ಇದೇ ವೇಳೆ ಚಿತ್ರ ನಿರ್ಮಾಪಕ ಸಂತೋಷ್ ನಾಯಕ ರಿಷಬ್ ಶೆಟ್ಟಿಗೆ ಬೆಲ್ ಬಾಟಂನಲ್ಲಿ ಬಳಸಿದ್ದ ಜಾವಾ ಬೈಕ್ ಉಡುಗೊರೆಯಾಗಿ ನೀಡಿದ್ರು. ಇದನ್ನು ಪಡೆದ ರಿಷಭ್ ಫುಲ್ ಖುಷ್ ಆಗಿದ್ದರು. ಈ ವೇಳೆ ಮಾತಾಡಿದ ಅವರು, ಮೊದಲೆ ಈ ಬೈಕ್ ಖರೀದಿಸಲು ನಿರ್ಧರಿಸಿದ್ದೆ. ಆದ್ರೆ, ಇದೀಗ ನಿರ್ಮಾಪಕರೇ ಅದನ್ನು ಗಿಫ್ಟ್ ಮಾಡಿರುವುದು ಖುಷಿ ತಂದಿದೆ ಎಂದರು. ಬೆಲ್ ಬಾಟಂ ಚಿತ್ರದಲ್ಲಿ ಹಾಕಿರುವ ಕಾಸ್ಟ್ಯೂಮ್ ಕೂಡ ನೆನಪಿಗಾಗಿ ಚಿತ್ರತಂಡದಿಂದ ತೆಗೆದುಕೊಂಡಿರುವುದಾಗಿ ತಿಳಿಸಿದ್ರು.
'ಬೆಲ್ ಬಾಟಂ' ನಿರ್ಮಾಪಕರಿಂದ ರಿಷಭ್ಗೆ ಸಿಕ್ತು ಭರ್ಜರಿ ಗಿಫ್ಟ್ - undefined
ನಟ ನಿರ್ದೇಶಕ ರಿಷಭ್ ಶೆಟ್ಟಿ ಮೊದಲ ಬಾರಿಗೆ ನಾಯಕನಾಗಿ ಅಭಿನಯಿಸಿದ್ದ 'ಬೆಲ್ ಬಾಟಂ' ಚಿತ್ರ ಯಶಸ್ವಿಯಾಗಿ 100 ದಿನ ಪೂರೈಸಿದೆ. ಚಿತ್ರತಂಡ ಈ ಸಂಭ್ರಮವನ್ನು ಪ್ರೇಕ್ಷಕರ ಜೊತೆ ವೀರೇಶ್ ಚಿತ್ರಮಂದಿರದಲ್ಲಿ ಕೇಕ್ ಕತ್ತರಿಸಿ ಆಚರಿಸಿತು.
!['ಬೆಲ್ ಬಾಟಂ' ನಿರ್ಮಾಪಕರಿಂದ ರಿಷಭ್ಗೆ ಸಿಕ್ತು ಭರ್ಜರಿ ಗಿಫ್ಟ್](https://etvbharatimages.akamaized.net/etvbharat/prod-images/768-512-3404938-thumbnail-3x2-rishabh-shetty.jpg)
ಬೆಲ್ ಬಾಟಂ
ರಿಷಭ್ಗೆ ಸಿಕ್ತು ಭರ್ಜರಿ ಗಿಫ್ಟ್
ಬಳಿಕ ಉಡುಗೊರೆಯಾಗಿ ಬಂದ ಬೈಕ್ ಮೇಲೆ ಹರಿಪ್ರಿಯಾ ಅವರನ್ನು ಕೂರಿಸಿಕೊಂಡು ಒಂದು ರೌಂಡ್ ಹಾಕಿ, ಎಂಜಾಯ್ ಮಾಡಿದ್ರು. ಅಲ್ಲದೇ ಜಾವಾ ಬೈಕ್ ಗಿಫ್ಟ್ ಸಿಕ್ಕಿದಕ್ಕೆ ಹರಿಪ್ರಿಯಾ ಸಹ ರಿಷಭ್ಗೆ ವಿಶ್ ಮಾಡಿದ್ರು.
ಜಯತೀರ್ಥ ನಿರ್ದೇಶನದ ಈ ಚಿತ್ರದಲ್ಲಿ ರಿಷಭ್ ಡಿಟೆಕ್ಟಿವ್ ದಿವಾಕರ್ ಪಾತ್ರದಲ್ಲಿ ನಟಿಸಿದ್ದರು. ಪತ್ತೆದಾರಿ ಕೆಲಸಕ್ಕೆ ಈ ಜಾವಾ ಬೈಕ್ನ್ನೇ ಉಪಯೋಗಿಸಿದ್ದರು. ಇದೀಗ ಅದೇ ಬೈಕ್ ರಿಷಭ್ ಮನೆಗೆ ಉಡುಗೊರೆಯಾಗಿ ಬಂದಿದೆ.