆ ಮಣಿದು ನಾನು ನಾಗನಾಗಿ ನಿಮ್ಮ ಮುಂದೆ ಬರಿತ್ತಿದ್ದೇನೆ ಎಂದು ಜೆಕೆ ಹೇಳಿದ್ದಾರೆ.

ನಾಗಿಣಿ-2 ಧಾರಾವಾಹಿಯಲ್ಲಿ ನನ್ನದು ಅತಿಥಿ ಎಂದ ಜಯರಾಮ್​ ಕಾರ್ತಿಕ್​​​

ಜಯರಾಂ ಕಾರ್ತಿಕ್ ನಾಗನಾಗಿ ಕಾಣಿಸಿಕೊಂಡಿರುವ ಪ್ರೊಮೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಪ್ರೋಮೋ ಶೂಟ್ ಮಾಡುವಾಗ ಕೇವಲ ಎರಡು ದಿನದಲ್ಲಿ ಚಿತ್ರೀಕರಣ ಮುಗಿಸಬೇಕೆಂದುಕೊಂಡಿದ್ದರು. ಆದರೆ ಸಂಪೂರ್ಣ ಚಿತ್ರೀಕರಣ ಮುಗಿಯುವಾಗ ಎಂಟು ದಿನಗಳಾಗಿತ್ತು ಎನ್ನುತ್ತಾರೆ ಜೆಕೆ.

ಅನುಭವಿ ನಿರ್ದೇಶಕರ ಸಾಲಿಗೆ ಸೇರಿರುವ ಮಹೇಶ್ ರಾವ್ ಅವರು ನಾಗಿಣಿ 2 ನಿರ್ದೇಶನ ಮಾಡುತ್ತಿದ್ದಾರೆ. ಅಲ್ಲದೆ ಧಾರಾವಾಹಿಗೆ ಸಪೋರ್ಟ್ ನೀಡಲೆಂದೇ ಮುಂಬೈನಿಂದ ಬಂದ ಸಂತೋಷ್ ಎಂಬ ನಿರ್ದೇಶಕರು ಕೂಡಾ ಈ ತಂಡದಲ್ಲಿದ್ದಾರೆ. ತಂಡ ಬಹಳ ಚೆನ್ನಾಗಿದೆ. ನಾನು ಅಭಿನಯಿಸಿದ್ದು ಕೆಲವೇ ಸಂಚಿಕೆಗಳಲ್ಲಿ ಆಗಿದ್ದರೂ ನಾನು ತುಂಬಾ ಕಂಫರ್ಟ್​ನಿಂದ ನಟಿಸಿದೆ ಎಂದು ಜಯರಾಮ್​ ಹೇಳಿದ್ದಾರೆ.

ABOUT THE AUTHOR

...view details