ಪುನೀತ್ ರಾಜ್ಕುಮಾರ್ ಅಭಿನಯದಲ್ಲಿ ದಿನಕರ್ ತೂಗುದೀಪ್ ಒಂದು ಚಿತ್ರ ನಿರ್ದೇಶಿಸುತ್ತಾರೆ ಎಂಬ ಸುದ್ದಿಯೊಂದು ಕೇಳಿ ಬರುತ್ತಲೇ ಇತ್ತು. ಆದರೆ ಅವರಿಬ್ಬರನ್ನು ಸೇರಿಸುತ್ತಿರುವವರು ಯಾರು? ಎಂಬ ಪ್ರಶ್ನೆ ಎಲ್ಲರಿಗೂ ಕಾಡಿತ್ತು. ಈದೀಗ ಈ ಪ್ರಶ್ನೆಗೆ ಉತ್ತರ ದೊರೆತಿದೆ. ಆ ಚಿತ್ರವನ್ನು ಜಯಣ್ಣ ಕಂಬೈನ್ಸ್ ಬ್ಯಾನರ್ ಅಡಿ ಜಯಣ್ಣ ಮತ್ತು ಭೋಗೇಂದ್ರ ನಿರ್ಮಿಸುತ್ತಿದ್ದಾರೆ ಎಂಬ ವಿಚಾರ ರಿವೀಲ್ ಆಗಿದೆ.
2006 ರಲ್ಲಿ ಬಿಡುಗಡೆಯಾದ 'ಜೊತೆ ಜೊತೆಯಲಿ' ಚಿತ್ರದ ಮೂಲಕ ನಿರ್ದೇಶಕರಾದ ದಿನಕರ್ ನಂತರ 'ನವಗ್ರಹ', 'ಸಾರಥಿ' ಮತ್ತು 'ಲೈಫ್ ಜೊತೆ ಒಂದು ಸೆಲ್ಫಿ' ಚಿತ್ರಗಳನ್ನು ಮಾತ್ರ ನಿರ್ದೇಶನ ಮಾಡಿದ್ದಾರೆ. ಒಂದೊಂದು ಚಿತ್ರಕ್ಕೂ ಸಾಕಷ್ಟು ಸಮಯ ತೆಗೆದುಕೊಂಡು ಹೋಂವರ್ಕ್ ಮಾಡುವ ದಿನಕರ್, ಲಾಕ್‍ಡೌನ್ ಸಮಯದಲ್ಲಿ ಒಂದು ಕಥೆ ಮಾಡಿಟ್ಟುಕೊಂಡಿದ್ದರಂತೆ. ಆ ಚಿತ್ರಕ್ಕೆ ಪುನೀತ್ ಸೂಕ್ತ ಎಂದು ಅಪ್ರೋಚ್ ಮಾಡಿದ್ದಾರೆ. ಪುನೀತ್ ಕೂಡಾ ಕಥೆ ಕೇಳಿ ಒಪ್ಪಿಕೊಂಡು ಚಿತ್ರದಲ್ಲಿ ನಟಿಸಲು ಮುಂದಾಗಿದ್ದಾರಂತೆ. ಇದು ಪುನೀತ್ ಜೊತೆಗೆ ದಿನಕರ್ ಮೊದಲ ಸಿನಿಮಾವಾಗಿದೆ.