ಬಾಲಿವುಡ್ ಎವರ್ಗ್ರೀನ್ ಬ್ಯೂಟಿ, ಜನಪ್ರಿಯ ನಟಿ ದಿ.ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಬೋಲ್ಡ್ ಲುಕ್ಗೆ ಪಡ್ಡೆ ಹೈಕ್ಲು ನಿದ್ದೆ ಕೆಡಿಸಿಕೊಂಡಿದ್ದಾರೆ. ಸದ್ಯ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕಿಲ್ಲರ್ ಹಾಟ್ ಫೋಟೋಗಳನ್ನು ಶೇರ್ ಮಾಡಿರುವ 'ಧಡಕ್' ಬೆಡಗಿಯ ಕಣ್ಣೋಟ ಹುಬ್ಬೇರಿಸುವಂತಿದೆ.
ಪ್ರತಿದಿನ ಡಿಫ್ರೆಂಟ್ ಶೈಲಿಯಲ್ಲಿ ನೆಟ್ಟಿಗರ ಹೃದಯಕ್ಕೆ ಲಗ್ಗೆ ಇಡುತ್ತಿರುವ ಜಾಹ್ನವಿ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಕ್ರಿಯೇಟ್ ಮಾಡುತ್ತಿದ್ದಾರೆ.
ಇತ್ತೀಚೆಗೆ ಅವರು ಹಂಚಿಕೊಂಡಿರುವ ಈ ಫೋಟೋಗಳನ್ನು ನೋಡಿ ನೆಟ್ಟಿಗರಂತೂ ಫುಲ್ ಫಿದಾ ಆಗಿದ್ದಾರೆ. ಚೆಲುವೆಯ ಆಕರ್ಷಕ ಕುಡಿನೋಟ ಸ್ವರ್ಗದಿಂದ ಊರ್ವಶಿ ಬಂದ್ಲಾ ಅಂತ ಪಡ್ಡೆಗಳು ಕನ್ಪ್ಯೂಸ್ ಆಗಿದ್ದಾರೆ.
ನಟನೆ ಮತ್ತು ನೋಟದಿಂದ ಅಭಿಮಾನಿಗಳ ಮನಸ್ಸು ಗೆದ್ದಿರುವ ಜಾಹ್ನವಿ ಧರಿಸಿರುವ ಸಾಂಪ್ರದಾಯಿಕ ಬ್ರೌನ್ ಲೆಹಂಗಾ ಫೋಟೋ 'ಬಾಂಬೆ ಗರ್ಲ್' ಸೌಂದರ್ಯವನ್ನು ಇನ್ನೂ ಹೆಚ್ಚಿಸಿದೆ.