ಕಳೆದ 12 ವರ್ಷಗಳಿಂದ ಹಲವಾರು ತೆಲುಗು, ತಮಿಳು, ಮಲಯಾಳಂ ಸಿನಿಮಾಗಳಲ್ಲಿ ಅಭಿನಯಿಸಿದ ಕೆಲವೊಂದು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದ ಜಯಪ್ರಕಾಶ್.ವಿ ಇದೀಗ ಮತ್ತೆ ಕನ್ನಡಕ್ಕೆ ಬಂದಿದ್ದಾರೆ. ಡಾ. ಶಿವರಾಜ್ ಕುಮಾರ್ ಅಭಿನಯದ ‘ಕವಚ’ ಚಿತ್ರದಲ್ಲಿ ಮೊದಲ ಬಾರಿಗೆ ಅಭಿನಯಿಸಿದ್ದ ಜಯಪ್ರಕಾಶ್.ವಿ ಈಗ ಮತ್ತೆ ‘ತ್ರಿವಿಕ್ರಮ’ ಚಿತ್ರದಿಂದ ಚಂದನವನಕ್ಕೆ ಬಂದಿದ್ದಾರೆ.
ಮತ್ತೆ ಸ್ಯಾಂಡಲ್ವುಡ್ಗೆ ಆಗಮಿಸಿದ ದಕ್ಷಿಣ ಭಾರತದ ಖ್ಯಾತ ನಟ ಜಯಪ್ರಕಾಶ್. ವಿ - ಸಹನಾ ಮೂರ್ತಿ
ತಮಿಳು, ಮಲಯಾಳಂ, ತೆಲುಗು ಸಿನಿಮಾಗಳಲ್ಲಿ ಅಭಿನಯಿಸಿರುವ ದಕ್ಷಿಣ ಭಾರತದ ಖ್ಯಾತ ನಟ ಜಯಪ್ರಕಾಶ್.ವಿ ಇದೀಗ ಮತ್ತೆ ಕನ್ನಡ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಶಿವರಾಜ್ಕುಮಾರ್ ಅಭಿನಯದ 'ಕವಚ' ಸಿನಿಮಾ ನಂತರ ಇದೀಗ ಅವರು 'ತ್ರಿವಿಕ್ರಮ' ಚಿತ್ರದಲ್ಲಿ ನಾಯಕನ ತಂದೆ ಪಾತ್ರದಲ್ಲಿ ನಟಿಸುತ್ತಿದ್ದಾರೆ.
![ಮತ್ತೆ ಸ್ಯಾಂಡಲ್ವುಡ್ಗೆ ಆಗಮಿಸಿದ ದಕ್ಷಿಣ ಭಾರತದ ಖ್ಯಾತ ನಟ ಜಯಪ್ರಕಾಶ್. ವಿ](https://etvbharatimages.akamaized.net/etvbharat/prod-images/768-512-4524157-thumbnail-3x2-jayprakash.jpg)
ವಿ. ರವಿಚಂದ್ರನ್ ಪುತ್ರ ವಿಕ್ರಮ್ ಅಭಿನಯದ ಮೊದಲ ಸಿನಿಮಾ 'ತ್ರಿವಿಕ್ರಮ'ದಲ್ಲಿ ನಾಯಕಿ ಆಕಾಂಕ್ಷಾ ತಂದೆ ಪಾತ್ರದಲ್ಲಿ ಜಯಪ್ರಕಾಶ್ ಅಭಿನಯಿಸುತ್ತಿದ್ದಾರೆ. ಇನ್ನು ನಿರ್ದೇಶಕ ಶಿವಮಣಿ ಪತ್ನಿ ತುಳಸಿ ಶಿವಮಣಿ ನಾಯಕ ವಿಕ್ರಮ್ ತಾಯಿ ಪಾತ್ರವನ್ನು ನಿರ್ವಹಿಸಿದ್ದಾರೆ. ಕಳೆದ 5 ದಿನಗಳಿಂದ ಜಯಪ್ರಕಾಶ್, ನಿರ್ದೇಶಕ ಸಹನಾ ಮೂರ್ತಿ ತಂಡದಲ್ಲಿ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಶೇಕಡಾ 50 ರಷ್ಟು ಚಿತ್ರೀಕರಣ ಮುಗಿದಿದೆ. ಇತ್ತೀಚೆಗೆ ಛಾಯಾಗ್ರಾಹಕ ಸಂತೋಷ್ ರೈ ಪಾತಾಜೆ ಕಾಲೇಜು ದೃಶ್ಯಗಳು ಹಾಗೂ ಸುಬ್ರಮಣ್ಯ ನಗರ ಮಿಲ್ಕ್ ಕಾಲೋನಿ ಮೈದಾನದಲ್ಲಿ ಒಂದು ಹಾಡನ್ನು ಸೆರೆ ಹಿಡಿದ್ದಾರೆ. ಮುಂದಿನ ಭಾಗದ ಚಿತ್ರಕ್ಕೆ ‘ತ್ರಿವಿಕ್ರಮ’ ತಂಡ ರಾಜಸ್ಥಾನಕ್ಕೆ ಹೊರಡಲಿದೆ. ನಂತರ ಹಾಡುಗಳ ಚಿತ್ರೀಕರಣಕ್ಕೆ ಗೋವಾ, ದೂದ್ ಸಾಗರ್ ಹಾಗೂ ಬ್ಯಾಂಕಾಕ್ ತೆರಳಲಿದೆ.
ಈ ಚಿತ್ರದಲ್ಲಿ ಅಕ್ಷರ ಗೌಡ ಮತ್ತೊಬ್ಬ ನಾಯಕಿಯಾಗಿ ನಟಿಸುತ್ತಿದ್ದಾರೆ. ಸ್ನೇಹ, ಪ್ರೀತಿ, ಹಾಸ್ಯ, ಸೆಂಟಿಮೆಂಟ್, ಸಾಹಸ ಸೇರಿ ಎಲ್ಲ ಅಂಶಗಳೂ ಈ ಸಿನಿಮಾದಲ್ಲಿದೆ ಎನ್ನುತ್ತಾರೆ ನಿರ್ದೇಶಕ ಸಹನಾ ಮೂರ್ತಿ. ಇವರು ಈ ಮುನ್ನ ‘ರೋಸ್’ ಹಾಗೂ ‘ಮಾಸ್ ಲೀಡರ್’ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಚಿಕ್ಕಣ್ಣ, ಸುಚೇಂದ್ರ ಪ್ರಸಾದ್, ಸಾಧು ಕೋಕಿಲ ಕೂಡಾ ಚಿತ್ರದ ತಾರಾಬಳಗದಲ್ಲಿದ್ದಾರೆ. ಅರ್ಜುನ್ ಜನ್ಯ ಆರು ಹಾಡುಗಳಿಗೆ ರಾಗ ಸಂಯೋಜನೆ ಮಾಡುತ್ತಿದ್ದಾರೆ.