ಕರ್ನಾಟಕ

karnataka

ETV Bharat / sitara

'ಕ್ರಾಂತಿವೀರ' ಭಗತ್ ಸಿಂಗ್ ಪಾತ್ರದಲ್ಲಿ ಡಾನ್ ಜಯರಾಜ್ ಪುತ್ರ ಅಜಿತ್ ಜಯರಾಜ್ - Kranthiveera movie

ಭೂಗತ ಲೋಕವನ್ನು ಆಳಿದ್ದ ಡಾನ್ ಎಂ.ಪಿ. ಜಯರಾಜ್ ಪುತ್ರ ಅಜಿತ್ ಜಯರಾಜ್ ಈಗ 'ಭಗತ್ ಸಿಂಗ್' ರೂಪದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 'ಕ್ರಾಂತಿವೀರ' ಕನ್ನಡ ಚಿತ್ರದ ಮೂಲಕ ಬೆಳ್ಳಿತೆರೆ ಮೇಲೆ ಬರಲು ಸಿದ್ಧತೆ ನಡೆಸಿದ್ದಾರೆ.

Jayaraj Son Ajith Jayaraj Acting In Kranthiveera Movie
ಭಗತ್​​​ ಸಿಂಗ್ ಜೀವನಾಧಾರಿತ ಸಿನಿಮಾ ಚಿತ್ರೀಕರಣ

By

Published : Oct 19, 2020, 6:26 PM IST

ಸ್ಯಾಂಡಲ್​​ವುಡ್​​ನಲ್ಲಿ ಭಗತ್​​​ ಸಿಂಗ್ ಜೀವನಾಧಾರಿತ ಸಿನಿಮಾ ತಯಾರಾಗುತ್ತಿದ್ದು, ಚಿತ್ರದಲ್ಲಿ ಮೊದಲ ಬಾರಿಗೆ ಅಜಿತ್ ಜಯರಾಜ್ ಭಗತ್​​ ಸಿಂಗ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಭಗತ್​​​ ಸಿಂಗ್ ಜೀವನಾಧಾರಿತ ಸಿನಿಮಾ ಚಿತ್ರೀಕರಣ

ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಜೀವನ ಆಧಾರಿತ ಸಿನಿಮಾ ಇದಾಗಿದ್ದು, ಚಿತ್ರಕ್ಕೆ ಆದತ್​ ಎಂ.ಪಿ ನಿರ್ದೇಶನವಿದೆ. 1907ರಲ್ಲಿ ಜನಿಸಿದ ಭಗತ್ ಸಿಂಗ್ ಚಿಕ್ಕ ವಯಸ್ಸಿನಲ್ಲೇ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿ 24 ವರ್ಷವಾಗಿದ್ದಾಗ ಗಲ್ಲಿಗೇರಿಸಲಾಗಿತ್ತು. ಇನ್ನು ಭಗತ್ ಸಿಂಗ್ ಹುಟ್ಟುಹಬ್ಬ ಹಿನ್ನೆಲೆ ಚಿತ್ರದ ಪೋಸ್ಟರ್ ರಿಲೀಸ್ ಮಾಡಲಾಗಿತ್ತು.

ಭಗತ್​​​ ಸಿಂಗ್ ಜೀವನಾಧಾರಿತ ಸಿನಿಮಾ ಚಿತ್ರೀಕರಣ

ಚಂದ್ರಶೇಖರ್ ಆಜಾದ್ ಪಾತ್ರದಲ್ಲಿ ಪ್ರಮೋದ್ ಶೆಟ್ಟಿ, ಲಾಲಾ ಲಜಪತ್ ರಾಯ್ ಪಾತ್ರದಲ್ಲಿ ಗೀತಸಾಹಿತಿ, ನಿರ್ದೇಶಕ, ನಟ ಡಾ ವಿ.ನಾಗೇಂದ್ರ ಪ್ರಸಾದ್, ಪೋಷಕ ಪಾತ್ರಗಳಲ್ಲಿ ಜೋ ಸೈಮನ್, ಭವಾನಿ ಪ್ರಕಾಶ್ ಹಾಗೂ ಲಕ್ಷ್ಮಣ್ ಅಭಿನಯಿಸಿದ್ದಾರೆ.

ಭಗತ್​​​ ಸಿಂಗ್ ಜೀವನಾಧಾರಿತ ಸಿನಿಮಾ ಚಿತ್ರೀಕರಣ

'ಕ್ರಾಂತಿವೀರ' ಚಿತ್ರ ತಂಡ ಕೆಜಿಎಫ್, ಹುಬ್ಬಳ್ಳಿ, ಬಾಗಲಕೋಟೆ, ಶಿವಮೊಗ್ಗ ಕಾರಾಗೃಹ, ಕಂಠೀರವ ಸ್ಟುಡಿಯೋದಲ್ಲಿ ಚಿತ್ರೀಕರಣ ಮಾಡಿದೆ. ಸಣ್ಣ-ಪುಟ್ಟ ಪ್ಯಾಚ್ ವರ್ಕ್ ಕೆಲಸ ಬಾಕಿ ಇದೆ. ಸಿನಿಮಾಗೆ ಪ್ರತಾಪ್ ಎಸ್ ಸಂಗೀತ, ಕೆ.ಎಂ. ಪ್ರಕಾಶ್ ಸಂಕಲನ, ಆರ್​​​. ಕೆ ನೃತ್ಯ ನಿರ್ದೇಶನ ಮಾಡಿದ್ದಾರೆ. ಚಂದ್ರಕಲ ಟಿ ರಾಥೋಡ್, ಮಂಜುನಾಥ್ ಹೆಚ್. ನಾಯಕ್ ಹಾಗೂ ಅರ್ಜೂರಾಜ್ ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ.

ABOUT THE AUTHOR

...view details