ಕರ್ನಾಟಕ

karnataka

ETV Bharat / sitara

ಹಿಂದಿಯಲ್ಲಿ ಸಿನಿಮಾ ಆಗ್ತಿದೆ ಜಯಂತ್ ಕಾಯ್ಕಿಣಿ ಜನಪ್ರಿಯ ಕಥೆ 'ಮಧ್ಯಂತರ' - ಹಾಲಿನ ಮೀಸೆ

ಜಯಂತ್ ಕಾಯ್ಕಿಣಿ ಅವರ 'ಮಧ್ಯಂತರ' ಎಂಬ ಜನಪ್ರಿಯ ಕಥೆಯನ್ನು ಹಿಂದಿಯಲ್ಲಿ 'ಅನ್ಕಹಿ ಕಹಾನಿಯಾ' ಎಂಬ ಆಂಥಾಲಜಿ (ಕಿರುಚಿತ್ರಗಳ ಗುಚ್ಛ)ಯಲ್ಲಿ ಬಳಸಿಕೊಳ್ಳಲಾಗಿದ್ದು, ಈ ಚಿತ್ರ ಸೆಪ್ಟೆಂಬರ್ 17 ರಿಂದ ನೆಟ್​ಫ್ಲಿಕ್ಸ್​ನಲ್ಲಿ ಪ್ರಸಾರವಾಗಲಿದೆ.

Jayant Kaikini
ಜಯಂತ್ ಕಾಯ್ಕಿಣಿ

By

Published : Aug 23, 2021, 1:08 PM IST

ಜನಪ್ರಿಯ ಕಥೆಗಾರ, ಸಾಹಿತಿ ಜಯಂತ್ ಕಾಯ್ಕಿಣಿ ಅನೇಕ ಚಿತ್ರಗಳಿಗೆ ಹಾಡುಗಳನ್ನು ರಚಿಸಿದ್ದಾರೆ. ಕೆಲವು ಸಿನಿಮಾಗಳ ಚಿತ್ರಕಥೆ, ಸಂಭಾಷಣೆಯಲ್ಲಿಯೂ ಸಹ ತೊಡಗಿಸಿಕೊಂಡಿದ್ದಾರೆ. ಆದರೆ, ಅವರು ಬರೆದಿರುವ ಕಥೆಗಳನ್ನಾಧರಿಸಿ ಇದುವರೆಗೂ ಚಿತ್ರಗಳಾಗಿರುವುದು ಬಹಳ ಕಡಿಮೆ.

ಜಯಂತ್ ಕಾಯ್ಕಿಣಿ ಅವರ 'ಹಾಲಿನ ಮೀಸೆ' ಕಥೆಯನ್ನಾಧರಿಸಿ ಹಿರಿಯ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರು 'ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ' ಎಂಬ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈಗಾಗಲೇ ಈ ಚಿತ್ರವು ಹಲವು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ. ಇದೀಗ ಕಾಯ್ಕಿಣಿ ಅವರ 'ಮಧ್ಯಂತರ' ಎಂಬ ಇನ್ನೊಂದು ಜನಪ್ರಿಯ ಕಥೆಯನ್ನು ಹಿಂದಿಯಲ್ಲಿ 'ಅನ್ಕಹಿ ಕಹಾನಿಯಾ' ಎಂಬ ಆಂಥಾಲಜಿ (ಕಿರುಚಿತ್ರಗಳ ಗುಚ್ಛ) ಯಲ್ಲಿ ಬಳಸಿಕೊಳ್ಳಲಾಗಿದೆ.

ಈ ಚಿತ್ರದಲ್ಲಿ ಮೂರು ಕಥೆಗಳಿದ್ದು, ಅದರಲ್ಲಿ ಜಯಂತ್ ಕಾಯ್ಕಿಣಿ ಅವರ ಕಥೆಯೂ ಇರುವುದು ವಿಶೇಷ. ಸೆಪ್ಟೆಂಬರ್ 17 ರಿಂದ ನೆಟ್​ಫ್ಲಿಕ್ಸ್​ನಲ್ಲಿ ಪ್ರಸಾರವಾಗಲಿರುವ ಈ ಚಿತ್ರವನ್ನು ಅಭಿಷೇಕ್ ಚೌಬೆ ನಿರ್ದೇಶನ ಮಾಡಿದ್ದು, ರಿಂಕು ರಾಜಗುರು ಮತ್ತು ದೆಲ್ಜಾದ್ ಹಿವಾಲೆ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ABOUT THE AUTHOR

...view details