ಕೆ.ಎಸ್.ರಾಮ್ ಜೀ ನಿರ್ದೇಶನದ ಸೂಪರ್ ನ್ಯಾಚುರಲ್ ಧಾರಾವಾಹಿ ನಾಗಿಣಿ 2ರಲ್ಲಿ ಆದಿಶೇಷನಾಗಿ ನಟಿಸಿ ಕಿರುತೆರೆ ವೀಕ್ಷಕರ ಮನ ಸೆಳೆದಿದ್ದ ಜಯರಾಂ ಕಾರ್ತಿಕ್ ಈಗ ಮತ್ತೊಮ್ಮೆ ಅದೇ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಹಬ್ಬಿದೆ.
ಆದಿಶೇಷನಾಗಿ ಮತ್ತೆ ಬರಲಿದ್ದಾರಾ ಜಯರಾಂ ಕಾರ್ತಿಕ್? - ಜಯರಾಮ್ ಕಾರ್ತಿಕ್ ಸುದ್ದಿ
ನಾಗಿಣಿ 2ರಲ್ಲಿ ಆದಿಶೇಷನಾಗಿ ನಟಿಸಿ ಕಿರುತೆರೆ ವೀಕ್ಷಕರ ಮನ ಸೆಳೆದಿದ್ದ ಜಯರಾಂ ಕಾರ್ತಿಕ್ ಈಗ ಮತ್ತೊಮ್ಮೆ ಅದೇ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಹಬ್ಬಿದೆ.
ಬಿಗ್ ಬಾಸ್ ಶೋ ನಂತರ ಕಿರುತೆರೆಯಿಂದ ದೂರವಿದ್ದ ಜಯರಾಂ ಕಾರ್ತಿಕ್ ನಾಗಿಣಿ 2 ಧಾರಾವಾಹಿಯ ಮೂಲಕ ಕಿರುತೆರೆಗೆ ಮರಳಿದ್ದರು. ನಾಗಮಣಿಯ ಆಸೆಗಾಗಿ ನಾಗಲೋಕಕ್ಕೆ ಬಂದ ದುಷ್ಟರು ನಾಗಮಣಿಯನ್ನು ವಶಪಡಿಸುವಾಗ ನಾಗರಾಜ ಆದಿಶೇಷನನ್ನು ಸಾಯಿಸುತ್ತಾರೆ. ಇಚ್ಛಾದಾರಿ ನಾಗಿಣಿ ಶಿವಾನಿ ನಾಗಮಣಿಗಾಗಿ ಹಾಗೂ ಆದಿಶೇಷನನ್ನು ಕೊಂದ ದಿಗ್ವಿಜಯ್ ರಾಯ್ ಮೇಲೆ ಸೇಡು ತೀರಿಸಿಕೊಳ್ಳಲು ಭೂಮಿಯಲ್ಲಿ ಮಾನವ ರೂಪದಲ್ಲಿ ಬರುತ್ತಾಳೆ. ಭೂಮಿಯಲ್ಲಿ ಜನ್ಮವೆತ್ತಿ ಬಂದ ಆದಿಶೇಷನನ್ನು ಹುಡುಕುತ್ತಾಳೆ.
ಸದ್ಯದ ಸುದ್ದಿಯಂತೆ ಜಯರಾಂ ಕಾರ್ತಿಕ್ ಪುನಃ ಆದಿಶೇಷನಾಗಿ ಸೀರಿಯಲ್ನಲ್ಲಿ ಕಾಣಿಸಿಕೊಳ್ಳಲಿದ್ದು, ಇದರಿಂದ ಕಥೆಗೆ ರೋಚಕ ತಿರುವು ಸಿಗಲಿದೆ. "ಈ ಧಾರಾವಾಹಿ ಅದ್ಧೂರಿಯಾಗಿರಲಿದೆ. ಕನ್ನಡ ಕಿರುತೆರೆಯಲ್ಲಿ ಮೊದಲ ಬಾರಿಗೆ ರೊಮ್ಯಾಂಟಿಕ್ ಹಾಡು ಹಾಗೂ ಇದುವರೆಗೂ ಪ್ರಯತ್ನಿಸಿರದ ಆ್ಯಕ್ಷನ್ ದೃಶ್ಯಗಳಿಗೆ ವೀಕ್ಷಕರು ಸಾಕ್ಷಿಯಾಗಲಿದ್ದಾರೆ" ಎಂದು ನಾಗಿಣಿ 2 ಧಾರಾವಾಹಿಯ ಬಗ್ಗೆ ಜಯರಾಂ ಅಂದು ಅಭಿಪ್ರಾಯಪಟ್ಟಿದ್ದರು.